ಬೆಂಗಳೂರು :  ಈ ಅತಂತ್ರ  ರಾಜಕೀಯ ಬಗ್ಗೆ ಜನ  ಸಿಕ್ಕಾಪಟ್ಟೆ ಕನ್​ಫ್ಯೂಸ್​ ಆಗಿಬಿಟ್ಟಿದ್ದಾರೆ.  ಓಟ್​ ಹಾಕಿದ ಮತದಾರರೇ ಬೇಸತ್ತು ಹೋಗಿದ್ದಾರೆ. ಆದರೆ ಈ ಬಾರಿಯ ವಿಧಾನಸಭೆ ಚುನಾವಣೆ  ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಂಗೆಲ್ಲಾ ಟ್ರೋಲ್​  ಆಗಿ ಮಜಾ ಕೊಡ್ತಿರೋದಂತೂ ಸತ್ಯ. ಅಂದಹಾಗೇ  ನೆಟ್ಟಿಗರು ಇಂದಿನ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು  ಮಹಾಭಾರತದ  ಸೀನ್​ವೊಂದಕ್ಕೆ ಸಿಂಕ್​ ಮಾಡಿದ್ದಾರೆ. ಈ  ಪರಿಸ್ಥಿತಿ ನೋಡಿದ್ರೆ ಮಹಾಭಾರತ  ಈ ಸೀನ್​ ಒಂದು ನೆನಪಾಗುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ..  ಇದನ್ನು ಶೇರ್​ ಮಾಡಿ ಇದೇ  ನಮ್ಮ  ರಾಜ್ಯಪಾಲರ ಪರಿಸ್ಥಿತಿ ಅಂತಾ ಕಮೆಂಟ್​ ಮಾಡ್ತಿದ್ದಾರೆ.

ಕುರುಕ್ಷೇತ್ರ  ಯುದ್ಧ ನಡೆಯುವ  ಮುನ್ನ ಸೈನಿಕರನ್ನು , ವೀರಾಧಿ ವೀರರನ್ನು  ಸೆಳೆಯಲು  ಕೌರವರು ಮತ್ತು ಪಾಂಡವರು ಯತ್ನಿಸುತ್ತಿರುವ ಸನ್ನಿವೇಶ ಅದು. ಇಂಥ  ಸಂದರ್ಭದಲ್ಲಿ   ಕೃಷ್ಣ  ನಮ್ಮ ಜೊತೆ ಇರಬೇಕೇಂದು ಎರಡೂ ಪಕ್ಷದವರೂ ಮಾಧವನ ಮೊರೆ ಹೋಗುತ್ತಾರೆ. ಕೃಷ್ಣ ನಮ್ಮ ಪರ ಇರಬೇಕೆಂದು ಎರಡೂ ಕಡೆಯವರು ಕೃಷ್ಣನಲ್ಲಿಗೆ ಹೋಗಲು ಸಿದ್ಧವಾಗುತ್ತಾರೆ. ಆದರೆ  ಮೊದಲು   ದುರ್ಯೋಧನ  ಮೊದಲೇ ತಾನೇ ಕೃಷ್ಣನ ಬಳಿ ಹೋಗುತ್ತಾನೆ. ಆ ಸಮಯದಲ್ಲಿ ಕೃಷ್ಣ ಮಲಗಿದ್ದು ಆತನಿಗೆ ನಿದ್ರಾ ಭಂಗಮಾಡಬಾರದೆಂದು  ಕೌರವೇಶ  ದುಯೋರ್ಧನ , ಕೃಷ್ಣ  ಏಳುವ ತನಕ  ಆತನ ತಲೆಯ ಪಕ್ಕದಲ್ಲಿಯೇ  ಕೂರುತ್ತಾನೆ.

