ಬೆಂಗಳೂರು : ವೀರ ಮದಕರಿ, ಒನಕೆ ಓಬವ್ವ ಇವರ ಜಯಂತಿಯನ್ನು ಮರೆತು ಕಾಂಗ್ರೆಸ್ ಪಕ್ಷ ಕೇವಲ ಓಟು ಪಡೆಯಲು ಸುಲ್ತಾನರ ಜಯಂತಿ ಆಚರಿಸಲು ಹೊರಟಿದೆ. ಕಾಂಗ್ರೆಸ್ ಇತಿಹಾಸವನ್ನು ತಿರುಚಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಲವು ಶತಮಾನಗಳ ಹಿಂದೆ ಮದಕರಿ ಹೇಗೆ ಹೈದರಾಲಿಯನ್ನು ಎದುರಿಸಿದರು. ಸಾಹಸ ಅಂದ್ರೆ ಏನು ಎಂಬುದನ್ನು ಆ ದಲಿತ ಮಹಿಳೆ ಒನಕೆ ಓಬವ್ವರಿಂದ ಕಲಿಯಬೇಕು. ಅತ್ಯಂತ ಕಡಿಮೆ ಸಾಧನಗಳಿಂದ ಎದುರಾಳಿಗಳನ್ನು ಹೇಗೆ ಎದುರಿಸಬಹುದು ಎಂದು ತೋರಿಸಿ ಕೊಟ್ಟ ಪ್ರೇರಣಾ ಶಕ್ತಿಗಳು ಈ ದುರ್ಗದ ಮಹಾತ್ಮರುಗಳು.

ಆದರೆ ಕಾಂಗ್ರೆಸ್ ಪಕ್ಷ ಕೇವಲ ಓಟು ಪಡೆಯಲು ಮಾತ್ರ ಇತಿಹಾಸವನ್ನು ತಿರುಚಲು ಮುಂದಾಗಿದೆ. ಇವರಿಗೆ ಯಾರ ಜಯಂತಿಯನ್ನು ನಡೆಸ ಬೇಕು ಅವರ ಜಯಂತಿ ನಡೆಸಲ್ಲ. ವೀರ ಮದಕರಿ, ಒಬವ್ವ ಇವರನ್ನು ಮರೆತು ಸುಲ್ತಾನರ ಜಯಂತಿ ಮಾಡಲು ಹೊರಟಿದ್ದಾರೆ. ಇದರೊಂದಿಗೆ ಕರ್ನಾಟಕ ಮತ್ತು ಚಿತ್ರದುರ್ಗಕ್ಕೆ ಅಪಮಾನ ಮಾಡಿದೆ. ಚಿತ್ರದುರ್ಗದ ಜನರ ಭಾವನೆಯ ಜೊತೆ ಆಟ ಹಾಡುತ್ತಿದೆ. ಚಿತ್ರದರ್ಗ ನಾಯಕ ಮತ್ತು ವೀರ ಮಹಿಳೆಯನ್ನು ಕೊಂದವರ ಜಯಂತಿ ಮಾಡಿ ನಿಮಗೆ ಅಪಮಾನ ಮಾಡಿದೆ. ಇದು ಅಕ್ಷಮ್ಯ ಅಪರಾಧ. ಇದನ್ನು ಯಾರು ಕ್ಷಮಿಸ ಬಾರದು ಎಂದು ಚಿತ್ರದುರ್ಗದ ಬೃಹತ್ ಸಮಾವೇಶದಲ್ಲಿ ಮೋದಿ ಗುಡುಗಿದ್ದಾರೆ.

