ಕನ್ನಡದ ರಿಯಾಲಿಟಿ ಶೊ ಬಿಗ್​ಬಾಸ್​​ ಸೀಸನ್​-5 ನಲ್ಲಿ  ಕೊನೆಯ ಹಂತದವರೆಗೂ ಆಡಿ ಅಭಿಮಾನಿಗಳ ಮನಗೆದ್ದಿದ್ದ,  ಕನ್ನಡತಿ  ಶೃತಿ ಪ್ರಕಾಶ್​ ಆಗೊಮ್ಮೆ-ಈಗೊಮ್ಮೆ ಸುದ್ದಿಯಾಗುತ್ತಲೇ  ಇದ್ದಾರೆ. ಸದ್ಯ ತಾವು ನೀಡಿದ ಆಟೋಗ್ರಾಫ್​ನಿಂದ ಸುದ್ದಿಯಲ್ಲಿದ್ದಾರೆ ಶೃತಿ ಪ್ರಕಾಶ್​.  ಅವರ ಅಭಿಮಾನಿಯೊಬ್ಬ ಕೇಳಿದ ಸಹಿಗೆ, ಶೃತಿ ಆಲೂಗೆಡ್ಡೆ ಮೇಲೆ  ಆಟೋಗ್ರಾಫ್​ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶೃತಿ ಆಲೂಗೆಡ್ಡೆ ಮೇಲೆ ಆಟೋಗ್ರಾಫ್​ ನೀಡುತ್ತಿರುವ ಫೋಟೋ ವೈರಲ್​ ಆಗಿದೆ.

ಇತ್ತೀಚಿನ ದಿನಗಳಲ್ಲಿ ಪುಸ್ತಕದ ಮೇಲೆ, ಟೀಶರ್ಟ್​ ಮೇಲೆ,  ತಾವು ಓಡಾಡಿಸುವ ವಾಹನಗಳ ಮೇಲೆ ಆಟೋಗ್ರಾಫ್​  ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದರು. ಸದ್ಯ ಆ ಸಂಪ್ರದಾಯ ಸ್ವಲ್ಪ ಕಡಿಮೆಯಾಗಿದೆ. ಹೀಗೇನಿದ್ರೂ ಸೆಲ್ಫಿ ಟ್ರೆಂಡ್​ , ತಮ್ಮ ನೆಚ್ಚಿನ ಸ್ಟಾರ್​ನ್ನು ನೋಡಿದ ಕೂಡಲೇ ಸೆಲ್ಫಿ ಕ್ಲಿಕ್​ ಆಗಿ ಬಿಡುತ್ತೆ. ಆದರೆ ಇದೇನಪ್ಪಾ ಶೃತಿ ಆಲೂ ಮೇಲೆ ಆಟೋಗ್ರಾಫ್​…!ಅಂತಿದ್ದೀರಾ…

ಬಿಗ್​ಬಾಸ್​ನಲ್ಲಿ  ಜೆಕೆ  ಪೇರ್​ ಅಂತಾ ಭಾರೀ  ಸುದ್ದಿಯಾಗಿದ್ದ ಶೃತಿ ಹುಡುಗರ ಹಾರ್ಟ್​  ಫೇವರಿಟ್​ ಆಗಿದ್ದರು.  ತಮ್ಮದೇ ಕನ್ನಡದ ಸ್ಟೈಲ್​ನಲ್ಲಿ ಮಾತನಾಡುತ್ತಿದ್ದ  ಬೆಳಗಾವಿಯ ಈ ಹುಡುಗಿ ವಿನ್ನರ್​ ಆಗುವವರೆಗೆ  ಹೋಗಿ ಎಲಿಮಿನೇಟ್​ ಆಗಿದ್ದಳು. ಮೂಲತಃ ಈಕೆ ಸಿಂಗರ್. ಜೊತೆಯಲ್ಲಿಯೇ ನಟನೆಯನ್ನು ಮಾಡಿಕೊಂಡು ಬಂದಿದ್ದಾಳೆ. ಕನ್ನಡದ ಸಿನಿಮಾವೊಂದರಲ್ಲಿ ನಟಿಸ್ತಾ ಇದ್ದಾರೆ.  ಇರುವ ಬಗ್ಗೆಯೂ ಮಾಹಿತಿ   ಹೊರ ಬಿದ್ದಿತು. ಅದೇನೇ ಇರಲೀ ಶೃತಿ ಮತ್ತೊಮ್ಮೆ ಫೇಸ್​ಬುಕ್​ನಲ್ಲಿ ಟ್ರೆಂಡ್​ ಆಗೋಕೆ ಶುರುವಾಗಿದ್ದು ತಾವು ನೀಡುತ್ತಿರುವ ಆಲೂ ಮೇಲಿನ ಆಟೋಗ್ರಾಫ್​ನಿಂದ.

ಅಭಿಮಾನಿಯೊಬ್ಬರು ಆಲೂಗೆಡ್ಡೆ  ಮೇಲೆ ನಿಮ್ಮ ಆಟೋಗ್ರಾಫ್​ ಬೇಕೆಂದು ಕೇಳಿಕೊಂಡಿದ್ದಾರೆ. ಸದ್ಯ ಶೃತಿ  ಪ್ರಕಾಶ್​ ಅಭಿಮಾನಿಯ ಕೋರಿಕೆಯ ಮೇರೆಗೆ ಆಲೂಗೆಡ್ಡೆ ಮೇಲೆ ಸಹಿ ಹಾಕಿದ್ದಾರೆ.

