ಸೆ. 18 ಸ್ಯಾಂಡಲ್​ವುಡ್​ಗೆ ಒಂದು ಸ್ಪೆಷಲ್​ ಡೇ. ಯಾಕಂದ್ರೆ ಅಂದು ತ್ರಿವಳಿ  ಸ್ಟಾರ್​ಗಳ ಹುಟ್ಟುಹಬ್ಬ ಒಂದೇ ದಿನ. ಇಂದು ಕನ್ನಡ ಚಿತ್ರರಂಗದ ಲೆಸೆಂಡ್​ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಮತ್ತು ಶೃತಿ ಅವರಿಗೆ ಅಭಿಮಾನಿಗಳಿಂದ ಹುಟ್ಟುಹಬ್ಬದ ಮಹಾಪೂರವೇ ಹರಿದುಬರುತ್ತಿವೆ.

ಉಪ್ಪಿ ಇಂದು 50 ನೇ  ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಧ್ಯ ರಾತ್ರಿಯಿಂದಲೇ ಅಭಿಮಾನಿಗಳು  ಕತ್ರಿಗುಪ್ಪೆಯ ಅವರ ನಿವಾಸದ ಬಳಿ ಬೃಹತ್​ ಗಾತ್ರದ ಕೇಕ್​  ಹಿಡಿದು ನಿಂತಿದ್ದರು. ಇದೀಗ  ಅಭಿಮಾನಿಗಳಷ್ಟೇ ಅಲ್ಲಾ,  ತಮ್ಮ ಪ್ರೀತಿಯ ಮಗಳು ಕೂಡ  ಸ್ವೀಟ್​ ಡ್ಯಾಡಿಗೆ ವಿಶ್​ ಮಾಡಿದ್ದಾರೆ. ಅಪಪ್ನ ರೀತಿಯಲ್ಲೇ  ಡಿಫರೆಂಟ್​ ಸ್ಟೈಲ್​ ಐಶ್ವರ್ಯ ಉಪೇಂದ್ರದ್ದು. ಆಕೆಯೂ ಕೂಡ ಸಾಮಾಜಿಕ ಜಾಲತಾಣಗಲಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿರುತ್ತಾರೆ.  ಉಪೇಂದ್ರ ಥರಾನೇ ಮಗಳು ಐಶ್ವರ್ಯ ಕೂಡ. ಆಕೆಯೂ ಇನ್ಸ್​ಟ್ರಾಗ್ರಾಂ ಮೂಲಕ ಅಪ್ಪನಿಗೆ ಬರ್ತ್​ಡೇ  ವಿಶಸ್​ ತಿಳಿಸಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಅಪ್ಪಾ ನಿಮಗೆ,  ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೀನಿ. ನನ್ನ ಕಷ್ಟದಲ್ಲಿ ನೀವು ನನಗೆ ತುಂಬಾ ಸಹಾಯ ಮಾಡಿದ್ದೀರ. ನೀವಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದಕ್ಕೆ ತುಂಬಾ ಕಷ್ಟ ಅಪ್ಪಾ..! ಅಂತಾ ಐಶ್ವರ್ಯ ತನ್ನ ಅಪ್ಪನಿಗೆ ಪ್ರೀತಿಯ ಶುಭಾಶೆಯಗಳನ್ನು ತಿಳಿಸಿದ್ದಾರೆ. ಅಂದಹಾಗೇ ಐಶ್ವರ್ಯ ರ ಈ ಮಾತನ್ನು ಕೇಳಿ ಉಪ್ಪಿ ಕಣ್ಣಾಲಿಗಳು ತುಂಬಿ ಹೋಗಿದ್ದವಂತೆ. ಸಿಕ್ಕಾಪಟ್ಟೆ ಇಷ್ಟ ಪಡುವ ಮಗಳು ಈ  ಮಟ್ಟಕ್ಕೆ ಭಾವ ಬಂಧ ಬೆಸೆಯುವ ರೀತಿ ಕಂಡು ಉಪ್ಪಿ ಹೆಮ್ಮೆ ಪಡುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/09/180918_upendra.2.jpghttp://bp9news.com/wp-content/uploads/2018/09/180918_upendra.2-150x150.jpgBP9 Bureauಸಿನಿಮಾಸೆ. 18 ಸ್ಯಾಂಡಲ್​ವುಡ್​ಗೆ ಒಂದು ಸ್ಪೆಷಲ್​ ಡೇ. ಯಾಕಂದ್ರೆ ಅಂದು ತ್ರಿವಳಿ  ಸ್ಟಾರ್​ಗಳ ಹುಟ್ಟುಹಬ್ಬ ಒಂದೇ ದಿನ. ಇಂದು ಕನ್ನಡ ಚಿತ್ರರಂಗದ ಲೆಸೆಂಡ್​ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಮತ್ತು ಶೃತಿ ಅವರಿಗೆ ಅಭಿಮಾನಿಗಳಿಂದ ಹುಟ್ಟುಹಬ್ಬದ ಮಹಾಪೂರವೇ ಹರಿದುಬರುತ್ತಿವೆ. ಉಪ್ಪಿ ಇಂದು 50 ನೇ  ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಧ್ಯ ರಾತ್ರಿಯಿಂದಲೇ ಅಭಿಮಾನಿಗಳು  ಕತ್ರಿಗುಪ್ಪೆಯ ಅವರ ನಿವಾಸದ ಬಳಿ ಬೃಹತ್​ ಗಾತ್ರದ ಕೇಕ್​  ಹಿಡಿದು ನಿಂತಿದ್ದರು. ಇದೀಗ  ಅಭಿಮಾನಿಗಳಷ್ಟೇ ಅಲ್ಲಾ,  ತಮ್ಮ...Kannada News Portal