ಕೋಟೆಯ ನಾಡು ಚಿತ್ರದುರ್ಗದ ಮಹಾ ಜನತೆಗೆ ನನ್ನ ನಮಸ್ಕಾರಗಳು. ವೀರ ಮದಕರಿನಾಯಕ, ಒನಕೆ ಒಬವ್ವರಿಗೆ ನನ್ನ ಅನಂತ ನಮಸ್ಕಾರಗಳು. ಮಾದಾರ ಚೆನ್ನಯ್ಯರವರನ್ನು ನೆನೆದ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿ ನೆರೆದಿದ್ದಾ ಸಾವಿರಾರು ಕಾರ್ಯಕರ್ತರಲ್ಲಿ ಹುಮ್ಮಸ್ಸು ದ್ವಿಗುಣಗೊಳಿಸುತ್ತಲೇ ಮಾತಿಗಿಳಿದ ಪ್ರಧಾನಿ ಮೋದಿಯವರು, ನಾನು ಇಲ್ಲಿ ಜನಸಾಗರವನ್ನೇ ನೋಡುತ್ತಿದ್ದೇನೆ, ಎರಡೂ ಗೇಟುಗಳಿಂದ ಸಾಗರದ ಅಲೆಗಳಂತೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಿಮ್ಮ ಪ್ರೀತಿ ಮತ್ತು ಉತ್ಸಾಹಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು.

ಈ ಭಾಗದಲ್ಲಿ 100 ವರ್ಷದ ಲೆಕ್ಕ ತೆಗೆದು ಕೊಂಡ್ರೆ, 70 ವರ್ಷ ಬರಗಾಲವೇ ಇರುತ್ತೆ. ಆದರೂ ಇಲ್ಲಿನ ರೈತರ ಸಾಧನೆ ಕಣನೀಯವಾದದ್ದು. ಶ್ಲಾಘನೀಯವೇ ಸರಿ ಎಂದರು. ತಮ್ಮ ಜೀವನದಲ್ಲಿ ದೇಶಕ್ಕಾಗಿ ಜೀವ ಕೊಟ್ಟ ಮಹಾನ್ ವ್ಯಕ್ತಿಗಳ ಜೀವನ ನಡೆಸಿದ ಸ್ಥಳ ಇದು. ಅದಕ್ಕಾಗಿಯೇ ಇಲ್ಲಿ ವೈಜ್ಞಾನಿಕ ಕೇಂದ್ರವನ್ನು ಆಧುನಿಕ ಕೇಂದ್ರವಾಗಿ ರೂಪುಗೊಳಿಸಲಾಗುತ್ತಿದೆ.
ಇಸ್ರೋ ಮತ್ತು ಇತರ ವೈಜ್ಞಾನಿಕ ಕೇಂದ್ರಗಳ ಅಂಗ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗುತ್ತದೆ. DRDO ಸಂಸ್ಥೆ ಹೊಸ ಹೊಸ ತಂತ್ರಜ್ಞಾನಗಳನ್ನು ಉತ್ಪಾದನೆ ಮಾಡುತ್ತಿದೆ. 2 ನೇ ಚಂದ್ರಯಾನಕ್ಕೆ ಇದೇ ಚಿತ್ರದುರ್ಗ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.
ಹಲವು ಶತಮಾನಗಳ ಹಿಂದೆ ಮದಕರಿ ಹೇಗೆ ಹೈದರಾಲಿಯನ್ನು ಎದುರಿಸಿದರು ಎಂಬುದು ಕಥೆಗಳ ಮೂಲಕ ನಾವು ತಿಳಿದಿದ್ದೇವೆ. ಆ ದಲಿತ ಮಹಿಳೆ ಒನಕೆ ಓಬವ್ವ ಅವರಿಗೂ ಕೂಡ ನಾನು ಈ ಮೂಲಕ ಪ್ರಣಾಮ ಸಲ್ಲಿಸುತ್ತೇನೆ. ಸಾಹಸ ಅಂದ್ರೆ ಏನು ಎಂಬುದನ್ನು ಆ ದಲಿತ ಮಹಿಳೆಯಿಂದ ಕಲಿಯಬೇಕು. ಅತ್ಯಂತ ಕಡಿಮೆ ಸಾಧನಗಳಿಂದ ಎದುರಾಳಿಗಳನ್ನು ಹೇಗೆ ಓಡಿಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ, ನಾವು ಅದನ್ನು ಪ್ರೇರಣೆಯಾಗಿ ಪಡೆಯ ಬೇಕಿದೆ.

