ಬೆಂಗಳೂರು : ರೈತರ ಹಿತವೇ ನನ್ನ ಹಿತ. ರಾಜ್ಯದ ರೈತರ ಹಿತ ಕಾಯಲು ನಾನು ಬದ್ಧ. ಸಾಲ ಮನ್ನ ಮಾಡೇ ಮಾಡುತ್ತೇನೆ ಅದು ಆಗುವುದಿಲ್ಲ ಎಂದರೆ ನಾನು ಕುರ್ಚಿಗಂಟಿಕೊಂಡು ಕೂರುವುದಿಲ್ಲ. ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ನೂತನ ಸಿಎಂ ಹೆಚ್ ಡಿ ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ. ಅವರ ಮಾತುಗಳಲ್ಲಿ ಭಾವನಾತ್ಮಕತೆ ಮತ್ತು ಸಂಕಲ್ಪ ಎರಡೂ ಇದ್ದಂತೆ ಕಾಣುತ್ತಿದೆ.

ಆದರೆ ಕಾಂಗ್ರೆಸ್ ಸಾಲ ಮನ್ನಾ ವಿಚಾರದಲ್ಲಿ ಮೌನವಹಿಸಿದೆ, ಏಕೆಂದ್ರೆ ಸಾಲ ಮನ್ನಾ ಮಾಡಿದ್ರೆ ಈ ಕ್ರೆಡಿಟ್ ಹೋಗೋದು ಜೆಡಿಎಸ್ ಮತ್ತು ಕುಮಾರಸ್ವಾಮಿಗೆ, ಬತ್ತ ಬಡಿದೋನನ್ನು ಬಿಟ್ಟು ಎತ್ತಿದೋನಿಗೆ ಬಹುಮಾನ ಕೊಟ್ಟಂತೆ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್ ಸಿಎಂ ಗಿರಿ ಬಿಟ್ಟು ಕೊಟ್ಟು, ಈಗ ಇಮೇಜ್ ಕೂಡ ನೀಡಲು ತಯಾರಿಲ್ಲ ಎಂಬುದು ಮೇಲುನೋಟದ ಸತ್ಯ.
ಆದ್ದರಿಂದಲೇ ಏನೋ ಕುಮಾರಸ್ವಾಮಿ ಅವರೂ ಕೂಡ ರಾಜೀನಾಮೆ ಕೊಡುವ ಮಾತಿಗಳನ್ನಾಡಿ ಕಾಂಗ್ರೆಸ್ ಅವರನ್ನು ಹಿಕ್ಕಟ್ಟಿಗೆ ಸಿಲುಕಿಸಿ ಸಾಲಮನ್ನ ಮಾಡಲು ಪ್ರಯತ್ನ ಮಾಡುತ್ತಿರ ಬಹುದು. ಇದರ ಜೊತೆಗೆ ಬಿಜೆಪಿಯ ಟೀಕಾಪ್ರಹಾರವನ್ನು ರಾಜ್ಯದ ಜನರ ಎದುರು ನೆಗೆಟಿವ್ ಆಗಿ ತಿರುಗಿಸಿ, ಸಮಯ ನೀಡದೆ ನಮ್ಮನ್ನು ಗೋಳೋಯ್ದುಕೊಳ್ಳುತ್ತಿದ್ದಾರೆ ಎಂಬ ಅನುಕಂಪ ಗಿಟ್ಟಿಸಲು ಕುಮಾರಸ್ವಾಮಿ ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಿರ ಬಹುದು.

ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರು ಅವರ 54ನೇ ಪುಣ್ಯ ತಿಥಿ ಅಂಗವಾಗಿ ವಿಧಾನಸಭೆ ಆವರಣದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರ ಹಿತ ಬಯಸುವಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇನೆ. ರೈತರ ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ಗ ಳ ಸಾಲ ಮನ್ನಾ ಮಾಡುವ ಬದ್ಧತೆ ನನ್ನದಾಗಿದೆ. ಆದರೆ ಯಡಿಯೂರಪ್ಪನವರು ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುವುದನ್ನು ಬಿಡಬೇಕು ಎಂದರು.
ನಾನು ರಾಜ್ಯದ ರೈತರಲ್ಲಿ ಮನವಿ ಮಾಡುತ್ತೇನೆ, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ರೈತ ಸಂಘಟನೆಗಳು ನನಗೆ ಒತ್ತಡ ತರುವುದು ಬೇಡ, ನನಗೂ ರೈತರ ಬಗ್ಗೆ ಕಾಳಜಿ ಇದೆ. ನಾನು ಮುಖ್ಯಮಂತ್ರಿಯಾಗಿರುವುದೇ ರೈತರ ಕಲ್ಯಾಣಕ್ಕಾಗಿ. ನಾನು ಬಹುಮತ ಸಾಬೀತು ಪಡಿಸಿ ಎರಡು ದಿನವಾಗಿಲ್ಲ. ಮಂತ್ರಿ ಮಂಡಲ ರಚನೆಯಾಗಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ,

