ಬಾಲಿವುಡ್​ :  ತಮ್ಮ ನೆಚ್ಚಿನ ಸಿನಿಮಾ ಸ್ಟಾರ್​ಗಳನ್ನು ಅನುಸರಿಸುವುದು ಅಂದ್ರೆನೇ ಕೆಲವರಿಗೆ  ಫ್ಯಾಷನ್​. ಮತ್ತೆ ಕೆಲವರಿಗೆ ಕ್ರೇಜ್​. ಆದರೆ ಅಭಿಮಾನಿಗಳಿಂದ ಸ್ಟಾರ್​ಗೆ ದೂರು ಬಂದ್ರೆ ಹೇಗೆ…?  ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್​ ನ ನಂಬರ್​  1 ನಟಿ, ನಟನೆ ಮಾತ್ರವಲ್ಲ ದೀಪಿಕಾಳ ಫ್ಯಾಷನ್ಸ್​ ಸೆನ್ಸ್​ ಬಗ್ಗೆಯಂತೂ ಎರಡು ಮಾತಿಲ್ಲ. ಹೊಸ ಬಗೆಯ ಉಡುಪುಗಳಲ್ಲಿ ಆಕೆ ಮಿಂಚುತ್ತಾಳೆ. ಬಾಲಿವುಡ್​ನ ಬಹು ಬೇಡಿಕೆ  ನಟಿ ದೀಪಿಕಾ ಪಡುಕೋಣೆ ಸ್ಟೈಲ್​ ಬಗ್ಗೆ ಅಭಿಮಾನಿಗಳು ಕಂಪ್ಲೇಟ್​  ಮಾಡಲು ಶುರು  ಮಾಡಿದ್ದಾರೆ.  ಕೆಲವರಂತೂ  ದೀಪಿಕಾ ಳನ್ನು ನಾವು ಅನುಸರಿಸುತ್ತಿದ್ದೇವೆ ಆದರೆ ಅವರು ಒಮ್ಮೊಮ್ಮೆ ತಮ್ಮ ಸ್ಟೈಲ್​ ನಲ್ಲಿ ವ್ಯಾತ್ಯಾಸ ಮಾಡಿಕೊಳ್ಳುತ್ತಿರುವುದನ್ನು ಅವರ ಲುಕ್​ಅನ್ನು  ಕಡಿಮೆಗೊಳಿಸುತ್ತಿದೆ ಎಂಬುದು ಅಭಿಮಾನಿಗಳ ಅಪವಾದ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಶ್ವೇತ ವರ್ಣದ ಬಿಳಿ ಗೌನ್​  ಧರಿಸಿದ ದೀಪಿಕಾಳ ಲುಕ್​ ನಲ್ಲಿ ಅವಳ ಹೇರ್​ ಸ್ಟೈಲ್​ ಕಪ್ಪು ಚುಕ್ಕೆಯಂತಿತ್ತು. ಇದನ್ನು ನೋಡಿ ನಮಗೆ ಬೇಸರವಾಯ್ತು ಎನ್ನುತ್ತಾರೆ ಕೆಲ ಅಭಿಮಾನಿಗಳು. ದಯವಿಟ್ಟು ಈ ಹೇರ್ ಸ್ಟೈಲ್ ಸಾಕು, ಹೊಸತೇನಾದ್ರೂ ಟ್ರೈ ಮಾಡಿ ಅಂತಾ ದೀಪಿಗೆ ಜಾಲತಾಣಗಳಲ್ಲಿ ಸಲಹೆ ಕೊಟ್ಟಿದ್ದಾರೆ. ಗೇಬ್ರಿಯಲ್ ಜಾರ್ಜಿಯೋ ದೀಪಿಕಾಗೆ ಈ ಹೇರ್ ಸ್ಟೈಲ್ ಮಾಡಿದ್ದಾಳೆ.

ದೀಪಿಕಾ ಕೇಶ ವಿನ್ಯಾಸಕನನ್ನು ಬದಲಾಯಿಸ್ತಾಳೋ ಅಥವಾ ಹೊಸ ಹೊಸ ಹೇರ್ ಸ್ಟೈಲ್ ಟ್ರೈ ಮಾಡ್ತಾಳೋ ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ. ಈ ಹಿಂದೆ ಕೂಡ ಹಲವು ಬಾರಿ ದೀಪಿಕಾ ಇದೇ ಹೇರ್ ಸ್ಟೈಲ್ ರಿಪೀಟ್ ಮಾಡಿದ್ದಾರೆ. ಸೀರೆ, ಗೌನ್, ಚಿಕ್ ಲುಕ್ ಎಲ್ಲದಕ್ಕೂ ಇದೇ ರೀತಿ ಜೆಲ್ ಹಾಕಿ ಕೂದಲನ್ನು ಗಂಟು ಕಟ್ಟಿಕೊಂಡಿದ್ದನ್ನು ಗಮನಿಸಿಬಹುದು.

Please follow and like us:
0
http://bp9news.com/wp-content/uploads/2018/03/Capture-28.jpghttp://bp9news.com/wp-content/uploads/2018/03/Capture-28-150x150.jpgBP9 Bureauಸಿನಿಮಾಬಾಲಿವುಡ್​ :  ತಮ್ಮ ನೆಚ್ಚಿನ ಸಿನಿಮಾ ಸ್ಟಾರ್​ಗಳನ್ನು ಅನುಸರಿಸುವುದು ಅಂದ್ರೆನೇ ಕೆಲವರಿಗೆ  ಫ್ಯಾಷನ್​. ಮತ್ತೆ ಕೆಲವರಿಗೆ ಕ್ರೇಜ್​. ಆದರೆ ಅಭಿಮಾನಿಗಳಿಂದ ಸ್ಟಾರ್​ಗೆ ದೂರು ಬಂದ್ರೆ ಹೇಗೆ...?  ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್​ ನ ನಂಬರ್​  1 ನಟಿ, ನಟನೆ ಮಾತ್ರವಲ್ಲ ದೀಪಿಕಾಳ ಫ್ಯಾಷನ್ಸ್​ ಸೆನ್ಸ್​ ಬಗ್ಗೆಯಂತೂ ಎರಡು ಮಾತಿಲ್ಲ. ಹೊಸ ಬಗೆಯ ಉಡುಪುಗಳಲ್ಲಿ ಆಕೆ ಮಿಂಚುತ್ತಾಳೆ. ಬಾಲಿವುಡ್​ನ ಬಹು ಬೇಡಿಕೆ  ನಟಿ ದೀಪಿಕಾ ಪಡುಕೋಣೆ ಸ್ಟೈಲ್​ ಬಗ್ಗೆ ಅಭಿಮಾನಿಗಳು...Kannada News Portal