ಬೆಂಗಳೂರು: ನವದೆಹಲಿಯಲ್ಲಿ  ಸಿಎಂ ಕುಮಾರಸ್ವಾಮಿ ಅವರದ್ದೇ  ಕಾರುಬಾರು ಎಂದರೂ  ತಪ್ಪಿಲ್ಲ. ಬೆಳಿಗ್ಗೆ ಯಿಂದ   ಮಧ್ಯಾಹ್ನದ ವರೆಗೆ ಅವರು  ಎಡಬಿಡದೆ ಅನೇಕ ನಾಯಕರನ್ನು  ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಿನ್ನೆ ಬೆಳಿಗ್ಗೆ   ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ  ಸಂಪುಟ ವಿಸ್ತರಣೆ ನಂತರ ಉಂಟಾಗಿರುವ  ವಿದ್ಯಾಮಾನಗಳು,  ಖಾತೆಯಲ್ಲಿನ ಅಸಮಾಧಾನ ಮತು ಮತ್ತೆ ಸಂಪುಟ  ವಿಸ್ತರಣೆ ಮಾಡಬೇಕಾದರೆ  ತೆಗೆದುಕೊಳ್ಳಬೇಕಾದ ಎಚ್ಚರಿಕೆ ಮುಂತಾದ  ವಿಷಯಗಳ ಬಗ್ಗೆ  ಮಾತುಕತೆ ನಡೆಸಿದ್ದಾರೆ.

ನಂತರ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್, ಕೇಂದ್ರ ಜಲ   ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ  ರಚನೆ ಮತು ಅದರಿಂದ ರಾಜ್ಯಕ್ಕೆ ಆಗಬಹುದಾದ  ಪರಿಣಾಮಗಳನ್ನು   ಕೇಂದ್ರದ ಗಮನಕ್ಕೆ ತಂದಿದ್ದಾರೆ. ಪ್ರಾಧಿಕಾರ  ರಚನೆಯಲ್ಲಿ ಕೆಲವು ಅವೈಜ್ಞಾನಿಕ ಅಂಶಗಳಿದ್ದು ಅದನ್ನು ತೆಗೆಯಬೇಕು ಮತ್ತು ಕೆಲವು ನಿಯಮಗಳಿಗೆ ತಿದ್ದುಪಡಿ ಇಲ್ಲವೇ ಮಾರ್ಪಾಡು  ಮಾಡಬೇಕು ಎಂದು ಮನವಿ ಮಾಡಿದ್ದು ಕೇಂದ್ರ ಈ ಸಂಬಂಧ  ಮತ್ತೊಂದು   ಸಭೆ ಕರೆಯುವುದಾಗಿ ಭರವಸೆಕೊಟ್ಟಿದೆ ಎಂದು ಸಭೆಯ ಬಳಿಕ ಕುಮಾಸ್ವಾಮಿ ಸುದ್ದಿಗಾರರಿಗೆ  ಹೇಳಿದರು. ಇತ್ತ ಬೆಂಗಳೂರಿನಲ್ಲಿ ರಾಜ್ಯದ ಜಲಸಂಪನ್ನಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಕೇಂದ್ರದ  ಪ್ರಾಧಿಕಾರ   ರಚನೆಗೆ ನಮ್ಮ ಸಮ್ಮತಿಯಿಲ್ಲ ಮೇಲಾಗಿ ಪ್ರಾಧಿಕಾರಕ್ಕೆ  ರಾಜ್ಯ ¸ರ್ಕಾರ ತನ್ನ ಪ್ರತಿನಿಧಿಯನ್ನು  ನೇಮಕ ಮಾಡಿಲ್ಲ  ಇದಲ್ಲದೆ ಸಂಸತಿನಲ್ಲಿ ಚೆರ್ಚೆ ಮಾಡದೆ ಏಕಾಏಕಿಯಾಗಿ ಚುನಾವಣಾ ಸಮಯದಲ್ಲಿ ಕೇಂದ್ರ ಪಾಧಿಕಾರ   ರಚನೆ ಮಾಡಿ ಅದನ್ನು ಪ್ರಜೆಟ್‍ನಲ್ಲಿ  ಪ್ರಕಟ ಮಾಡಿದೆ  ಎಂದು ಸಚಿವ ಶಿವಕುಮಾರ್  ಕಿಡಿಕಾರಿದ್ದಾರೆ.

Please follow and like us:
0
http://bp9news.com/wp-content/uploads/2018/06/congjds-ky6E-621x414@LiveMint-e1529383828792.jpghttp://bp9news.com/wp-content/uploads/2018/06/congjds-ky6E-621x414@LiveMint-e1529383828792-150x150.jpgBP9 Bureauಪ್ರಮುಖರಾಷ್ಟ್ರೀಯಬೆಂಗಳೂರು: ನವದೆಹಲಿಯಲ್ಲಿ  ಸಿಎಂ ಕುಮಾರಸ್ವಾಮಿ ಅವರದ್ದೇ  ಕಾರುಬಾರು ಎಂದರೂ  ತಪ್ಪಿಲ್ಲ. ಬೆಳಿಗ್ಗೆ ಯಿಂದ   ಮಧ್ಯಾಹ್ನದ ವರೆಗೆ ಅವರು  ಎಡಬಿಡದೆ ಅನೇಕ ನಾಯಕರನ್ನು  ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ನಿನ್ನೆ ಬೆಳಿಗ್ಗೆ   ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ  ಸಂಪುಟ ವಿಸ್ತರಣೆ ನಂತರ ಉಂಟಾಗಿರುವ ...Kannada News Portal