ರೈತರ ಸಾಲ ಮನ್ನಾ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರವವನಲ್ಲ, ಇವರೇನು ನನ್ನ ರಾಜೀನಾಮೆ ಕೇಳುವುದು? ನಾನು ರೈತರ ಸಾಲ ಮನ್ನಾ ಮಾಡಲಿಲ್ಲವೆಂದರೆ ನಾನೇ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ ಎಂದು ಪುನರುಚ್ಚರಿಸಿದರು.

ಕುಮಾರಸ್ವಾಮಿ

ನಾನು ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ನುವರ ಮುಲಾಜಿನಲ್ಲಿದ್ದೇನೆ. ಒಂದು ವಾರ ಸಮಯ ಕೊಡಿ ಸಚಿವ ಸಂಪುಟ ರಚನೆ ಪ್ರಕ್ರಿಯೆ ಅಂತಿಮವಾದ ನಂತರ ಸಾಲ ಮನ್ನಾ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ನ ವರು ಈಗ ಹಣಕಾಸು ಖಾತೆ ಕೇಳುತ್ತಿದ್ದಾರೆ. ಸಂಪುಟ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆ ಕೇಳುವುದು ಸಹಜ. ಇನ್ನೂ ಇದರ ಬಗ್ಗೆ ತೀರ್ಮಾನವಾಗಬೇಕಿದೆ. ಈಗಲೇ ಮಾಡಿ ಈಗಲೇ ಮಾಡಿ ಎಂದರೆ ಹೇಗೆ ಎಂದು ಗುಡುಗಿದ್ದಾರೆ.

ರಾಜ್ಯದ 2ನೇ ಬಂಗಾರಪ್ಪ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುವರೇ HDK??? :

ಒಂದೊಮ್ಮೆ ಸಿಎಂ ಕುಮಾರಸ್ವಾಮಿ ಅವರು ಸಾಲಮನ್ನ ಮಾಡಲಾಗಲಿಲ್ಲ. ಕಾಂಗ್ರೆಸ್ ಈ ಸಾಲಮನ್ನ ವಿಚಾರದಲ್ಲಿ ಸೂಕ್ತ ಬೆಂಬಲ ನೀಡಲಿಲ್ಲ ಎಂದಾದರೇ ? ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡುತ್ತೇನೆ ಎನ್ನುತ್ತಿದ್ದಾರೆ. ನುಡಿದಂತೆ ಕುಮಾರಸ್ವಾಮಿ ರೈತರ ಸಾಲಮನ್ನ ಮಾಡಲು ಸಾಧ್ಯವಾಗದ ಮುಖ್ಯಮಂತ್ರಿ ಪಟ್ಟ ನನಗೆ ಬೇಡ ಎಂದು ರಾಜೀನಾಮೆ ಕೊಟ್ಟರೆ, ಈ ರಾಜ್ಯ ಮತ್ತೊಬ್ಬ ದಕ್ಷ, ರೈತ ಪರ , ಹಠವಾದಿ, ಸಮಾಜವಾದಿ ಮುಖ್ಯಮಂತ್ರಿಗಳನ್ನು ಕಂಡಂತೆ ಆಗುತ್ತದೆ.
ಹೌದು, ಕುಮಾರಸ್ವಾಮಿ ಅವರು ರಾಜ್ಯ ಕಂಡ, ಇತಿಹಾಸದಲ್ಲಿ ಎಂದೂ ಅಳಿಯದ ಓರ್ವ ರೈತ ನಾಯಕನಾಗಿ ಅಚ್ಚಳಿಯದೆ ಉಳಿಯುವಂತಹ ಒಂದು ಅವಕಾಶ ಬಂದು ಅವರ ಜೆಪಿ ನಗರ ಮನೆ ಭಾಗಿಲಿನಲ್ಲಿ ನಿಂತಿದೆ, ಅದೇನಪ್ಪಾ ಅಂದ್ರೆ 2ನೇ ಬಂಗಾರಪ್ಪ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದು.

