ಮೇಷ : ಇಂದು ನೀವು ದಣಿಯುತ್ತೀರಿ ಮತ್ತು ಸಣ್ಣ ವಿಷಯಗಳಿಗೆ ಅಸಮಾಧಾನ ಹೊಂದುವ ಸಾಧ್ಯತೆ ಬಹಳವಾಗಿರುತ್ತದೆ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ನಿಮ್ಮ ಪತ್ನಿಯ ಸಾಧನೆಯನ್ನು ಶ್ಲಾಘಿಸಿ ಮತ್ತು ಅವರ ಯಶಸ್ಸು ಮತ್ತು ಉತ್ತಮ ಭವಿಷ್ಯವನ್ನು ಆನಂದಿಸಿ. ನಿಮ್ಮ ಹೊಗಳಿಕೆಯಲ್ಲಿ ಉದಾರ ಮತ್ತು ಪ್ರಾಮಾಣಿಕವಾಗಿರಿ. ಪ್ರೀತಿ ನಿಮಗಾಗಿ ಗಾಳಿಯಲ್ಲಿದೆ. ಸುತ್ತಲೂ ನೋಡಿ ಎಲ್ಲವೂ ಗುಲಾಬಿಯಾಗಿದೆ. ಸಮಸ್ಯೆಗಳನ್ನು ಹತ್ತಿಕ್ಕುವ ಮನಸ್ಸಿರುವವರೆಗೂ ಯಾವುದೂ ಅಸಾಧ್ಯವಲ್ಲ. ಇಂದು, ನಿಮ್ಮ ಸಂಗಾತಿಯ ಮುಗ್ಧ ನಡವಳಿಕೆ ನಿಮ್ಮ ದಿನವನ್ನು ಅಸಾಧಾರಣವಾಗಿಸುತ್ತದೆ!

 

 

ವೃಷಭ : ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ಇಂದು ನೀವು ನಿಮ್ಮ ಸುತ್ತಲಿರುವವರ ವರ್ತನೆಗಳಿಂದ ಸ್ವಲ್ಪ ಕಿರಿಕಿರಿಗೊಳಗಾಗುತ್ತೀರಿ. ನಿಮ್ಮ ಕನಸುಗಳು ಹಾಗೂ ವಾಸ್ತವವು ಪ್ರೀತಿಯ ಭಾವಪರವಶತೆಯಲ್ಲಿ ಇಂದು ಸೇರಿಹೋಗುತ್ತವೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ಇಂದು, ನಿಮ್ಮ ಜೀವನ ಸಂಗಾತಿ ಸಕ್ಕರೆಗಿಂತ ಸಿಹಿಯಾಗಿದ್ದಾರೆಂದು ನಿಮಗೆ ಅರಿವಾಗುತ್ತದೆ.

 

 

 

ಮಿಥುನ: ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ. ಸ್ನೇಹಿತರೊಂದಿಗೆ ಸಂಜೆ ಆನಂದ ಹಾಗೂ ಕೆಲವು ರಜೆಯ ಯೋಜನೆಗಳಿಗೂ ಉತ್ತಮವಾಗಿರುತ್ತದೆ. ಇಂದು ನೀವು ನಿಮ್ಮ ಸಂಗಾತಿಯ ಹೃದಯ ಬಡಿತಗಳ ಜೊತೆಗಿರುತ್ತೀರಿ. ಹೌದು, ಇದು ನೀವು ಪ್ರೀತಿಯಲ್ಲಿದ್ದೀರಿ ಎನ್ನುವ ಸಂಕೇತವಾಗಿದೆ! ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ಪರಿಸ್ಥಿತಿಗಳು ನಿಮ್ಮ ಪರವಾಗಿರಬಹುದು.

 

 

ಕರ್ಕ: ನಿಮ್ಮನ್ನು ನೀವೇ ನೋಡಿಕೊಳ್ಳುವ ಬಯಕೆಗೆ ಇತರರ ಅಗತ್ಯಗಳು ಕಡಿವಾಣ ಹಾಕುತ್ತವೆ. ನಿಮ್ಮ ಭಾವನೆಗಳನ್ನು ತಡೆಹಿಡಿಯಬೇಡಿ ಹಾಗೂ ವಿಶ್ರಾಂತಿ ಪಡೆಯುವ ಸಲುವಾಗಿ ನೀವು ಇಷ್ಟಪಡುವುದನ್ನೇನಾದರೂ ಮಾಡಿ. ನಿಮ್ಮ ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ಕುಟುಂಬದವರು, ಮಕ್ಕಳು ಮತ್ತು ಸ್ನೇಹಿತರೊಂದಿಗೆ ಕಳೆದ ಸಮಯ ನಿಮ್ಮ ಚೈತನ್ಯವನ್ನು ಮರಳಿ ನೀಡಲು ಮುಕ್ತವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ನಿಮ್ಮ ಜೀವನ ಸಂಗಾತಿ ಕೆಲವು ಅಚ್ಚರಿಗಳ ಜೊತೆ ನಿಮ್ಮ ಕೆಟ್ಟ ಮನಸ್ಥಿತಿಯನ್ನು ಸರಿಪಡಿಸುತ್ತಾರೆ.