ಇತ್ತೀಚೆಗೆ ಶೃತಿ ಪ್ರಕಾಶ್ ಸಿನಿಮಾ ಶೂಟಿಂಗ್ ಅಂತ ಲಂಡನ್ ಹೋಗಿದ್ದರು. ಅಲ್ಲಿ ಸುಂದರವಾದ ಬುರ್ಟನ್ ಸ್ಥಳದಲ್ಲಿ ‘ಲಂಡನ್ ನಲ್ಲಿ ಲಂಬೋದರ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕಿಂಗ್ಸ್ ಬ್ರೈಡ್ ಇನ್ ಹೋಟೆಲ್ ಮಾಲೀಕ ಶೃತಿ ಪ್ರಕಾಶ್ ಕೈಗೆ ಆಲೂಗಡ್ಡೆ ನೀಡಿ ಆಟೋಗ್ರಾಫ್ ಕೇಳಿದ್ದಾರೆ. ಬಳಿಕ ಶೃತಿ ಅಭಿಮಾನಿಯ ಇಚ್ಛೆಯಂತೆಯೇ ಆಲೂಗಡ್ಡೆ ಮೇಲೆಯೇ ತಮ್ಮ ಆಟೋಗ್ರಾಫ್ ಹಾಕಿಕೊಟ್ಟಿದ್ದಾರೆ.

ಹೋಟೆಲ್ ಮಾಲೀಕರು ಒಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದು, ಗಣ್ಯ ವ್ಯಕ್ತಿಗಳ ಬಳಿ ಆಲೂಗಡ್ಡೆ ಮೇಲೆಯೇ ಆಟೋಗ್ರಾಫ್ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಈಗ ನಟಿ ಶೃತಿ ಅವರ ಬಳಿಯೂ ಆಲೂಗಡ್ಡೆ ಮೇಲೆಯೇ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.ಎಲ್ಲ ಸುಂದರ ಕ್ಷಣಗಳನ್ನು ಮೊಬೈಲ್ ಸೆರೆಹಿಡಿದಿರುವ ಶೃತಿ ಪ್ರಕಾಶ್ ತಮ್ಮ ಇನ್ಸ್ ಸ್ಟ್ರಾಗ್ರಾಂ ನಲ್ಲಿ ವಿಡಿಯೋ ಹಾಕಿ, ಬಹಳ ಚೆನ್ನಾಗಿ ಅನ್ನಿಸಿತು ಎಂದು ಸಂತಸದಿಂದ ಬರೆದುಕೊಂಡಿದ್ದಾರೆ.

`ಲಂಡನ್ ನಲ್ಲಿ ಲಂಬೋದರ’ ಚಿತ್ರದಲ್ಲಿ ನವ ನಾಯಕ ಸಂತೋಷ್ ಜೊತೆ ಶೃತಿ ಹೀರೋಯಿನ್ ಆಗಿ ಆಕ್ಟ್ ಮಾಡುತ್ತಿದ್ದಾರೆ. ಚಿತ್ರ ರಾಜ್ ಸೂರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಮೊದಲು ರಾಜ್ ಸೂರ್ಯ ಚಮಕ್ ಹಾಗೂ ಇನ್ನು ಅನೇಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈ ಮಾಸ್ಟರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

Please follow and like us:
0
http://bp9news.com/wp-content/uploads/2018/07/IMAGE80598911.jpghttp://bp9news.com/wp-content/uploads/2018/07/IMAGE80598911-150x150.jpgBP9 Bureauಸಿನಿಮಾಕನ್ನಡದ ರಿಯಾಲಿಟಿ ಶೊ ಬಿಗ್​ಬಾಸ್​​ ಸೀಸನ್​-5 ನಲ್ಲಿ  ಕೊನೆಯ ಹಂತದವರೆಗೂ ಆಡಿ ಅಭಿಮಾನಿಗಳ ಮನಗೆದ್ದಿದ್ದ,  ಕನ್ನಡತಿ  ಶೃತಿ ಪ್ರಕಾಶ್​ ಆಗೊಮ್ಮೆ-ಈಗೊಮ್ಮೆ ಸುದ್ದಿಯಾಗುತ್ತಲೇ  ಇದ್ದಾರೆ. ಸದ್ಯ ತಾವು ನೀಡಿದ ಆಟೋಗ್ರಾಫ್​ನಿಂದ ಸುದ್ದಿಯಲ್ಲಿದ್ದಾರೆ ಶೃತಿ ಪ್ರಕಾಶ್​.  ಅವರ ಅಭಿಮಾನಿಯೊಬ್ಬ ಕೇಳಿದ ಸಹಿಗೆ, ಶೃತಿ ಆಲೂಗೆಡ್ಡೆ ಮೇಲೆ  ಆಟೋಗ್ರಾಫ್​ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶೃತಿ ಆಲೂಗೆಡ್ಡೆ ಮೇಲೆ ಆಟೋಗ್ರಾಫ್​ ನೀಡುತ್ತಿರುವ ಫೋಟೋ ವೈರಲ್​ ಆಗಿದೆ. var domain = (window.location != window.parent.location)?...Kannada News Portal