ಬೆಂಗಳೂರು: ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಜೆಡಿಎಸ್‌-ಕಾಂಗ್ರೆಸ್‌ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ರು. ಈ ಕಡೆ ಕಾಂಗ್ರೆಸ್‌ -–ಜೆಡಿಎಸ್‌ ರೆಸಾರ್ಟ್‌ ರಾಜಕಾರಣ ಮುಂದುವರೆದಿದೆ, ಅತ್ತ ಬಿಜೆಪಿಯವರು  ಆಪರೇಷವ್‌ ಕಮಲ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೆೇ ಮಾಜಿ ಪ್ರಧಾನಿ ದೇವೇಗೌಡ ಮತ್ತು ಪತ್ನಿ ಚನ್ನಮ್ಮ ತಿಮ್ಮಪ್ಪನ ಸಾನಿಧ್ಯಕ್ಕೆ ಹೋಗಲು ಸಿದ್ಧರಾಗಿದ್ದಾರೆ.

ತಮ್ಮ ಮಗನನ್ನೇ ಸಿಎಂ ಮಾಡಪ್ಪ ಅಂತ –ಹೆಚ್‌ಡಿಡಿ ದಂಪತಿ ತಿಮ್ಮಪ್ಪನಲ್ಲಿ ಹರಕೆ ಮಾಡಿಕೊಳ್ಳಲು ತಿರುಪತಿಗೆ ಹೋಗಲು ಸಿದ್ಧರಾಗಿದ್ದಾರಂತೆ. ಜೊತೆಗೆ ಜೆಡಿಎಸ್ ಶಾಸಕಾಂಗ ನಾಯಕ ಕುಮಾರಸ್ವಾಮಿಯನ್ನೂ ತಿರುಪತಿಗೆ ಬರುವಂತೆ ಹೇಳಿದ್ದಾರೆ. ಆದರೆ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಯಲ್ಲಿ  ಕುಮಾರಸ್ವಾಮಿ ಹೇಗೆ ತಾನೆ ಹೋಗ್ತಾರೆ?

ನಾಳೆ ದೇವೇಗೌಡ್ರಿಗೆ 84ನೇ ಹುಟ್ಟಹಬ್ಬದ ಸಂಭ್ರಮ. ಅದಕ್ಕಾಗಿ ದೇವೇಗೌಡ ದಂಪತಿ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ನಾಳೆ ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಲಿದ್ದಾರೆ. ಜೊತೆಗೆ ಮಗ ಸಿಎಂ ಆಗ್ಲಿ ಅಂತ ತಿಮ್ಮಪ್ಪನ ಸನ್ನಿಧಾನದಲ್ಲಿ ಹರಕೆ ಕೂಡ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Please follow and like us:
0
http://bp9news.com/wp-content/uploads/2018/05/timmappa-1.jpghttp://bp9news.com/wp-content/uploads/2018/05/timmappa-1-150x150.jpgBP9 Bureauಪ್ರಮುಖಬೆಂಗಳೂರು: ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಜೆಡಿಎಸ್‌-ಕಾಂಗ್ರೆಸ್‌ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ರು. ಈ ಕಡೆ ಕಾಂಗ್ರೆಸ್‌ -–ಜೆಡಿಎಸ್‌ ರೆಸಾರ್ಟ್‌ ರಾಜಕಾರಣ ಮುಂದುವರೆದಿದೆ, ಅತ್ತ ಬಿಜೆಪಿಯವರು  ಆಪರೇಷವ್‌ ಕಮಲ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೆೇ ಮಾಜಿ ಪ್ರಧಾನಿ ದೇವೇಗೌಡ ಮತ್ತು ಪತ್ನಿ ಚನ್ನಮ್ಮ ತಿಮ್ಮಪ್ಪನ ಸಾನಿಧ್ಯಕ್ಕೆ ಹೋಗಲು ಸಿದ್ಧರಾಗಿದ್ದಾರೆ. ತಮ್ಮ ಮಗನನ್ನೇ ಸಿಎಂ ಮಾಡಪ್ಪ ಅಂತ –ಹೆಚ್‌ಡಿಡಿ ದಂಪತಿ ತಿಮ್ಮಪ್ಪನಲ್ಲಿ ಹರಕೆ...Kannada News Portal