ಮುತ್ತಿನ ಮತ್ತು…

ಮುತ್ತು, ಚುಂಬನ, ಕಿಸ್​… ಯಾವ್ಯಾವ ಭಾಷೆಯಲ್ಲಿ ಈ ಮುತ್ತು  (kiss)ನ್ನು ಹೇಗೆ ಕರೆಯುತ್ತಾರೋ ಗೊತ್ತಿಲ್ಲ. ಅಲ್ಲದೇ ಒಂದು ಮುತ್ತು ಕೊಡುವ ರೀತಿಯ ಮೇಲೆ ಅದ್ಯಾವುದರ ಸಂಕೇತ ಎಂಬುದನ್ನು ಕಂಡು ಹಿಡಿಯಬಹುದು. ಸಾವಿರ ಭಾವಗಳ ನಾಗಾಲೋಟಕ್ಕೆ ಫುಲ್​ಸ್ಟಾಪ್​ ನೀಡುವುದೇ ಚುಂಬನ. ಮಗು ಹುಟ್ಟಿದಾಗ ಮುದ್ದಿಸುತ್ತೇವೆ. ನೋವಾದಾಗ ಗೆಳೆಯ/ಗೆಳತಿಯನ್ನು ಸಂತೈಸುತ್ತೇವೆ. ಪ್ರೀತಿಯಾದಾಗ ಇಚ್ಛಾಪೂರ್ವಕವಾಗಿ ಆತ/ ಅವಳಲ್ಲಿ ಒಂದಾಗುತ್ತೇವೆ. ಪ್ರೇಮವೂ ಕೆಲವೊಮ್ಮೆ ಫಲಿಸುತ್ತದೆ. ಹೀಗೆ ಮುತ್ತು ಎಂಬುದು ಕೇವಲ ಸೆಕ್ಸ್​ ಅಥವಾ ಲೈಂಗಿಕ ವಾಂಛೆಯ ಸಂಕೇತವಲ್ಲ.

ಮಗು ಮುದ್ದಾಗಿ ಅಮ್ಮಾ ಬಂದು ಬಿಗಿದಪ್ಪಿ ಮುತ್ತು ಕೊಡುತ್ತದೆ. ಕ್ಯೂಟ್​ ನಗು, ಒಂದು ಸ್ನೇಹ, ಪ್ರೇಮ, ಸುಖ-ಸಂತೋಷ ಎಲ್ಲದರ ಸಂಕೇತವಾಗಿ ಆಲಿಂಗನ ಒಂದು ಚುಂಬನ. ಮುತ್ತಿನಿಂದ ಒಂದು ಸಂಬಂಧ ನಗುತ್ತದೆ, ಅರಳುತ್ತದೆ, ನಲಿಯುತ್ತದೆ. ಹಾ… ಅಂದಹಾಗೆ ಯಾವ್ಯಾವ ತೆರನಾದ ಮುತ್ತು, ಯಾವ್ಯಾವ ಭಾವನೆಯನ್ನು ಹೇಳುತ್ತದೆ ಎಂಬುದನ್ನು ನೋಡೋಣ…

ಹಣೆಯ ಮೇಲೆ ಒಂದು ಸ್ವೀಟ್​ ಮುತ್ತು: ಪ್ರೀತಿ, ಗೌರವ, ಹೆಮ್ಮೆ, ನೋವು, ಸಾಂತ್ವನದ ಸಂಕೇತವಾಗಿ ಹಣೆಗೆ ಮುತ್ತು ಕೊಡುವುದು ರೂಢಿಯಲ್ಲಿದೆ. ರಕ್ಷಣಾ ಭಾವವನ್ನು ಈ ಮುತ್ತು ನೀಡುತ್ತದೆ. ತಂದೆ, ತಾಯಿ, ಸ್ನೇಹಿತ, ಮಗು, ಪ್ರೇಮಿ, ಒಡನಾಡಿ ಹೀಗೆ ಯಾರು ಬೇಕಾದರೂ ಹಣೆಗೆ ಮುತ್ತಿಟ್ಟು ನೋವು-ನಲಿವಿನಲ್ಲಿ ಪಾಲ್ಗೊಳ್ಳಬಹುದು.