 

ಸಿಂಹ : ಮನೆಯಲ್ಲಿ ಕೆಲಸ ಮಾಡುವಾಗ ವಿಶೇಷ ಎಚ್ಚರ ವಹಿಸಿ. ಮನೆ ಬಳಕೆಯ ವಸ್ತುಗಳ ಯಾವುದೇ ಅಸಡ್ಡೆಯ ಬಳಕೆ ನಿಮಗೆ ಸಮಸ್ಯೆ ಉಂಟುಮಾಡಬಹುದು. ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಖರೀದಿಗಳನ್ನು ಮಾಡುವುದನ್ನು ಅನುಕೂಲಕರವಾಗಿಸುತ್ತದೆ. ಇತರರಿಗೆ ಮುಜುಗರ ಉಂಟುಮಾಡಬೇಡಿ ಮತ್ತು ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ. ಪ್ರಣಯ ಸಂಬಂಧಗಳಿಗೆ ಇಂದು ಹಿನ್ನೆಡೆಯುಂಟಾಗಬಹುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಸಾಮರ್ಥ್ಯ ನಿಮಗೆ ಗೌರವ ತರುತ್ತದೆ. ನೀವು ಯಾರಾದ್ದಾದರೂ ಜೊತೆಗಿದ್ದಾಗ, ಜಗಳಗಳು ಅನಿವಾರ್ಯ. ನೀವು ನಿಮ್ಮ ಸಂಗಾತಿಯ ಜೊತೆ ವಾದಕ್ಕೆ ಬೀಳಬಹುದು.

 

 

ಕನ್ಯಾ : ಇಂದು ನೀವು ಆರಾಮವಾಗಿರಬೇಕು ಹಾಗೂ ನಿಕಟ ಸ್ನೇಹಿತರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಸಂತೋಷವಾಗಿರಿಸಲು ಪ್ರಯತ್ನಿಸಬೇಕು. ನೀವು ಸರಿಯಾದ ಸಲಹೆ ಪಡೆಯದೆ ಹೂಡಿಕೆ ಮಾಡಿದಲ್ಲಿ ಸೋಲಿನ ಸಾಧ್ಯತೆಗಳಿವೆ. ನಿಮ್ಮ ಸಹೋದರನಿಗೆ ವಿಷಯಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಾಯ ಮಾಡಿ. ವ್ಯಾಜ್ಯಗಳನ್ನು ಅನಗತ್ಯವಾಗಿ ಹೆಚ್ಚಿಸದೇ ಅವುಗಳನ್ನು ಸೌಹಾರ್ದತೆಯಿಂದ ಪರಿಹರಿಸಲು ಪ್ರಯತ್ನಿಸಿ. ಉಡುಗೊರೆಗಳು / ಪಾರಿತೋಷಕಗಳೂ ಸಹ ಇಂದು ನಿಮ್ಮ ಪ್ರಿಯತಮೆಯ ಮನಸ್ಸು ಬದಲಿಸುವ ಸಾಧ್ಯವಾಗದಿರಬಹುದು. ನಿಮ್ಮ ಸಂವಹನ ತಂತ್ರಗಳು ಮತ್ತು ಕೆಲಸದ ಕೌಶಲಗಳು ಪರಿಣಾಮಕಾರಿಯಾಗಿರುತ್ತವೆ. ನಿಮ್ಮ ಮದುವೆ ಇಂದು ಶಿಥಿಲತೆಯನ್ನು ಅನುಭವಿಸಬಹುದು.

