ಬೆಂಗಳೂರು : ದೇಶದಲ್ಲಿ ಪ್ರಾಂತೀಯ ಪಕ್ಷಗಳ ಯುಗ ಆರಂಭವಾಗಿದ್ದು, ಎಚ್‌.ಡಿ.ದೇವೇಗೌಡ ಅವರೇ ಮುಂದಿನ ಪ್ರಧಾನಿಯಾಗಬಹುದು ಎಂದು ಜೆಎಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌ ಭವಿಷ್ಯ ನುಡಿದರು.

ದೇಶದೆಲ್ಲೆಡೆ ಈಗ ಪ್ರಾದೇಶಿಕ ಪಕ್ಷಗಳೇ ಆಡಳಿತ ಹಿಡಿದಿವೆ. ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಕೋಮುವಾದ ಹಾಗೂ ಜಾತ್ಯತೀತ ವಾದದ ನಡುವೆ ಈಗ ಯುದ್ಧ ನಡೆಯುತ್ತಿದ್ದು, ಪರ್ಯಾಯ ಚಿಂತನೆಯ ಫಲವಾಗಿ ಪ್ರಾದೇಶಿಕ ಪಕ್ಷಗಳು ಬಲಗೊಂಡಿವೆ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರ ಹಿಡಿಯುತ್ತವೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ಸರ್ವಾಧಿಕಾರ ಧೋರಣೆ ಜನರಲ್ಲಿ ಬೇಸರ ಮೂಡಿಸಿದೆ. ಇದು ಕೇವಲ ಮಾತಿನ ಸರ್ಕಾರ. ಮನ್‌ ಕಿ ಬಾತ್, ಕಾಮ್‌ ಕಿ ಬಾತ್‌ ಆಗಲಿಲ್ಲ ಎಂಬ ಆಕ್ರೋಶವಿದೆ. ಮೋದಿಗೆ ಪರ್ಯಾಯ ನಾಯಕ ಯಾರು ಎಂಬ ಪ್ರಶ್ನೆಗೆ ದೇವೇಗೌಡರು ಉತ್ತರವಾಗಿ ಕಾಣುತ್ತಿದ್ದಾರೆ. ಅವರು ಪ್ರಾದೇಶಿಕ ಪಕ್ಷಗಳಲ್ಲಿ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರ ಅನುಭವ ಅವರನ್ನು ಈ ‍ಪಕ್ಷಗಳಿಗೆ ನಾಯಕನನ್ನಾಗಿ ಮಾಡಲಿದೆ ಎಂದರು.

Please follow and like us:
0
http://bp9news.com/wp-content/uploads/2018/08/DeveGowda.jpghttp://bp9news.com/wp-content/uploads/2018/08/DeveGowda-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯ"Deve Gowda is again PM candidate"!?!ಬೆಂಗಳೂರು : ದೇಶದಲ್ಲಿ ಪ್ರಾಂತೀಯ ಪಕ್ಷಗಳ ಯುಗ ಆರಂಭವಾಗಿದ್ದು, ಎಚ್‌.ಡಿ.ದೇವೇಗೌಡ ಅವರೇ ಮುಂದಿನ ಪ್ರಧಾನಿಯಾಗಬಹುದು ಎಂದು ಜೆಎಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌ ಭವಿಷ್ಯ ನುಡಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180813100114'); document.getElementById('div_1520180813100114').appendChild(scpt); ದೇಶದೆಲ್ಲೆಡೆ ಈಗ ಪ್ರಾದೇಶಿಕ ಪಕ್ಷಗಳೇ ಆಡಳಿತ ಹಿಡಿದಿವೆ. ಕರ್ನಾಟಕದಲ್ಲೂ ಪ್ರಾದೇಶಿಕ...Kannada News Portal