ಆದರೆ ಕಾಂಗ್ರೆಸ್ ಪಕ್ಷ ಕೇವಲ ಓಟು ಪಡೆಯಲು ಮಾತ್ರ ಇತಿಹಾಸವನ್ನು ತಿರುಚಲು ಮುಂದಾಗಿದೆ. ಇವರಿಗೆ ಯಾರ ಜಯಂತಿಯನ್ನು ನಡೆಸ ಬೇಕು ಅವರ ಜಯಂತಿ ನಡೆಸಲ್ಲ. ವೀರ ಮದಕರಿ, ಒಬವ್ವ ಇವರನ್ನು ಮರೆತು ಸುಲ್ತಾನರ ಜಯಂತಿ ಮಾಡಲು ಹೊರಟಿದ್ದಾರೆ. ಇದರೊಂದಿಗೆ ಕರ್ನಾಟಕ ಮತ್ತು ಚಿತ್ರದುರ್ಗಕ್ಕೆ ಅಪಮಾನ ಮಾಡಿದೆ. ಚಿತ್ರದುರ್ಗದ ಜನರ ಭಾವನೆಯ ಜೊತೆ ಆಟ ಹಾಡುತ್ತಿದೆ. ಚಿತ್ರದರ್ಗ ನಾಯಕ ಮತ್ತು ವೀರ ಮಹಿಳೆಯನ್ನು ಕೊಂದವರ ಜಯಂತಿ ಮಾಡಿ ನಿಮಗೆ ಅಪಮಾನ ಮಾಡಿದೆ. ಇದು ಅಕ್ಷಮ್ಯ ಅಪರಾಧ. ಇದನ್ನು ಯಾರು ಕ್ಷಮಿಸ ಬೇರದು ಎಂದು ಗುಡುಗಿದರು.

ಈ ಭೂಮಿಯ ಸುಪುತ್ರ ಎಸ್ ನಿಜಲಿಂಗಪ್ಪ ಅವರನ್ನು ಯಾವ ರೀತಿ ಅವಮಾನ ಮಾಡಿದ್ರು ಅನ್ನೊದನ್ನ ಇಲ್ಲಿನ ಯುವಕರು ತಿಳಿದು ಕೊಳ್ಳಲೇಬೇಕು. ಇಂತ ಮಹಾನ್ ನೇತಾರನ್ನು ಕಾಂಗ್ರೆಸ್ ಸೈಡ್ ಲೈನ್ ಮಾಡಿದರು. ಇವರ ತಪ್ಪು ಏನು ಗೊತ್ತಾ? ನೆಹರು ಆರ್ಥಿಕ ನೀತಿ ಬಗ್ಗೆ ಚಕ್ಕಾರ ಎತ್ತಿದ್ದಕ್ಕೆ ಈ ರೀತಿ ಮಾಡಿದರು. ನಿಜಲಿಂಗಪ್ಪನವರು ಬಡವರ ಪರ, ದೇಶದ ಪರ, ರೈತರ ನೇತಾರ… ದಲಿತ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅಂತ ನಾಯಕರನ್ನು ಬೆಳೆಯಲು ಬಿಡಲಿಲ್ಲ.