ಇನ್ನು ಪಾಂಡವರು ಕೃಷ್ಣನ ಪ್ರಿಯ ಅರ್ಜುನನನ್ನು ಕೃಷ್ಣನ ಮನವೊಲಿಸಲೆಂದು ಕಳುಹಿಸುತ್ತಾರೆ. ಅರ್ಜುನ ಸಹ ಕೃಷ್ಣ ಮಲಗಿರುವುದನ್ನು ನೋಡಿ ಆತನಿಗೆ ಡಿಸ್ಟರ್ಬ್​ ಮಾಡಬಾರದೆಂದು ಆತನ  ಪಾದದ ಬಳಿಯೇ ಕೂರುತ್ತಾನೆ. ಆದರೆ ನಿದ್ದೆಯಿಂದ ಎದ್ದ ಕೃಷ್ಣ ಮೊದಲು ಅರ್ಜುನನ್ನು ನೋಡಿ, ಯಾವಾಗ ಬಂದೆ, ಹೇಗಿದ್ದೀಯಾ  ಎಂದು ಕೇಳುತ್ತಾನೆ. ಆದರೆ ದುರ್ಯೋದನಿಗೆ ಕೋಪ ಬಂದು ಕೃಷ್ಣ, ನಾನು ಆಗಲೇ ಬಂದೆ, ಅರ್ಜುನನಗಿಂತಲೂ ನಾನೇ ಬಂದಿದ್ದು ಎಂದು ಹೇಳುತ್ತಾನೆ.   ಆದರೆ ಕೃಷ್ಣ ಮಾತ್ರ ನನ್ನ ಕಣ್ಣಿಗೆ  ಕಂಡಿದ್ದು  ಅರ್ಜುನ ಎಂದು  ಹೇಳುತ್ತಾನೆ. ಆದರೆ ಇದಕ್ಕೆ ಒಪ್ಪದ ರ್ಯೋಧನ  ವಾದಕ್ಕೆ ಇಳಿಯುತ್ತಾನೆ. ವಾದ-ವಿವಾದ ಆಲಿಸಿದ ಕೃಷ್ಣ ತನ್ನೆಲ್ಲಾ ಸೈನ್ಯವನ್ನು ಕೌರವರಿಗೆ ಒಪ್ಪಿಗೆ ತಾನೂ ಮಾತ್ರ  ಪಾಂಡವರ ಪರ ನಿಲ್ಲುತ್ತಾನೆ.

ಆದರೆ  ಪಾಂಡವರೇ ಗೆಲ್ಲುವಂತೇ  ನೋಡಿಕೊಂಡಿದ್ದು,  ಕೃಷ್ಣ ನ ಬುದ್ಧಿವಂತಿಕೆ. ಆ ಸನ್ನಿವೇಶವನ್ನು  ನೆನಪಿಸುತ್ತಿದೆ. ಈಗಿನ ರಾಜಕೀಯ ಪರಿಸ್ಥಿತಿ. ಇಲ್ಲಿ ಪಾಂಡವರನ್ನು ಬಿಜೆಪಿಗೆ ವೋಲಿಸಿ , ಜೆಡಿಎಸ್​ ಮೈತ್ರಿಕೂಟವನ್ನು ಕೌರವರಿಗೆ ವೋಲಿಸಿ  ಟ್ವೀಟ್​  ಮಾಡುತ್ತಿದ್ದಾರೆ. ರಾಜ್ಯಪಾಲರು ಇಲ್ಲಿ ಕೃಷ್ಣನ ಪಾತ್ರ ವಹಿಸಲು ಸಾಧ್ಯವಾಗುವುದಿಲ್ಲ ಅನ್ನೋದು ಮಾತ್ರ ಸತ್ಯ.

Please follow and like us:
0
http://bp9news.com/wp-content/uploads/2018/05/krishna.jpghttp://bp9news.com/wp-content/uploads/2018/05/krishna-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು :  ಈ ಅತಂತ್ರ  ರಾಜಕೀಯ ಬಗ್ಗೆ ಜನ  ಸಿಕ್ಕಾಪಟ್ಟೆ ಕನ್​ಫ್ಯೂಸ್​ ಆಗಿಬಿಟ್ಟಿದ್ದಾರೆ.  ಓಟ್​ ಹಾಕಿದ ಮತದಾರರೇ ಬೇಸತ್ತು ಹೋಗಿದ್ದಾರೆ. ಆದರೆ ಈ ಬಾರಿಯ ವಿಧಾನಸಭೆ ಚುನಾವಣೆ  ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಂಗೆಲ್ಲಾ ಟ್ರೋಲ್​  ಆಗಿ ಮಜಾ ಕೊಡ್ತಿರೋದಂತೂ ಸತ್ಯ. ಅಂದಹಾಗೇ  ನೆಟ್ಟಿಗರು ಇಂದಿನ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು  ಮಹಾಭಾರತದ  ಸೀನ್​ವೊಂದಕ್ಕೆ ಸಿಂಕ್​ ಮಾಡಿದ್ದಾರೆ. ಈ  ಪರಿಸ್ಥಿತಿ ನೋಡಿದ್ರೆ ಮಹಾಭಾರತ  ಈ ಸೀನ್​ ಒಂದು ನೆನಪಾಗುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ.. ...Kannada News Portal