ಬೆಂಗಳೂರು : ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ತಮ್ಮ ಫೇಸ್ಬುಕ್​ ಖಾತೆಯ ಮೂಲಕ  ಸಿಎಂ ಕುಮಾರಸ್ವಾಮಿ ಅವರಿಗೆ ಮನಬಂದಂತೆ ಅವಾಚ್ಯ ಪದಗಳಿಂದ ನಿಂಧಿಸುತ್ತಿದ್ದಾರೆ ಎಂದು ಸಿಎಂ ಅಭಿಮಾನಿಗಳು ಇದೀಗ ಸೈಬರ್​ಗೆ ದೂರು ಕೊಟ್ಟಿದ್ದಾರೆ. ಅಂದಹಾಗೇ ದರ್ಶನ್​ ಅವರ   ನಿಜವಾದ ಖಾತೆಯಿಂದ  ಸಿಎಂ ಅವರಿಗೆ ಈ ರೀತಿ ಅಶ್ಲೀಲ ಪೋಸ್ಟ್​ಗಳು ರವಾನೆಯಾಗಿರುವುದು ಸುಳ್ಳು, ಅಸಲಿಗೆ ಅದು ನಟ ದರ್ಶನ್​ ಅವರ ನಿಜವಾದ  ಫೇಸ್​ಬುಕ್​ ಅಕೌಂಟ್​ ಅಲ್ಲ. ಅವರ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಟ ದರ್ಶನ್​ ಅವರ ಮಹೆಸರನ್ನು ದುರ್ಬಳಕೆ ಮಾಡಿಕೊಂಡು ಕುಮಾರಸ್ವಾಮಿ ಅವರಿಗೆ ಮೆಸೇಜ್​ ಮಾಡುತ್ತಿದ್ದಾರೆ. ನಟನ ಹೆಸರನ್ನು ಹಾಳು ಮಾಡುವ ಸಲುವಾಗಿ ಈ ರೀತಿ ಮಾಡಲಾಗಿದೆ ಎಂದು ದರ್ಶನ್​ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿಯೇ ರಾಂಗ್​ ಆಗಿದ್ದಾರೆ.

ಹೆಚ್​ ಡಿ ಕುಮಾರಸ್ವಾಮಿ ಅಭಿಮಾನಿಗಳು ಇದರಿಂದ ಆಕ್ರೊಶಗೊಂಡು ಪೊಲೀಸ್​ ಆಯುಕ್ತ ಸುನೀಲ್​ ಕುಮಾರ್​ರಿಗೆ ದೂರು ಕೊಟ್ಟಿದ್ದಾರೆ.  ದೂರು ಸ್ವೀಕರಿಸಿದ ಸುನೀಲ್​ ಕುಮಾರ್​ ಫೇಸ್​ಬುಕ್​ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳುವುದಾಗಿ ಹೇಳಿದ್ದಾರೆ. ಅದರಲ್ಲೂ ದರ್ಶನ್​ಅ ವರ ಹೆಸರನ್ನೇ ಬಳಕೆ ಮಾಡಿಕೊಂಡು ಯಾಕೆ ಈ ರೀತಿ ಮಾಡಿದ್ದಾರೆ ಎಂಬುದು ಮಾತ್ರ  ಇನ್ನಷ್ಟೂ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 

Please follow and like us:
0
http://bp9news.com/wp-content/uploads/2018/06/collage-3-7.jpghttp://bp9news.com/wp-content/uploads/2018/06/collage-3-7-150x150.jpgBP9 Bureauಪ್ರಮುಖಸಿನಿಮಾಬೆಂಗಳೂರು : ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ತಮ್ಮ ಫೇಸ್ಬುಕ್​ ಖಾತೆಯ ಮೂಲಕ  ಸಿಎಂ ಕುಮಾರಸ್ವಾಮಿ ಅವರಿಗೆ ಮನಬಂದಂತೆ ಅವಾಚ್ಯ ಪದಗಳಿಂದ ನಿಂಧಿಸುತ್ತಿದ್ದಾರೆ ಎಂದು ಸಿಎಂ ಅಭಿಮಾನಿಗಳು ಇದೀಗ ಸೈಬರ್​ಗೆ ದೂರು ಕೊಟ್ಟಿದ್ದಾರೆ. ಅಂದಹಾಗೇ ದರ್ಶನ್​ ಅವರ   ನಿಜವಾದ ಖಾತೆಯಿಂದ  ಸಿಎಂ ಅವರಿಗೆ ಈ ರೀತಿ ಅಶ್ಲೀಲ ಪೋಸ್ಟ್​ಗಳು ರವಾನೆಯಾಗಿರುವುದು ಸುಳ್ಳು, ಅಸಲಿಗೆ ಅದು ನಟ ದರ್ಶನ್​ ಅವರ ನಿಜವಾದ  ಫೇಸ್​ಬುಕ್​ ಅಕೌಂಟ್​ ಅಲ್ಲ. ಅವರ ಹೆಸರಿನಲ್ಲಿ ಯಾರೋ...Kannada News Portal