ಅಷ್ಟೇ ಅಲ್ಲಾ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೂ ಮೋಸ ಮಾಡಿದರು. ಅಂಬೇಡ್ಕರ್ ಅವರು ಭೂಮಿ ಪುತ್ರರ ಪರ ಇದ್ದರು. ಅದಕ್ಕಾಗಿಯೇ ಕಾಂಗ್ರೆಸ್ ಅವರಿಗೂ ಅಪಮಾನ ಮಾಡಿತು. ಭಾರತ ರತ್ನ ಪ್ರಶಸ್ತಿ ಕೊಡಲು ಅಟಲ್ ಬಿಹಾರಿ ವಾಜಪೇಯಿ ಬರಬೇಕಾಯಿತು. ಅವರು ಕೇವಲ ಅವರ ಕುಟುಂಬದ ಸದಸ್ಯರಿಗೆ ಆ ರತ್ನವನ್ನು ಕೊಟ್ಟಿಕೊಂಡರು ಅಷ್ಟೇ ಎಂದು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು. ಈ ಕಾಂಗ್ರೆಸ್ ಪಕ್ಷ ಕೇವಲ ಒಂದು ಕುಟುಂಬದ ಆಸ್ತಿಯಾಗಿದೆ.
ನೆಹರು ವಂಶದ ಪುತ್ಥಳಿಗಳು, ಆಸ್ತಿಗಳು ಎಲ್ಲಿ ನೋಡಿದರೂ ಸಿಗುತ್ತೆ ಆದರೆ ಬಾಬಾ ಸಾಹೇಬರ ಸ್ಥಿತಿ… ಇದು ಕಾಂಗ್ರೆಸ್ ಮಾಡಿರುವ ಅಪಮಾನ ಎಂದು ಗುಡುಗಿದಡು. ಆದರೆ ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ದೇಶ ವಿದೇಶಗಳಲ್ಲಿಯೂ ಡಾ. ಬಾಬಾ ಸೇಹೇಬ ಅಂಬೇಡ್ಕರ್ 125 ನೇ ಜನ್ಮದಿನವನ್ನು ಆಚರಣೆ ಮಾಡುವಂತೆ ಮಾಡಿದ್ದೇವೆ. ಪಂಚ ಸ್ಥಳಗಳ ಸುಕ್ಷೇತ್ರಗಳನ್ನು ಸ್ಥಾಪನೆ ಮಾಡಿದ್ದೇವೆ.

ಕೇಂದ್ರದಲ್ಲಿ ಭಾಜಪಗೆ ಅಧಿಕಾರ ಸಿಗುತ್ತಿದ್ದಂತೆ ನಾವು ಯಾವುದೇ ಜಾತಿ ಧರ್ಮ ನೋಡದೇ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿ ನಾವು ಏನು ಎಂಬುದನ್ನು ತೋರಿಸಿದ್ದೇವೆ. ಹಾಗೆ ನಾನು ಪ್ರಧಾನಿ ಆದೆ. ರಾಮನಾಥ್ ಗೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿ ಬಡವರು ಈ ದೇಶದ ಉನ್ನತ ಸ್ಥಾಳಕ್ಕೆ ಹೋಗ ಬಹುದು ಎಂಬುದನ್ನು ಮತ್ತೆ ತೋರಿಸಿ ಕೊಟ್ಟಿದ್ದೇವೆ. ದಲಿತರಿಗೆ ಅವಕಾಶ ಮಾಡಿಕೊಟ್ಟ ಮೊದಲ ಪಕ್ಷ ನಮ್ಮ ಭಾರತೀಯ ಜನತಾ ಪಕ್ಷ.

ಹಳ್ಳಿ ಹಳ್ಳಿಗಳಲಿ ನಾವು ಈ ಹಿಂದುಳಿದ ವರ್ಗದ ಜನರಿಗೆ ಆಗುತ್ತಿದ್ದ ನೋವು ಮತ್ತು ಅಪಮಾನಗಳನ್ನು ನಾವು ಕಣ್ಣಾರೆ ಕಂಡು ಬಂದವರು. ಅದಕ್ಕಾಗಿಯೇ ನಾನು ಈಗ ದಲಿತರಿಗೆ ಅಪಮಾನ ಮಾಡಿದವರ ವಿರುದ್ಧ ಮತ್ತಷ್ಟು ಕಾನೂನುನ್ನು ಗಟ್ಟಿಗೊಳಿಸಿದ್ದೇವೆ. ಇದು ನಮ್ಮ ಮತ್ತು ಕಾಂಗ್ರೆಸ್ ನಡುವಿನ ದಲಿತರ ಮೇಲಿನ ಪ್ರೀತಿ. ಏಕೆಂದ್ರೆ ನಾನು ಸ್ವತಃ ಅನುಭವಿಸಿದ್ದೇನೆ. ಅದಕ್ಕಾಗಿಯೇ ಇಷ್ಟು ಕಟ್ಟು ನಿಟ್ಟಾದ ಕಾನೂನು ರೂಪಿಸಲು ನಮಗೆ ಸಾಧ್ಯವಾಯಿತು ಎಂದು ಮೋದಿ ಚಿತ್ರದುರ್ಗದಲ್ಲಿ ದಲಿತ ಅಭಿವೃದ್ಧಿಯೇ ನಮ್ಮ  ಧ್ಯೇಯ ಎಂದು ಅವರು, ದಿವ್ಯಂಗರ ಬಗ್ಗೆಯೂ ನಾವು ಅನೇಕ ಯೋಜನೆಗಳನ್ನು , ಸವಲತ್ತುಗಳನ್ನು ನೀಡಿದೆ.