 

ತುಲಾ : ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಅನಾವಶ್ಯಕ ವಾದ ಕುಟುಂಬದಲ್ಲಿ ಒತ್ತಡ ಉಂಟುಮಾಡಬಹುದು. ವಾದದ ಮೂಲಕ ಪಡೆದ ಯಾವುದೇ ಗೆಲುವು ನಿಜವಾದ ಅರ್ಥದಲ್ಲಿ ಗೆಲುವಲ್ಲ ಎಂದು ನೆನಪಿಡಿ. ಇದನ್ನು ತಪ್ಪಿಸಲು ಸಾಧ್ಯವಾದಷ್ಟೂ ನಿಮ್ಮ ತಾರ್ಕಿಕ ಶಕ್ತಿಯನ್ನು ಬಳಸಿ. ನಿಮ್ಮ ಹಿರಿಯರ ಮಾತು ಕೇಳಿ ಮತ್ತು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಶಾಂತವಾಗಿ ಆಲೋಚಿಸಿ. ನಿಮ್ಮ ಪ್ರೇಮ ಜೀವನ ಇಂದು ಒಂದು ಸುಂದರ ತಿರುವನ್ನು ತೆಗೆದುಕೊಳ್ಳುತ್ತದೆ. ನೀವು ಪ್ರೀತಿಯಲ್ಲಿರುವ ಅದ್ಭುತ ಭಾವನೆ ಹೊಂದುತ್ತೀರಿ. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ಕಣ್ಣುಗಳು ಎಲ್ಲವನ್ನೂ ಹೇಳುತ್ತವೆ, ಮತ್ತು ನೀವು ಇಂದು ನಿಮ್ಮ ಸಂಗಾತಿಯ ಜೊತೆ ಕಣ್ಣಿನಲ್ಲೇ ಭಾವನಾತ್ಮಕವಾಗಿ ಮಾತನಾಡುತ್ತೀರಿ.

 

 

ವೃಶ್ಚಿಕ : ನಗು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾದ್ದರಿಂದ ನಕ್ಕುಬಿಡಿ. ನಿಮಗೆ ಆಕರ್ಷಕವಾಗಿ ತೋರುವ ಯಾವುದೇ ಹೂಡಿಕೆಯ ಯೋಜನೆಯ ಬಗ್ಗೆ ಹೆಚ್ಚು ಕಂಡುಹಿಡಿಯಲು ಮೇಲ್ಮೈಗಿಂತ ಕೆಳಗೆ ಆಳವಾಗಿ ಕೆದಕಿ. ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ನೀವು ನಿಮ್ಮ ದೈನಂದಿನ ಕಾರ್ಯಕ್ರಮಗಳಿಂದ ಬಿಡುವು ಮಾಡಿಕೊಂಡು ನಿಮ್ಮ ಸ್ನೇಹಿತರೊಂದಿಗೆ ಇಂದು ಹೊರಗೆ ಹೋಗಬೇಕು. ಇಂದು ಪ್ರೇಮ ಜೀವನದ ವಿವಾದಾತ್ಮಕವಾಗಿರಬಹುದು. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ಈ ದಿನ ಚೆನ್ನಾಗಿ ಹೋಗಬೇಕೆಂದು ನೀವು ಬಯಸಿದರೆ ನಿಮ್ಮ ಸಂಗಾತಿಯ ಮೂಡ್ ಆಫ್ ಆದಾಗ, ಒಂದು ಶಬ್ದವನ್ನೂ ಹೇಳಬೇಡಿ.

 

 

ಧನು : ಇಂದು ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ -ನೀವು ಮುಂದೇನು ಮಾಡಬೇಕೆಂದು ನಿರ್ಧರಿಸಲಾಗದೇ ಸಲುಕಿಕೊಂಡಿರಬಹುದು. ಇತರರಿಂದ ಸಹಾಯ ಪಡೆಯಿರಿ ಇಂದು ಸುಮ್ಮನೆ ಕುಳಿತುಕೊಳ್ಳುವ ಬದಲು -ಏಕೆ ಏನನ್ನಾದರೂ ಮಾಡಬಾರದು – ಇದು ನಿಮ್ಮ ಗಳಿಕೆಯ ಶಕ್ತಿಯನ್ನು ಸುಧಾರಿಸುತ್ತದೆ. ಕೆಲಸದ ಒತ್ತಡ ಕಡಿಮೆಯಿದ್ದು ನೀವು ಕುಟುಂಬದ ಸದಸ್ಯರ ಜೊತೆಗಿನ ಸಮಯವನ್ನು ಆನಂದಿಸುವ ಒಂದು ದಿನ. ಪ್ರಣಯ ಸಂತೋಷಕರವೂ ಮತ್ತು ಅದ್ಭುತವೂ ಆಗಬಹುದು. ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ಈ ದಿನ ನಿಮ್ಮ ಎಂದಿನ ವೈವಾಹಿಕ ಜೀವನದಲ್ಲಿ ವಿಶೇಷವಾಗಿರುತ್ತದೆ, ನೀವು ಇಂದು ಅಸಾಮಾನ್ಯವಾದದ್ದೇನಾದರೂ ಅನುಭವಿಸುತ್ತೀರಿ.