-ಕೈಯಿಗೆ ಮತ್ತು ಕೊಡುವುದು: ಇದು ಸ್ನೇಹದ, ಪ್ರೇಮ ನಿವೇದನೆಯ ಸಂಕೇತವೂ ಹೌದು. ವ್ಯಕ್ತಿಯ ಇಚ್ಛೆಯನ್ನು ಮತ್ತು ಭಾವನೆಯನ್ನು ತಿಳಿಸಲು ಕೈಯಿಗೆ ಮುತ್ತು ಕೊಡುವುದು ರೂಢಿ. ಯಾವ ವ್ಯಕ್ತಿ ಸಂಪರ್ಕ ಹೊಂದಲು ಬಯಸುತ್ತಾನೆ ಎಂಬುದು ಮತ್ತು ಭಾವೋದ್ರಿಕ್ತ ಸಂಜ್ಞೆಯಾಗಿ ಕೈಯಿಗೆ ಮುತ್ತು ಕೊಡುವುದು ಚಾಲ್ತಿಯಲ್ಲಿದೆ.

-ಕೆನ್ನೆ ಮತ್ತು ಕಿವಿಗೆ ತಾಕುವಂತೆ ಕೊಡುವ ಕಿಸ್​: ಇದು ಆಶ್ಚರ್ಯ, ರೊಮ್ಯಾಂಟಿಕ್​ ಮೂಡ್​, ಫ್ಯಾಶನ್​, ಭಾವಗಳ ಸಂಕೇತವಾಗಿದೆ. ಈ ಚುಂಬನ ಶೈಲಿಯೇ ಮತ್ತು ತರಿಸುವಂಥದ್ದು. ಸಂಗಾತಿಯನ್ನು ಉದ್ರೇಕಿಸುವ ಕ್ರಿಯೆಯೂ ಹೌದು.

-ಫ್ರೆಂಚ್​  ಚುಂಬನ: ಎರಡು ಪ್ರೇಮಗಳ ಫಲಿತ. ಇಬ್ಬರು ತಾವು ತಮ್ಮ ಸಂಬಂಧವನ್ನು ಒಪ್ಪಿರುವ ಸಂಕೇತ. ಇದು ಇಬ್ಬರ ಆಸಕ್ತಿ ಮತ್ತು ಮನರಂಜನೆಯ, ರೊಮ್ಯಾಂಟಿಕ್​ ಭಾವವನ್ನು ಸ್ಫುರಿಸುತ್ತದೆ. ಪ್ರೀತಿಯ ನೈಜತೆಯನ್ನು ಸಂಬಂಧಕ್ಕೆ ಪರಿವರ್ತಿಸಿದಾಗ ಉಂಟಾಗುವ ಪರಿಭಾಷೆ.

-ಕೆನ್ನೆಗೆ ಕೊಡುವ ಮುತ್ತು: ಇದು ಸಂಗಾತಿ, ಸ್ನೇಹಿತರು, ಮಕ್ಕಳು ಯಾರಾದರೂ ಕೊಡಬಹುದು. ಪ್ರೀತಿ, ಸ್ನೇಹ, ಸರಳ ಜೀವನದ ಮಾದರಿಯನ್ನು ತಿಳಿಸುತ್ತದೆ. ನಮ್ಮಲ್ಲಾಗುವ ಸಂತಸ, ಸಂಭ್ರಮ, ಕೆಲ ಹೇಳಿಕೊಳ್ಳಲಾಗದ ಭಾವಗಳನ್ನು ಕೆನ್ನೆಗೆ ಕೊಡುವ ಮುತ್ತು ಹೇಳಿ ಬಿಡುತ್ತದೆ. ಫ್ಯಾಶನ್​, ಸ್ಟೈಲ್​ ಆದ ಸ್ವಭಾವವನ್ನು ಮೇಳೈಸುವ ಸಂಕೇತ.