YES , 1924ರಲ್ಲಿಯೇ ಕಾವೇರಿ ಒಪ್ಪಂದವಾಗಿದ್ದರೂ 1991ರವರೆಗೆ ಇದೊಂದು ಸಾರ್ವಜನಿಕ ಸಮಸ್ಯೆಯಾಗಿದ್ದಿಲ್ಲ, ಅಲ್ಲಿಯವರೆಗೂ ಒಂದು ಅಲಿಖಿತ ನಿಯಮದಂತೆ ಏನೋ ಹೊಂದಾಣಿಕೆಯಿಂದ ನಡೆಯುತ್ತಿತ್ತು. ಆದರೆ 1991ರಲ್ಲಿ ಜೆ. ಜಯಲಲಿತ ತಕರಾರಿನಿಂದ ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ತೀರ್ಪು ಹೊರಬಿದ್ದ ನಂತರ ಇದೊಂದು ದೊಡ್ಡ ಸಮಸ್ಯೆಯೇ ಆಯಿತು. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ತೀರ್ಪು ಒಪ್ಪಲು ಸಾಧ್ಯವಿಲ್ಲ, ಒಂದು ಹನಿ ನೀರನ್ನು ಬಿಡುವುದಿಲ್ಲ ಎಂದು ಸುಗ್ರೀವಾಜ್ಞೆ ಜಾರಿಗೆ ತಂದರು. ಇದು ಭಾರೀ ವಿವಾದವನ್ನು ಸೃಷ್ಟಿಸಿತು.

ಈ ಮಧ್ಯಂತರ ತೀರ್ಪು ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾಕಷ್ಟು ಅನಾಹುತವನ್ನೂ ಮಾಡಿತ್ತು. ಹಿಂಸಾಚಾರ ಭುಗಿಲೆದ್ದಿತ್ತು. ಇದನ್ನು ಗಮನಿಸಿಯೇ ಬಂಗಾರಪ್ಪ ಅವರು ನ್ಯಾಯಮಂಡಳಿ ತೀರ್ಪಿಗೆ ಸಡ್ಡು ಹೊಡೆದು ಸುಗ್ರೀವಾಜ್ಞೆ ಜಾರಿಗೆ ತಂದರು. ಅದೆಲ್ಲಾ ನಡೆಯಲ್ಲಾ ಕಾವೇರಿ ನೀರು ಬಿಡಲೇ ಬೇಕು ಎಂದು ಕೇಂದ್ರದಲ್ಲಿ ಹೈಕಮಾಂಡ್ ಒತ್ತಡ ಹೇರಲು ಪ್ರಾರಂಭಸಿತು. ಆಗ ಬಂಗಾರಪ್ಪ ನನ್ನ ರೈತರೇ ನನಗೆ ಮುಖ್ಯ ಖುರ್ಚಿಯನ್ನು ನಾನು ಹುಟ್ಟುತ್ತಾ ತೆಗೆದು ಕೊಂಡೇನು ಬಂದಿರಲಿಲ್ಲ ಎಂದವರೇ ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ರಾಜೀನಾಮೆ ಎಸೆದು ಗಂಡಸ್ಸು ಅಂದ್ರೆ ಗಂಡೆದೆ ಅಂದ್ರೆ ಅದು ಇವತ್ತಿಗೂ ರಾಜಕೀಯದಲ್ಲಿ ಬಂಗಾರಪ್ಪನವರದ್ದು ಎಂಬ ಮಾತುಗಳಿಗೆ ಇಂದಿಗೂ ಪಾತ್ರರಾಗುವಂತ ನಿರ್ಧಾರವನ್ನು ಕೈಗೊಂಡಿದ್ದರು.