ಕೆಲಸ ಮಾಡುವ ಸರ್ಕಾರ ಹೇಗಿರುತ್ತೇ ಮತ್ತು ಬರೀ ಘೋಷಣೆ ಮಾಡುವ ಸರ್ಕಾರ ಹೇಗಿರುತ್ತೆ ಎಂದು ನಿಮಗೆ ತಿಳಿಸುತ್ತೇನೆ, ನೀವು ನಿಜಕ್ಕೂ ಗಾಬರಿಯಾಗಬಹುದು.

ದಿವ್ಯಾಂಗದವರಿಗೆ ಹಲವು ಉಪಕರಣಗಳು ನೀಡುವಂತಹ ಶಿಬಿರಗಳು ಅನೇಕ ಕ್ಯಾಂಪ್ಗಳು ನಡೆಯುತ್ತಿರುತ್ತದೆ. 92 ರಿಂದ 2014 57 ಶಿಬಿರಗಳು ನಡೆದಿದೆ. ಆದರೆ ನಾವು ಅಧಿಕಾರಕ್ಕೆ ಬರುತ್ತದ್ದಂತೆ 5000 ಕ್ಯಾಂಪ್​ಗಳನ್ನು ನಾವು ಈಗಾಗಲೇ ಮಾಡಿ ದಿವ್ಯಾಂಗದವರಿಗೆ ಸ್ಪಂಧಿಸಿದ್ದೇವೆ. ಇದು ಭಾರತೀಯ ಜನತಾ ಪಕ್ಷದ ಸರ್ಕಾರದ ಕೆಲಸ.

ಮಾದಾರ ಚೆನ್ನಯ್ಯ ವಸತಿ ಸಮುಚ್ಚಯ ಯೋಜನೆ ನೀಡುವುದಾಗಿ ರಾಜ್ಯ ಬಿಜೆಪಿ ತಮ್ಮ ಪ್ರಣಾಳಿಕೆ ನೀಡಿದೆ. ನಿಮಗೆ ಗೊತ್ತಿದೆ. ಗಂಗಾ ಕಲ್ಯಾಣದ ಹೆಸರಿನಲ್ಲಿ ಕಾಂಗ್ರೆಸ್ ಸಚಿವರು ಒಬ್ಬರು ತಮ್ಮ ಕಲ್ಯಾಣ ಮಾತ್ರ ಮಾಡಿಕೊಂಡಿದ್ದು ಇಲ್ಲಿನ ಚಿಕ್ಕ ಚಿಕ್ಕ ಮಕ್ಕಳಿಗೂ ಗೊತ್ತಿದೆ. ಹೆಚ್ಚು ಬರಗಾಲ ಇರುವ ಈ ಜಿಲ್ಲೆಯಲ್ಲಿ ಎಂತ ಸಚಿವ ಇದ್ದಾರೆ ಅಂದ್ರೆ ಅವರ ಭಾಗದಲ್ಲಿ ಮಾತ್ರ ಕೊಳವೆ ಭಾವಿಗಳನ್ನು ಮಾತ್ರ ಮಾಡಿಕೊಂಡು ನಿಮಗೆಲ್ಲ ಮೋಸ ಮಾಡಿದ್ದಾರೆ. ಈ ಪಾಪ ಕಾರ್ಯವನ್ನು ನೀವು ಅಂದ್ರೆ ಚಿತ್ರದುರ್ಗದ ಜನಕ್ಷಮಿಸ ಬಾರದು ಎಂದು ಗುಡುಗಿದರು.