-ತುಟಿಗೆ ನೀಡುವ ಚುಂಬನ : ಸಂಗಾತಿಗೆ ಪ್ರೇಮ, ಭಾವೋದ್ವೇಗಕ್ಕೆ ಸಾಕ್ಷಿ. ದೀರ್ಘಕಾಲದ ಪ್ರೇಮ, ಪ್ರೀತಿ ಮತ್ತು ಪ್ರಣಯದ ಸಂಕೇತ. ಕೊಂಚ ತಲ್ಲಣ, ಭಾವುಕ, ಕ್ರೇಜಿ ಮುತ್ತು ಇದಾಗಿರುತ್ತೆ. ಅಂತೂ ನಮ್ಮ ಬಾಳ ಪಯಣದಲ್ಲಿ ಹೊಸ ಅಧ್ಯಾಯ ಶುರುವಾಗುತ್ತದೆ ಎಂಬುದರ ಸಂಕೇತವಾಗಿರುತ್ತದೆ.

ಹೀಗೆ ಚುಂಬನ ನಮ್ಮ ನಡುವೆ, ನಮ್ಮವರಿಗಾಗಿ ಕೊಡಲ್ಪಡುತ್ತದೆ. ಮುತ್ತು ಕೊಡು ಎಂಬುದಕ್ಕೆ ಮಾತ್ರ ಸೀಮಿತ. ನಾನು ಕೊಟ್ಟಿದ್ದೇನೆ ವಾಪಸ್​ ಕೊಡು. ನನಗೊಂದು ಮುತ್ತು ನಿನಗೊಂದು ಮುತ್ತು. ಮಳೆ, ಚಳಿ, ಬೇಸಗೆ ಯಾವುದೇ ಕಾಲವಿರಲಿ. ಮುತ್ತಿಗೆ ಸಾಟಿ ಮುತ್ತು ಮಾತ್ರ…

-ಲೇಖನ: ರೇಣುಕಾ ರಾ. ಧರಿಯಣ್ಣವರ 

Please follow and like us:
0
http://bp9news.com/wp-content/uploads/2017/12/132457698.jpghttp://bp9news.com/wp-content/uploads/2017/12/132457698-150x150.jpgBP9ಅಂಕಣಪ್ರಮುಖಲೈಫ್​ ಸ್ಟೈಲ್​​ ಗುರುDid you kiss ... pearl you know?ಮುತ್ತಿನ ಮತ್ತು… ಮುತ್ತು, ಚುಂಬನ, ಕಿಸ್​… ಯಾವ್ಯಾವ ಭಾಷೆಯಲ್ಲಿ ಈ ಮುತ್ತು  (kiss)ನ್ನು ಹೇಗೆ ಕರೆಯುತ್ತಾರೋ ಗೊತ್ತಿಲ್ಲ. ಅಲ್ಲದೇ ಒಂದು ಮುತ್ತು ಕೊಡುವ ರೀತಿಯ ಮೇಲೆ ಅದ್ಯಾವುದರ ಸಂಕೇತ ಎಂಬುದನ್ನು ಕಂಡು ಹಿಡಿಯಬಹುದು. ಸಾವಿರ ಭಾವಗಳ ನಾಗಾಲೋಟಕ್ಕೆ ಫುಲ್​ಸ್ಟಾಪ್​ ನೀಡುವುದೇ ಚುಂಬನ. ಮಗು ಹುಟ್ಟಿದಾಗ ಮುದ್ದಿಸುತ್ತೇವೆ. ನೋವಾದಾಗ ಗೆಳೆಯ/ಗೆಳತಿಯನ್ನು ಸಂತೈಸುತ್ತೇವೆ. ಪ್ರೀತಿಯಾದಾಗ ಇಚ್ಛಾಪೂರ್ವಕವಾಗಿ ಆತ/ ಅವಳಲ್ಲಿ ಒಂದಾಗುತ್ತೇವೆ. ಪ್ರೇಮವೂ ಕೆಲವೊಮ್ಮೆ ಫಲಿಸುತ್ತದೆ. ಹೀಗೆ ಮುತ್ತು ಎಂಬುದು ಕೇವಲ ಸೆಕ್ಸ್​...Kannada News Portal