ಅದೇ ರೀತಿಯಾದಂತಹ ಒಂದು ಸುವರ್ಣ ಅವಕಾಶವನ್ನು ಇದೀಗ ಕುಮಾರಸ್ವಾಮಿ ಅವರೂ ಕೂಡ ತಮ್ಮ ಮನೆ ಬಾಗಿಲಿಗೆ ಕರೆಸಿಕೊಂಡಿದ್ದಾರೆ. ನೂತನ ಮೈತ್ರಿ ಸರ್ಕಾರವನ್ನು ಮಾಡೋಣ ಬನ್ನಿ ಎಂದು ಕರೆ ನೀಡಿದ್ದು, ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಮನೆ ಬಾಗಿಲಿನ ಕದತಟ್ಟಿದ್ದು ಕಾಂಗ್ರೆಸ್. ಇದೀಗ ಸರ್ಕಾರವನ್ನು ರಚನೆ ಮಾಡುವ ಕೈಂಕರ್ಯ ಜೋರಾಗಿಯೇ ನಡೆಯುತ್ತಿದೆ. 10 ವರ್ಷಗಳಿಂದ ಅಧಿಕಾರ ಕಾಣದೆ ಸೊರಗಿದ್ದ ತೆನೆಗೆ ಪೌಷ್ಠಿಕಾಂಶ ದೊರೆತಂತೆ ಇದೀಗ ಮೈತ್ರಿ ಸರ್ಕಾರದ ಅಧಿಕಾರದ ಚುಕ್ಕಾಣಿ ದೊರೆತಿದೆ. ಹೀಗಿರುವಾಗ ಬಿಜೆಪಿಯವರ ಸಾಲಮನ್ನ ಮಾಡಲೇ ಬೇಕು ಎಂಬ ಬಿಗೀ ಪಟ್ಟಿನಿಂದ ಮತ್ತು ಮತ್ತೆ ಮಾತು ತಪ್ಪಿದ ಕುಮಾರಸ್ವಾಮಿ ಎಂಬ ಅಪಾತ್ರಕ್ಕೆ ಒಳಗಾಗ ಬಾರದು ಎಂಬ ಕಾರಣಕ್ಕೆ, ಸಾಲ ಮನ್ನಗೆ ಅವಕಾಶ ಆಗದೇ ಇದ್ರೆ , ಇದೇ ವಿಚಾರ ಬಿಜೆಪಿಗೆ ಮತ್ತೆ ವರದಾನವಾಗಿ ಮುಂಬರುವ ಚುನಾವಣೆಯಲ್ಲಿ ಫಲಪ್ರದಾಯವಾಗಿ ಬಿಡಬಹುದು ಎಂಬ ರಾಜಕೀಯ ಲೆಕ್ಕಾಚಾರದ ಹಿನ್ನಲೆಯಲ್ಲಿ ಇದೀಗ ಸಿಎಂ ರಾಜೀನಾಮೆ ಕೊಡುವ ಮಾತುಗಳನ್ನಾಡುತ್ತಿದ್ದಾರೆ. ಇದರೊಂದಿಗೆ ಒನ್ಸ್ ಎಗೇನ್ ಜೆಡಿಎಸ್ ಮಾಸ್ಟರ್ ಮೈಂಡ್ ಸ್ಟೆಪ್ ಇಡಲು ಜೆಡಿಎಸ್ ಮುಂದಾಗಿದೆ.

ಸಾಲ ಮನ್ನಾ ಮಾಡಲಾಗಲಿಲ್ಲ ಎಂದು ರಾಜೀನಾಮೆ ನೀಡಿ ಹೊರ ನಡೆದರೆ , ಕಾಂಗ್ರೆಸ್ ಮೇಲೆ ರಾಜ್ಯದ ಜನರಿಗೆ ಸಿಟ್ಟು ಮತ್ತು ಪಾಪ ನಮಗಾಗಿ ಸಿಎಂ ಸ್ಥಾನವನ್ನೇ ಬಿಟ್ಟರು ಎಂಬ ಭಾವನಾತ್ಮಕತೆ ಜನರ ಮನಸ್ಸಿನಲ್ಲಿ ಪ್ರೀತಿ ಗಿಟ್ಟಿಸಿದಂತಾಗ ಬಹುದು. ಇದರಿಂದ ಬಿಜೆಪಿಗೆ 2008ರಲ್ಲಿ ಬಿಎಸ್​​​​ವೈಗೆ ದೊರೆತಂತೆ ಅನುಕಂಪದ ಅಲೆ ಮೇಲೆ ಪೂರ್ಣ ಬಹುಮತ ಪಡೆದು ಅಧಿಕಾರದ ಗದ್ದುಗೆಯಲ್ಲಿ ಯಾರ ಹಂಗೂ ಇಲ್ಲದೇ, ಕೂರ ಬಹುದಾದ ವಾತಾವಣರ ನಿರ್ಮಾಣ ಮಾಡಿಕೊಳ್ಳ ಬಹುದು.
ಈ ಲೆಕ್ಕಾಚಾರಗಳನ್ನು ಹಾಕಿಯೇ ಏನೋ ದೇವೇಗೌಡರು ಕರೆದು ಕುಮಾರಸ್ವಾಮಿ ಜೊತೆ ಈ ರೀತಿ ಹೇಳಿಕೆಗಳನ್ನು ನೀಡು, ಒಂದೊಮ್ಮೆ ಕಾಂಗ್ರೆಸ್ ಸಾಲ ಮನ್ನ ಮಾಡಲು ಸುತಾರಾಮ್ ಒಪ್ಪಲೇ ಇಲ್ಲ ಎಂದಾದರೆ ರೈತರ ಕೋಪದಿಂದ ತಪ್ಪಿಸಿ ಕೊಳ್ಳಲು ನಮಗೆ ಇದು ಸಹಕಾರವಾಗ ಬಹದು ಎಂದು ತಿಳಿಸಿದರ ಬಹುದು ಆದ ಕಾರಣ ವಾಗಿಯೇ ಕುಮಾರಸ್ವಾಮಿ ಈ ರೀತಿಯಾದ ಹೇಳಿಕೆಗಳನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ ಎಂದೇಳುತ್ತಿದೆ ರಾಜಕೀಯ ಪಡಸಾಲೆ.

