ದೊಡ್ಡಬಳ್ಳಾಪುರ: ಜಿಲ್ಲೆಯ ಯುವಕ ನೋರ್ವ ವಿಷ ಸೇವಿಸುತ್ತಿರುವ  ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಈಗ ಈ ವಿಡೀಯೋ ಎಲ್ಲಡೆ ವೈರಲ್ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆಯಲ್ಲಿ ಒಂದು ಘಟನೆ ನಡೆದಿದೆ.

ನಗರದ ದೇವರಾಜ್  (23) ಮೃತ ದುರ್ದೈವಿ ಎಂದು ತಿಳಿದು ಬಂದಿದೆ, ಅಂದಹಾಗೆ ಮೃತ ದೇವರಾಜ್ ಕಳೆದ ಹಲವು ವರ್ಷಗಳಿಂದ ಓರ್ವ ಯುವತಿಯನ್ನ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಡುವಂತೆ ಎರಡು ಕಡೆಯ ಮನೆಯವರನ್ನ ಒಪ್ಪಿಸುತ್ತಿದ್ದ ಎಂದು ತಿಳಿದುಬಂದಿದೆ.

ಆದರೆ ಪ್ರೇಮ ವಿವಾಹಕ್ಕೆ ಎರಡು ಕಡೆಯ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಯುವಕ ನೆನ್ನೆ ಸಂಜೆ ಮನೆಯಲ್ಲೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜತೆಗೆ ಮೃತ ದೇವರಾಜ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರೂವ ವಿಡಿಯೋವನ್ನ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ನಂತರ ಮನೆಯಲ್ಲೆ ಕುಸಿದು ಬಿದ್ದಿದ್ದಾನೆ.

ಅಲ್ಲದೆ ಮನೆಯಲ್ಲಿ ಕುಸಿದು ಬಿದ್ದು ಒದ್ದಾಡುತ್ತಿದ್ದ ದೇವರಾಜ್ ನನ್ನ ಕಂಡ ಸ್ಥಳಿಯರು ಕೂಡಲೆ ಸ್ಥಳಿಯ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದಾರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾನೆ. ಇನ್ನೂ ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ತನಿಖೆ ಮುಂದುವರೆಸಿದ್ದಾರೆ.

Please follow and like us:
0
http://bp9news.com/wp-content/uploads/2018/07/Love-disappoint.pnghttp://bp9news.com/wp-content/uploads/2018/07/Love-disappoint-150x150.pngBP9 Bureauಪ್ರಮುಖಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರ: ಜಿಲ್ಲೆಯ ಯುವಕ ನೋರ್ವ ವಿಷ ಸೇವಿಸುತ್ತಿರುವ  ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಈಗ ಈ ವಿಡೀಯೋ ಎಲ್ಲಡೆ ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆಯಲ್ಲಿ ಒಂದು ಘಟನೆ ನಡೆದಿದೆ. ನಗರದ ದೇವರಾಜ್  (23) ಮೃತ ದುರ್ದೈವಿ ಎಂದು ತಿಳಿದು ಬಂದಿದೆ, ಅಂದಹಾಗೆ ಮೃತ ದೇವರಾಜ್ ಕಳೆದ ಹಲವು ವರ್ಷಗಳಿಂದ ಓರ್ವ ಯುವತಿಯನ್ನ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಡುವಂತೆ ಎರಡು ಕಡೆಯ ಮನೆಯವರನ್ನ ಒಪ್ಪಿಸುತ್ತಿದ್ದ ಎಂದು ತಿಳಿದುಬಂದಿದೆ. var domain = (window.location...Kannada News Portal