ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದ ಸಿದ್ದರಾಮಯ್ಯ ಪರ  ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಬ್ಬರದ ಕ್ಯಾಂಪೇನ್​ ಮಾಡಿದ್ದರು. ಪುತ್ರನನ್ನು ಕಳೆದುಕೊಂಡರೂ ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದವ್ರು ಸಿದ್ದರಾಮಯ್ಯ, ಪುತ್ರ ಶೋಕದಿಂದ ಹೊರ ಬಂದು  ಈ ವಯಸ್ಸಿನಲ್ಲೂ ಜನಕಾರ್ಯ ಮಾಡುತ್ತಿದ್ದಾರೆ ಎಂದು ದರ್ಶನ್​ ಸಿದ್ದರಾಮಯ್ಯ ಪರ  ಸಿಕ್ಕಾಪಟ್ಟೆ ಡೈಲಾಗ್​  ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ಬಿಟ್ಟರೇ ಬೇರೇ ಏನೂ  ಲಾಭವಾಗಲಿಲ್ಲ.

ದರ್ಶನ್​ ಭರ್ಜರಿ  ರೋಡ್​ ಶೋ ನಡೆಸಿ   ಪ್ರಚಾರ ನಡೆಸಿದ್ರೂ  ಜಿಟಿ ದೇವೆಗೌಡ ರ ಎದುರು ಮುಖಭಂಗಕ್ಕೀಡಾದ್ರು ಸಿದ್ದರಾಮಯ್ಯ. ಡೇರ್​ ಡೆವಿಲ್​ ನಮ್ಮ ಸಿದ್ದರಾಮಯ್ಯ ಎಂಬ ಸಿನಿಮಾ ಶೈಲಿಯ ಡೈಲಾಗ್​ ಹೇಳಿದ ದರ್ಶನ್​ ಪ್ರಚಾರಕ್ಕೆ ಚಾಮುಂಡೇಶ್ವರಿ ಜನ  ಮಣೆ ಹಾಕಲಿಲ್ಲ.

 ಚಾಮುಂಡೇಶ್ವರಿಯಲ್ಲಿ  ದರ್ಶನ್​ ಕ್ಯಾಂಪೇನ್​ ವರ್ಕೌಟ್​ ಆಗಿಲ್ಲ. ಇನ್ನು ಕೆ.ಆರ್​ ನಗರದಲ್ಲಿ ಸ್ಪರ್ಧೆ ಮಾಡಿದ್ದ ಸಾ.ರಾ ಮಹೇಶ್​ ಪರವೂ ಡಿ ಬಾಸ್​ ಕ್ಯಾಂಪೇನ್​ ನಡಿಸಿದ್ದಾರೆ ಆದರೆ ಅಲ್ಲಿ ಸಾರಾ ಮಹೇಶ್​ ಜಯಭೇರಿ ಸಾಧಿಸಿದ್ದಾರೆ.

ಒಟ್ಟಾರೆ ದರ್ಶನ್​ ಸಿದ್ದರಾಮಯ್ಯ  ಪರ ಪ್ರಚಾರಕ್ಕೆ ಬಂದಾಗ ಜೆಡಿಎಸ್​ ಕಾರ್ಯಕರ್ತರು ಅವರನ್ನು ವಿರೋಧಿಸಿದ್ದರು. ಆದರೆ   ತಲೆಕೆಡಿಸಿಕೊಳ್ಳಸ ದರ್ಶನ್​  ಕಾಂಗ್ರೆಸ್​  ಸಿದ್ದರಾಮಯ್ಯನನ್ನು ಬೆಮಬಲಿಸುವಂತೆ ಮನವಿ ಮಾಡಿಕೊಂಡರೂ ತವರು ಕ್ಷೇತ್ರ ಇವರತ್ತ ಮುಖ ಮಾಡಿಲ್ಲ.

Please follow and like us:
0
http://bp9news.com/wp-content/uploads/2018/05/darshan_siddaramaiah2.jpghttp://bp9news.com/wp-content/uploads/2018/05/darshan_siddaramaiah2-150x150.jpgBP9 Bureauಪ್ರಮುಖರಾಜಕೀಯಸಿನಿಮಾಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದ ಸಿದ್ದರಾಮಯ್ಯ ಪರ  ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಬ್ಬರದ ಕ್ಯಾಂಪೇನ್​ ಮಾಡಿದ್ದರು. ಪುತ್ರನನ್ನು ಕಳೆದುಕೊಂಡರೂ ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದವ್ರು ಸಿದ್ದರಾಮಯ್ಯ, ಪುತ್ರ ಶೋಕದಿಂದ ಹೊರ ಬಂದು  ಈ ವಯಸ್ಸಿನಲ್ಲೂ ಜನಕಾರ್ಯ ಮಾಡುತ್ತಿದ್ದಾರೆ ಎಂದು ದರ್ಶನ್​ ಸಿದ್ದರಾಮಯ್ಯ ಪರ  ಸಿಕ್ಕಾಪಟ್ಟೆ ಡೈಲಾಗ್​  ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ಬಿಟ್ಟರೇ ಬೇರೇ ಏನೂ  ಲಾಭವಾಗಲಿಲ್ಲ. ದರ್ಶನ್​ ಭರ್ಜರಿ  ರೋಡ್​ ಶೋ ನಡೆಸಿ   ಪ್ರಚಾರ ನಡೆಸಿದ್ರೂ ...Kannada News Portal