ಬೆಂಗಳೂರು: ಇವತ್ತು ಕರ್ನಾಟಕ ವಿಧಾನಸಭಾ ಚುನಾವಣೆಯ  ಮಹಾಫಲಿತಾಂಶ ಹೊರಬೀಳಲಿದೆ. ಈ ಫಲಿತಾಂಶದಲ್ಲಿ ಯಾರಿಗೆ ಸಿಹಿ ಯಾರಿಗೆ ಕಹಿ ಎಂಬುದು ತಿಳಿಯಲಿದ್ದು, ರಾಜ್ಯ ಗದ್ದುಗೆ ಕಾಳಗ ಹೈ ವೋಲ್ಟೆಟ್‌ ಮ್ಯಾಚ್‌ನ ಫೈನಲ್‌ ಟಚ್‌ಗೆ ಇನ್ನೇನ್ನು ಕ್ಷಣಗಣನೆ ಆರಂಭವಾಗಿದೆ.

ಇದೇ ದಿನ ಪವರ್‌ ಮಿನಿಸ್ಟರ್‌ ಡಿಕೆಶಿಯವರ ಹುಟ್ಟುಹಬ್ಬ. ರಾಜ್ಯ ವಿಧಾನಸಭಾ  ಅಧಿಕಾರದ ಗದ್ದುಗೆ ಯಾರಿಗೆ ಎಂದು ನಿರ್ಧಾರವಾಗುವ ದಿನವೇ ಹುಟ್ಟುಹಬ್ಬ ಬಂದಿರುವುದು, ಡಿಕೆಶಿಗೆ ಒಂದು ಪ್ರಮುಖ ದಿನವಾಗಿದೆ. ಈ ನಿಟ್ಟಿನಲ್ಲಿ ಇಂದು ಡಿಕೆಶಿ ಅಥವಾ ಕಾಂಗ್ರೆಸ್‌ನ ಹರ್ಷ ಅಥವಾ  ಕರಾಳ ದಿನವಾಗಿ ಬದಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಡಿಕೆಶಿ ಹುಟ್ಟುಹಬ್ಬದ ದಿನವೇ  ಕರ್ನಾಟಕದ ಜನ ಗದ್ದುಗೆ ಗಿಫ್ಟ್ ನೀಡ್ತಾರೋ ಅಥವಾ ಲಾಲಿಪಪ್‌ ಕೊಡ್ತಾರೋ ಇನ್ನಷ್ಟೇ ತಿಳಿಯಬೇಕಿದೆ.

ಈ ನಡುವೆ ರಾಜ್ಯದಲ್ಲಿ  ಅತಂತ್ರ ಸರ್ಕಾರವೆನಾದರೂ ಬಂದಿದ್ದೇ ಆದಲ್ಲಿ ನಾನು ರಣಕಲಿಯಂತೆ ಕಾಂಗ್ರೆಸ್ ಬಾವುಟ ಹಿಡಿದು, ಕಡೆಯ ಕ್ಷಣದವರೆಗೂ ಬಾಹುಬಲಿಯಾಗಿ ಹೋರಾಡಲು ಸಿದ್ಧ ಎಂಬ  ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಡಿಕೆಶಿ ಜೊತೆಗೂ ಸಖ್ಯ ಸಾಧಿಸಬಲ್ಲೇ ಎಂಬುದನ್ನು  ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/05/DKS.pnghttp://bp9news.com/wp-content/uploads/2018/05/DKS-150x150.pngBP9 Bureauಪ್ರಮುಖರಾಜಕೀಯರಾಮನಗರಬೆಂಗಳೂರು: ಇವತ್ತು ಕರ್ನಾಟಕ ವಿಧಾನಸಭಾ ಚುನಾವಣೆಯ  ಮಹಾಫಲಿತಾಂಶ ಹೊರಬೀಳಲಿದೆ. ಈ ಫಲಿತಾಂಶದಲ್ಲಿ ಯಾರಿಗೆ ಸಿಹಿ ಯಾರಿಗೆ ಕಹಿ ಎಂಬುದು ತಿಳಿಯಲಿದ್ದು, ರಾಜ್ಯ ಗದ್ದುಗೆ ಕಾಳಗ ಹೈ ವೋಲ್ಟೆಟ್‌ ಮ್ಯಾಚ್‌ನ ಫೈನಲ್‌ ಟಚ್‌ಗೆ ಇನ್ನೇನ್ನು ಕ್ಷಣಗಣನೆ ಆರಂಭವಾಗಿದೆ. ಇದೇ ದಿನ ಪವರ್‌ ಮಿನಿಸ್ಟರ್‌ ಡಿಕೆಶಿಯವರ ಹುಟ್ಟುಹಬ್ಬ. ರಾಜ್ಯ ವಿಧಾನಸಭಾ  ಅಧಿಕಾರದ ಗದ್ದುಗೆ ಯಾರಿಗೆ ಎಂದು ನಿರ್ಧಾರವಾಗುವ ದಿನವೇ ಹುಟ್ಟುಹಬ್ಬ ಬಂದಿರುವುದು, ಡಿಕೆಶಿಗೆ ಒಂದು ಪ್ರಮುಖ ದಿನವಾಗಿದೆ. ಈ ನಿಟ್ಟಿನಲ್ಲಿ ಇಂದು ಡಿಕೆಶಿ...Kannada News Portal