 

 

 

ಮಕರ : ವಿಶೇಷವಾಗಿ ದಾಟುವಿಕೆಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಅದರೆ ಹಾಗೆ ಮಾಡಿದಲ್ಲಿ ನೀವು ವಿಷಾದಿಸುತ್ತೀರಿ. ನೀವು ಮಕ್ಕಳ ವಿಷಯದಲ್ಲಿ ಒಂದು ಕಠಿಣ ದಿನ ಹೊಂದಿದ್ದೀರಿ. ನಿಮ್ಮ ಕೆಟ್ಟದಾದ ಪ್ರಣಯ ನಿಮ್ಮನ್ನು ಖಿನ್ನತೆಗೆ ದೂಡಬಹುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಸಾಮರ್ಥ್ಯ ನಿಮಗೆ ಗೌರವ ತರುತ್ತದೆ. ನಿಮ್ಮ ಸಂಗಾತಿಯೊಡನೆ ನೀವು ಎಷ್ಟೇ ಜಗಳವಾಡಿದರೂ; ನೀವು ಪರಸ್ಪರ ಪ್ರೀತಿಸುತ್ತೀರೆನ್ನುವುದನ್ನು ಮರೆಯಬೇಡಿ.

 

 

ಕುಂಭ : ಸಾಮಾಜಿಕ ಜೀವನಕ್ಕಿಂತ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ಸ್ನೇಹ ಆಳವಾದ ಹಾಗೆ ಪ್ರಣಯ ನಿಮ್ಮೆಡೆ ಬರುತ್ತದೆ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಎಲ್ಲವೂ ಸಂತೋಷಕರವಾಗಿರುತ್ತದೆ.

 

 

ಮೀನಾ; ನಿಮ್ಮ ಅನಾರೋಗ್ಯದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ. ನಿಮ್ಮ ಕಾಯಿಲೆಯ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದು ಇನ್ನೂ ಉಲ್ಬಣಗೊಳ್ಳುವುದರಿಂದ ನಿಮ್ಮ ಗಮನವನ್ನು ಬೇರೆಡೆಗೆ ಕಾಯಿಲೆಯಿಂದ ತಿರುಗಿಸಲು ಏನಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಸಂತೋಷ ನೀಡುವ ಮೂಲಕ ಮತ್ತು ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಸಮರ್ಥಗೊಳಿಸಲಿದ್ದೀರಿ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ನಿಮ್ಮ ಸಂಗಾತಿಯ ಇಂದು ನಿಜವಾಗಿಯೂ ಒಂದು ಉತ್ತಮ ಮೂಡ್‌ನಲ್ಲಿರುತ್ತಾರೆ. ನಿಮಗೊಂದು ಅಚ್ಚರಿ ಕಾದಿರಬಹುದು.

Please follow and like us:
0
http://bp9news.com/wp-content/uploads/2018/09/horoscope-final-3.jpghttp://bp9news.com/wp-content/uploads/2018/09/horoscope-final-3-150x150.jpgBP9 Bureauಆಧ್ಯಾತ್ಮಪ್ರಮುಖ    ಮೇಷ : ಇಂದು ನೀವು ದಣಿಯುತ್ತೀರಿ ಮತ್ತು ಸಣ್ಣ ವಿಷಯಗಳಿಗೆ ಅಸಮಾಧಾನ ಹೊಂದುವ ಸಾಧ್ಯತೆ ಬಹಳವಾಗಿರುತ್ತದೆ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ - ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ನಿಮ್ಮ ಪತ್ನಿಯ ಸಾಧನೆಯನ್ನು ಶ್ಲಾಘಿಸಿ ಮತ್ತು ಅವರ ಯಶಸ್ಸು ಮತ್ತು ಉತ್ತಮ ಭವಿಷ್ಯವನ್ನು ಆನಂದಿಸಿ. ನಿಮ್ಮ ಹೊಗಳಿಕೆಯಲ್ಲಿ ಉದಾರ ಮತ್ತು ಪ್ರಾಮಾಣಿಕವಾಗಿರಿ. ಪ್ರೀತಿ ನಿಮಗಾಗಿ ಗಾಳಿಯಲ್ಲಿದೆ. ಸುತ್ತಲೂ ನೋಡಿ ಎಲ್ಲವೂ ಗುಲಾಬಿಯಾಗಿದೆ. ಸಮಸ್ಯೆಗಳನ್ನು ಹತ್ತಿಕ್ಕುವ...Kannada News Portal