ಹೆಣ್ಣುಮಕ್ಕಳ ವಸತಿ ಶಾಲೆಯ ಹಾಸಿಗೆ , ಬೆಡಶೀಟು ನೀಡುವಲ್ಲಿಯೂ ಬೃಹತ್ ಹಗರಣ ಮಾಡಿದ್ದಾರೆ. ನಾಚಿಕೆ ಆಗಬೇಕು ಇವರನ್ನು ಕ್ಷಮಿಸುತ್ತೀರಾ ಎಂದ ಅವರು. ನಾನು ಕಾಂಗ್ರೆಸ್ನವರಿಗೆ ಏಕೆ ಆಸಿಗೆ ಮೆಲೆ ಇಷ್ಟು ಪ್ರೀತಿ ಎಂದು ಕೇಳಿದೆ. ಅದಕ್ಕೆ ನನಗೆ ಹೇಳಿದರು ಹಾಸಿಗೆ ಮೇಲೆ ಕಾಂಗ್ರೆಸ್ಗೆ ಏಕೆ ಇಷ್ಟ ಅಂದ್ರೆ ಅಲ್ಲಿ ಹಣಗಳನ್ನು ತುಂಬಿ ಇಡಬಹುದಂತೆ ಆ ಕಾರಣವಾಗಿ ಅವರಿಗೆ ಹಾಸಿಗೆ ಅಂದ್ರೆ ಇಷ್ಟ ಎಂದರು. ಈ ಕಾಂಗ್ರೆಸ್ ಪಕ್ಷ ಹೃದಯ ವಂತ ಪಕ್ಷ ಅಲ್ಲಾ, ವ್ಯವಹಾರ ಮಾಡುವ ಪಕ್ಷ ಎಂದು ವ್ಯಂಗ್ಯವಾಡಿದರು.

ಇನ್ನು ಇಲ್ಲಿನ ಮುಖ್ಯಮಂತ್ರಿ ಹೇಗಿದ್ದಾರೆ ಅಂದ್ರೆ, ಅವರ ಸೂಟ್ಗೇಸ್ ಒಳಗೆ ಕ್ಯಾರೇಕ್ಟರ್ ಸರ್ಟಿಫಿಕೇಟ್ ಇಟ್ಟು ಕೊಂಡಿರುತ್ತಾರೆ. ಅವರ ಸಂಪುಟದ ಸದಸ್ಯರು ಆರೋಪಕ್ಕೆ ಹಗರಣಕ್ಕೆ ಸಿಲುಗಿದರೆ ಆ ಸೂಟ್​ಕೇಸ್​ ಒಳಗೆ ಇರುವ ಕ್ಯಾರೇಕ್ಟರ್ ಸರ್ಟಿಫಿಕೇಟ್ ತೆಗೆದು ಇವರು ಒಳ್ಳೆಯವರು ಅಥವಾ ಕ್ಲೀನ್ ಚೀಟ್ ನೀಡಿ ಮುಂದೆ ಹೋಗಿ ಬಿಡುತ್ತಾರೆ. ಜನರ –ಕಾನೂನಿನ ಆಶಯವನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ಇಂತ ಕ್ಲೀನ್ ಚೀಟ್ ಡೀಲ್ ಕೋರರನ್ನು ನೀವು ಕ್ಲೀನ್ ಸ್ವೀಪ್ ಮಾಡಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಿ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಾಕ್ಷಿಯಾಗ ಬೇಕು ಎಂದು ನೆರೆದಿದ್ದವರ ಚಪಾಳೆಗಿಟ್ಟಿಸಿದರು.

