‘ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ಸೌಂಡ್​ ಮಾಡಿದ ಟಗರು ಸಿನಿಮಾದ ಪ್ರತಿಯೊಂದು ಕ್ಯಾರಕ್ಟರ್​ಗೂ ತನ್ನದೇ ಆದ ತೂಕ ಇದೆ. ಕಾನ್ಸ್​ಟೇಬಲ್​ ಸರೋಜ, ಡಾಲಿ ಧನಂಜಯ, ಚಿಟ್ಟೆ ,ಹೀಗೆ ಶಿವಣ್ಣನ ಜೊತೆ ಮಸ್ತ್​ ಕಾಂಬಿನೇಷನ್​  ಕೊಡುತ್ತಿರುವ ಈ ಕ್ಯಾರೆಕ್ಟರ್​ ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​. ಇನ್ನೂ ಡಾಲಿ ಪಾತ್ರದಲ್ಲಿ ಮಿಂಚುತ್ತಿರುವ ಧನಂಜಯ ಪಾತ್ರವನ್ನು  ಮೆಚ್ಚದವರ್ಯಾರು ಇಲ್ಲ. ಹಾಗೇ ಡಾಲಿಗೆ ಅಭಿಮಾನಿಗಳು ಹೆಚ್ಚುತ್ತಿದ್ದಾರೆ. ಸಿನಿಮಾ ಸ್ಟಾರ್ಸ್​, ಪ್ರೇಕ್ಷಕರೆಲ್ಲರೂ ಡಾಲಿ ಪಾತ್ರದ ಧನಂಜಯನನ್ನು ಸಖತ್​ ಸೂಪರ್​ ಎನ್ನುತ್ತಿದ್ದಾರೆ.

ಮತ್ತೆ ಅಭಿಮಾನಿಗಳಿಂದಲೂ ಭರಪೂರ ಕಂಗ್ರಾಟ್ಸ್​  ಸುರಿಮಳೆಯೇ ಬರುತ್ತಿದೆ. ಇನ್ನೂ ಹುಚ್ಚು  ಮಹಿಳಾ ಅಭಿಮಾನಿಯೊಬ್ಬರು ತಮ್ಮ ಭುಜದ ಮೇಲೆ ಡಾಲಿ ಹೆಸರನ್ನು  ಹಾಕಿಸಿಕೊಂಡಿದ್ದು ಧನಂಜಯ ಅವರನ್ನು ಆರಾಧಿಸುತ್ತಿದ್ದಾರೆ. ಮೈಸೂರಿನ ಸೌಂದರ್ಯ ಶಾನ್ವಿ ಎನ್ನುವ ಯುವತಿ ತನ್ನ ಭುಜದ ಮೇಲೆ ಡಾಲಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ.

ಮತ್ತೊಂದು  ಇಂಟ್ರೆಸ್ಟಿಂಗ್​ ಏನಪ್ಪಾ ಅಂದ್ರೆ ಅವರ ಲುಕ್​ಗೆ  ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಅಭಿಮಾನಿಗಳಿದ್ದಾರೆ. ಇನ್ನೂ ಡಾಲಿ ಹೆಸರು ಭರ್ಜರಿ ಸೌಂಡ್​ ಮಾಡುತ್ತಿದ್ದು, ಅವರ ಹೆಸರಿನಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು, ಅವರ ಹೇರ್​ ಸ್ಟೈಲ್​ ಫಾಲೋ ಮಾಡುವುದು,  ಅಭಿಮಾಣಿಗಳ ಬಳಗ ಕಟ್ಟುತ್ತಿರುವುದು ಕಂಡು ಬರುತ್ತಿದೆ.

 

Please follow and like us:
0
http://bp9news.com/wp-content/uploads/2018/03/Capture-29.jpghttp://bp9news.com/wp-content/uploads/2018/03/Capture-29-150x150.jpgBP9 Bureauಸಿನಿಮಾ‘ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ಸೌಂಡ್​ ಮಾಡಿದ ಟಗರು ಸಿನಿಮಾದ ಪ್ರತಿಯೊಂದು ಕ್ಯಾರಕ್ಟರ್​ಗೂ ತನ್ನದೇ ಆದ ತೂಕ ಇದೆ. ಕಾನ್ಸ್​ಟೇಬಲ್​ ಸರೋಜ, ಡಾಲಿ ಧನಂಜಯ, ಚಿಟ್ಟೆ ,ಹೀಗೆ ಶಿವಣ್ಣನ ಜೊತೆ ಮಸ್ತ್​ ಕಾಂಬಿನೇಷನ್​  ಕೊಡುತ್ತಿರುವ ಈ ಕ್ಯಾರೆಕ್ಟರ್​ ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​. ಇನ್ನೂ ಡಾಲಿ ಪಾತ್ರದಲ್ಲಿ ಮಿಂಚುತ್ತಿರುವ ಧನಂಜಯ ಪಾತ್ರವನ್ನು  ಮೆಚ್ಚದವರ್ಯಾರು ಇಲ್ಲ. ಹಾಗೇ ಡಾಲಿಗೆ ಅಭಿಮಾನಿಗಳು ಹೆಚ್ಚುತ್ತಿದ್ದಾರೆ. ಸಿನಿಮಾ ಸ್ಟಾರ್ಸ್​, ಪ್ರೇಕ್ಷಕರೆಲ್ಲರೂ ಡಾಲಿ ಪಾತ್ರದ ಧನಂಜಯನನ್ನು ಸಖತ್​ ಸೂಪರ್​ ಎನ್ನುತ್ತಿದ್ದಾರೆ. ಮತ್ತೆ...Kannada News Portal