ಬೆಂಗಳೂರು: ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನನ್ನನ್ನು ಸೋಲಿಸಲು ಷಡ್ಯಂತ್ರ ರೂಪಿಸಿವೆ. ಅದು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಗುಡುಗಿದ್ದಾರೆ. ನಗರದ ವಿಜಯಪುರ ಗಣಪತಿ ಪೆಂಡಾಲ್ ಮೈದಾನದಲ್ಲಿ ಏರ್ಪಡಿಸಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪಥ ವಿಶ್ವಾಸದ ನಡಿಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಾರಿ 75 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಗುರಿ ಹೊಂದಿದ್ದೇನೆ. ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಕನಕದಾಸರ ಹೆಸರು ಹೇಳುವ ಯೋಗ್ಯತೆ ಕಾಂಗ್ರೆಸ್ ಮುಖಂಡರಿಗೆ ಇಲ್ಲ. ಬಸವಣ್ಣ, ಕನಕದಾಸರು ಸಮಾಜ ಒಡೆಯುವ ಕೆಲಸ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಜಾತಿಗಳನ್ನು ಎತ್ತಿಕಟ್ಟಿ ವಿಷಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ನಗರಕ್ಕೆ ಬಂದಾಗ ಲೂಟಿ ರವಿ ಕೋಟಿ ರವಿ ಎಂದು ಜನರ ಮುಂದೆ ಹೇಳಿಹೋಗಿದ್ದಾರೆ. ಅವರದೇ ಅಧಿಕಾರ ಇದ್ದಾಗ ನಾನೇನಾದರೂ ಲೂಟಿ ಮಾಡಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ಕ್ಷೇತ್ರದ ಜನತೆ ಮುಂದೆ ಅಪಮಾನ ಮಾಡಿ ಹೋಗಿದ್ದಾರೆ ಎಂದರು. ರಾಜಕೀಯ ವಿರೋಧವಿದ್ದರೂ ದ್ವೇಷದ ರಾಜಕಾರಣ ನಾನು ಮಾಡಿಲ್ಲ. ಮೂರು ಬಾರಿ ನಾನು ಗೆದ್ದಾಗಲೂ ಕೂಡ ಜನರಿಗೆ ದ್ರೋಹ ಬಗೆದಿಲ್ಲ. ಜನರ ಶ್ರೇಯೋಭಿವೃದ್ಧಿಗೆ ಹೋರಾಟ ಮಾಡಿದ್ದೇನೆ. ಕಳೆದ ಐದು ವರ್ಷ ಶಾಸಕನಾಗಿ ನಾನೇನು ಮಾಡಿದ್ದೇನೆ ಎಂಬುದರ ಬಗ್ಗೆ ರಿಪೋರ್ಟ್ ಕಾರ್ಡ್ ಸದ್ಯದಲ್ಲೇ ಪ್ರತಿ ಮನೆಮನೆಗೂ ತಲುಪಿಸಲಿದ್ದೇನೆ ಎಂದರು. ಇತ್ತೀಚೆಗೆ ರಾಹುಲ್ಗಾಂಕಧಿ ನಗರಕ್ಕೆ ಬಂದಾಗ ನಮ್ಮಜ್ಜಿ ಇಂದಿರಾಗಾಂಧಿಗೆ ಪುನರ್ಜನ್ಮ ನೀಡಿದ ಚಿಕ್ಕಮಗಳೂರನ್ನು ಮರೆಯೋದಿಲ್ಲ ಎಂದರು. ಅಜ್ಜಿ ಹೊಡೆದ ಡೈಲಾಗ್ಅ್ನ್ನೇ ಮೊಮ್ಮಗ ಹೊಡೆದಿದ್ದಾರೆ ಎಂದು ರವಿ ಲೇವಡಿ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/03/30-BJP.jpghttp://bp9news.com/wp-content/uploads/2018/03/30-BJP-150x150.jpgPolitical Bureauಚಿಕ್ಕಮಗಳೂರುಪ್ರಮುಖರಾಜಕೀಯCongress - JDS can not be defeated !!! : CT Raviಬೆಂಗಳೂರು: ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನನ್ನನ್ನು ಸೋಲಿಸಲು ಷಡ್ಯಂತ್ರ ರೂಪಿಸಿವೆ. ಅದು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಗುಡುಗಿದ್ದಾರೆ. ನಗರದ ವಿಜಯಪುರ ಗಣಪತಿ ಪೆಂಡಾಲ್ ಮೈದಾನದಲ್ಲಿ ಏರ್ಪಡಿಸಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪಥ ವಿಶ್ವಾಸದ ನಡಿಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಾರಿ 75 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಗುರಿ ಹೊಂದಿದ್ದೇನೆ. ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಕನಕದಾಸರ ಹೆಸರು ಹೇಳುವ...Kannada News Portal