 

ಆ ಕಾರಣಕ್ಕಾಗಿಯೇ ನಾವು ಪ್ರಾರಂಭದಲ್ಲಿಯೇ ಹೇಳಿದ್ದು, ರಾಜ್ಯದ 2ನೇ ಬಂಗಾರಪ್ಪ ಆಗ್ತಾರಾ ಸಿಎಂ ಕುಮಾರಸ್ವಾಮಿ ಎಂದು. ನಿಜ ಕುಮಾರಸ್ವಾಮಿ ಸದ್ಯದ ಪರಿಸ್ಥಿತಿಯನ್ನು ರಾಜಕೀಯವಾಗಿಯೇ ಉತ್ತರ ನೀಡಿ ರಾಜ್ಯದ ಜನರ ಮುಂದೆ ಅವರ ಮೇಲಿರುವ ಭಾವನಾತ್ಮಕ ಸಂಬಂಧವನ್ನು ಉಳಿಸಿ ಕೊಳ್ಳಲು ಸಿಎಂ ಸ್ಥಾನಕ್ಕೆ ರಾಜೀನಾಮೆ ಎಸೆದು ರೈತರ ಕಷ್ಟಕ್ಕೆ ಸ್ಪಂಧಿಸಿದ್ದೇ ಆದರೆ, ರಾಜ್ಯದಲ್ಲಿ ಜೆಡಿಎಸ್ ಅನುಕಂಪದ ಮೇಲೆ ಬಹುಮತವನ್ನು ಪಡೆಯ ಬಹುದು, ಜೊತೆಗೆ ಕುಮಾರಸ್ವಾಮಿ ರಾಜ್ಯ ಕಂಡ ಮತ್ತೊಬ್ಬ ಬಂಗಾರಪ್ಪ ( ಕಾವೇರಿ ವಿಚಾರದ ) ಎಂಬ ಹೆಗ್ಗಳಿಕೆಗೆ ಪಾತ್ರವಾಗಲೂಬಹುದು.

ಲೇಖನ : PSV 

Please follow and like us:
0
http://bp9news.com/wp-content/uploads/2018/05/ಕುಮಾರಸ್ವಾಮಿ.jpghttp://bp9news.com/wp-content/uploads/2018/05/ಕುಮಾರಸ್ವಾಮಿ-150x150.jpgPolitical Bureauಅಂಕಣಪ್ರಮುಖರಾಜಕೀಯDid not make a loan and give resignation !!! : The 2nd bungalow of the state CM CM Kumaraswamy !!!ಬೆಂಗಳೂರು : ರೈತರ ಹಿತವೇ ನನ್ನ ಹಿತ. ರಾಜ್ಯದ ರೈತರ ಹಿತ ಕಾಯಲು ನಾನು ಬದ್ಧ. ಸಾಲ ಮನ್ನ ಮಾಡೇ ಮಾಡುತ್ತೇನೆ ಅದು ಆಗುವುದಿಲ್ಲ ಎಂದರೆ ನಾನು ಕುರ್ಚಿಗಂಟಿಕೊಂಡು ಕೂರುವುದಿಲ್ಲ. ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ನೂತನ ಸಿಎಂ ಹೆಚ್ ಡಿ ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ. ಅವರ ಮಾತುಗಳಲ್ಲಿ ಭಾವನಾತ್ಮಕತೆ ಮತ್ತು ಸಂಕಲ್ಪ ಎರಡೂ ಇದ್ದಂತೆ ಕಾಣುತ್ತಿದೆ. ಆದರೆ ಕಾಂಗ್ರೆಸ್ ಸಾಲ ಮನ್ನಾ ವಿಚಾರದಲ್ಲಿ ಮೌನವಹಿಸಿದೆ, ಏಕೆಂದ್ರೆ...Kannada News Portal