ಉಡುಪಿ: ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕುಖ್ಯಾತ ರೌಡಿ ಬನ್ನಂಜೆ ರಾಜನನ್ನು ಮಲ್ಪೆ ಸಮೀಪದ ಕಲ್ಮಾಡಿಯಲ್ಲಿರುವ ತಾಯಿಯ ಮನೆಗೆ ಕರೆತರಲಾಗಿತ್ತು.

ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಯೋಗಕ್ಷೇಮ ವಿಚಾರಿಸಲು ಈಚೆಗೆ ಉಡುಪಿ ಜಿಲ್ಲಾ ನ್ಯಾಯಾಲಯ ಬನ್ನಂಜೆ ರಾಜನಿಗೆ ಒಂದು ದಿನದ ಕಾಲಾವಕಾಶ ನೀಡಿತ್ತು. ಅದರಂತೆ, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬನ್ನಂಜೆ ರಾಜನನ್ನು ಭಾನುವಾರ ಸಂಜೆ ವೇಳೆಗೆ ಉಡುಪಿಗೆ ಕರೆತರಲಾಗಿತ್ತು. ಸೋಮವಾರ ಬೆಳಿಗ್ಗೆ 6ಕ್ಕೆ ಕಲ್ಮಾಡಿಯ ತಾಯಿಯ ಮನೆಗೆ ಕರೆದೊಯ್ಯಲಾಯಿತು.

ಮನೆಗೆ ಬಂದ ಕೂಡಲೇ ತಾಯಿಯ ಆರೋಗ್ಯ ವಿಚಾರಿಸಿದ ಬನ್ನಂಜೆ, ಬಳಿಕ ಸಹೋದರರು ಬಂಧುಗಳ ಜತೆ ಕೆಲಹೊತ್ತು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಬನ್ನಂಜೆ ರಾಜನನ್ನು ನೋಡಲು ಅಕ್ಕಪಕ್ಕದವರು ಮನೆಯ ಹೊರಗೆ ಕುತೂಹಲದಿಂದ ನಿಂತಿದ್ದ ದೃಶ್ಯ ಕಂಡುಬಂತು. ಮನೆಯ ಸುತ್ತಲೂ ಬಿಗಿಭದ್ರತೆ ಮಾಡಲಾಗಿತ್ತು. ಕುಟುಂಬ ಸದಸ್ಯರನ್ನು ಬಿಟ್ಟರೆ ಯಾರಿಗೂ ಮನೆಯ ಒಳಗೆ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ.

ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ತಾಯಿಯ ಮನೆಯಲ್ಲಿರಲು ನ್ಯಾಯಾಲಯ ಅವಕಾಶ ಕೊಟ್ಟಿದ್ದ ಕಾರಣ ಸಂಜೆ ಬನ್ನಂಜೆ ರಾಜನನ್ನು ಉಡುಪಿ ನಗರ ಠಾಣೆಗೆ ಕರೆತರಲಾಯಿತು. ಮಂಗಳವಾರ ಬೆಳಿಗ್ಗೆ ಮತ್ತೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗಿದೆ.

Please follow and like us:
0
http://bp9news.com/wp-content/uploads/2018/07/img-20180705-wa0012-1530796062.jpghttp://bp9news.com/wp-content/uploads/2018/07/img-20180705-wa0012-1530796062-150x150.jpgPolitical Bureauಪ್ರಮುಖಮಂಗಳೂರುDan Bannanje king who came to Kalmadi from Hindalga jail Why did anyone in jail come here ???ಉಡುಪಿ: ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕುಖ್ಯಾತ ರೌಡಿ ಬನ್ನಂಜೆ ರಾಜನನ್ನು ಮಲ್ಪೆ ಸಮೀಪದ ಕಲ್ಮಾಡಿಯಲ್ಲಿರುವ ತಾಯಿಯ ಮನೆಗೆ ಕರೆತರಲಾಗಿತ್ತು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_152018079095816'); document.getElementById('div_152018079095816').appendChild(scpt); ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಯೋಗಕ್ಷೇಮ ವಿಚಾರಿಸಲು ಈಚೆಗೆ ಉಡುಪಿ ಜಿಲ್ಲಾ ನ್ಯಾಯಾಲಯ ಬನ್ನಂಜೆ ರಾಜನಿಗೆ ಒಂದು...Kannada News Portal