ಈ ಭಾಗದ ರೈತರ ಪರಿಶ್ರಮ ಕಂಡು ಕೇಂದ್ರ ಸರ್ಕಾರ ನಿಮ್ಮ ಜೊತೆ ನಿಂತೆದೆ. ನಿಮ್ಮ ಬಾಳೆಹಣ್ಣು, ಅಂಜೂರ ವಿವಿಧ ಬೆಳೆಗಳನ್ನು ಸಂಗ್ರಹಿಸುವ ಗೋದಾಮುಗಳನ್ನು ನಿನಗಾಗಿ ನೀಡುತ್ತಿದೆ. ಹಿಂದೆ ಯಡಿಯೂರಪ್ಪ ನೀರಾವರಿ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲು ಮುಂದಾಗಿದ್ದರು. ಈ ಭಾರಿ ತಾವು ಜಿಲ್ಲೆಯ ಎಲ್ಲಾಅಭ್ಯರ್ಥಿಗಳನ್ನು ಗೆಲ್ಲಿಸಿ, ಸಂಪೂರ್ಣ ಬಲದ ಸರ್ಕಾರವನ್ನು ರಚಿಸಲು ಅವಕಾಶ ಮಾಡಿಕೊಡಿ ಎಂದ ಅವರು, ನೆರೆದಿದ್ದವರಲ್ಲಿ ಹೇಳಿ ನೀವೆ ನೀವು ಕಾಂಗ್ರೆಸ್ಗೆ ವಿದಾಯ ಕೊಡುತ್ತಿರಾ, ಮೇ 12 ಕ್ಕೆ ಮನೆ ಮನೆಗೆ ತೆರಳಿ ಮತ ಹಾಕುವಂತೆ ಮಾಡುತ್ತಿರಾ ಎಂದು ಕೂಗಿ ಕೂಗಿ ನನಗೆ ಮಾತು ಕೊಡಿ, ಸರ್ಕಾರ ಬದಲಿ – ಬಿಜೆಪಿ ಗೆಲ್ಲಿಸಿ, ಸರ್ಕಾರ ಬದಲಿ – ಬಿಜೆಪಿ ಗೆಲ್ಲಿಸಿ ಎಂಬ ಘೋಷಣೆಯೊಂದಿಗೆ ತಮ್ಮ ಚಿತ್ರದುರ್ಗದ ಭಾಷಣಕ್ಕೆ ವಿರಾಮ ಹೇಳಿದರು.

Please follow and like us:
0
http://bp9news.com/wp-content/uploads/2018/05/683862-modi-rally-reuters.jpghttp://bp9news.com/wp-content/uploads/2018/05/683862-modi-rally-reuters-150x150.jpgPolitical Bureauಚಿತ್ರದುರ್ಗಪ್ರಮುಖರಾಜಕೀಯCongress quit Congress for vote,Sultan Jayanthi !!! : Modi in Chitradurgaಬೆಂಗಳೂರು : ವೀರ ಮದಕರಿ, ಒನಕೆ ಓಬವ್ವ ಇವರ ಜಯಂತಿಯನ್ನು ಮರೆತು ಕಾಂಗ್ರೆಸ್ ಪಕ್ಷ ಕೇವಲ ಓಟು ಪಡೆಯಲು ಸುಲ್ತಾನರ ಜಯಂತಿ ಆಚರಿಸಲು ಹೊರಟಿದೆ. ಕಾಂಗ್ರೆಸ್ ಇತಿಹಾಸವನ್ನು ತಿರುಚಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಲವು ಶತಮಾನಗಳ ಹಿಂದೆ ಮದಕರಿ ಹೇಗೆ ಹೈದರಾಲಿಯನ್ನು ಎದುರಿಸಿದರು. ಸಾಹಸ ಅಂದ್ರೆ ಏನು ಎಂಬುದನ್ನು ಆ ದಲಿತ ಮಹಿಳೆ ಒನಕೆ ಓಬವ್ವರಿಂದ ಕಲಿಯಬೇಕು. ಅತ್ಯಂತ ಕಡಿಮೆ...Kannada News Portal