ಮಂಗಳೂರು: ಒಂದಲ್ಲ ಒಂದು ವಿವಾದಗಳಿಂದ ಸದಾ ಸುದ್ದಿಯಾಗುತ್ತಿರುವ ಮಂಗಳೂರು ವಿಶ್ವವಿದ್ಯಾಲಯ ಇದೀಗ ದ್ವಿತೀಯ ಬಿ.ಕಾಂ.ಪಠ್ಯಪುಸ್ತಕದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಮುಜುಗರ ಹುಟ್ಟಿಸುವಂತಹ ರೀತಿಯ ಬರಹವನ್ನು ಪ್ರಕಟಿಸುವ ಮೂಲಕ ಹೊಸ ಚರ್ಚೆಗೆ ಗ್ರಾಸವಾಗಿದೆ.

ಮಟ್ಟಾರು ವಿಠಲ ಹೆಗ್ಡೆ ಎಂಬವರು 1939ರಲ್ಲಿ ಬರೆದ ‘ಮಗುವಿನ ತಂದೆ’ ಲೇಖನವನ್ನು ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿಗಳ ‘ನುಡಿ ನೂಪುರ’ ಎಂಬ ಪಠ್ಯಪುಸ್ತಕದಲ್ಲಿ ಕಥೆಯಾಗಿ ಅಳವಡಿಸಿರುವುದು ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ಪಠ್ಯ ಸಾರಾಂಶ ಹೀಗಿದೆ: ಮಗುವಿನ ತಂದೆ ಎಂಬ ಶೀರ್ಷಿಕೆಯ ಈ ಪಠ್ಯದಲ್ಲಿ ವೈದ್ಯರೊಬ್ಬರ ಪತ್ನಿ ತನ್ನ ಶಾರೀರಿಕ ಸುಖವನ್ನು ತನ್ನ ಪತಿಯಿಂದ ಪಡೆಯಲು ಅಸಾಧ್ಯವಾದಾಗ ಅನ್ಯ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದುತ್ತಾಳೆ. ಇದೇ ಅನೈತಿಕ ಸಂಬಂಧದಿಂದ ಮಗುವೊಂದು ಹುಟ್ಟುತ್ತದೆ. ಇದಾದ ಬಳಿಕ ವೈದ್ಯನ ಪತ್ನಿಗೆ ಮಗು ತನ್ನ ಗಂಡನದೇ ಅಥವಾ ಪರ ಪುರುಷನ ಸಂಬಂಧದಿಂದ ಹುಟ್ಟಿದ್ದೇ ಎನ್ನುವ ಗೊಂದಲ ಆಕೆಗೆ ಮೂಡಿರುವುದರ ಸುತ್ತ ಪಠ್ಯದಲ್ಲಿ ಹೆಣೆಯಲಾಗಿದೆ.

ಅಸಹ್ಯ ಯಾವುದು?: ಈ ಪಠ್ಯದಲ್ಲಿ ಯುವಕ ಮತ್ತು ವೈದ್ಯನ ಪತ್ನಿಯ ನಡುವೆ ನದಿಯಲ್ಲಿ ನಡೆಯುವ ಸರಸ ಸಲ್ಲಾಪವನ್ನು ಅತ್ಯಂತ ಅಸಹ್ಯ ರೀತಿಯಲ್ಲಿ ವರ್ಣಿಸಲಾಗಿದೆ. ಹದಿಹರೆಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಕೂರಿಸಿ ಕೊಂಡು ಇದನ್ನು ಪಾಠವನ್ನಾಗಿ ಬೋಧಿಸುವ ಇರಿಸು ಮುರಿಸು ಉಪನ್ಯಾಸಕರಿಗಾದರೆ, ಈ ಬಗ್ಗೆ ಮುಜುಗರಪಡಬೇಕಾದ ಸ್ಥಿತಿ ವಿದ್ಯಾರ್ಥಿಗಳದ್ದು. ಇದರಿಂದ ಪಠ್ಯ ಮುದ್ರಿಸಿದ ವಿವಿಯ ನಡೆ ಮತ್ತು ಚಿಂತನೆಯನ್ನು ಎಲ್ಲರೂ ಪ್ರಶ್ನಿಸುವಂತಾಗಿದೆ.

ಮಗು ಯಾರದು?: ಈ ಪಠ್ಯದಲ್ಲಿ ಅನ್ಯ ಪುರುಷನ ಸಂಬಂಧದಿಂದ ಹುಟ್ಟಿದ ಮಗುವೆಂದು ತಿಳಿದರೂ, ವೈದ್ಯನು ಆ ಮಗುವನ್ನು ಒಪ್ಪಿಕೊಳ್ಳುತ್ತಾನೆ. ಈ ಮೂಲಕ ಪ್ರಗತಿಪರ ಚಿಂತನೆಯನ್ನು ಸಾದರಪಡಿಸುತ್ತಾನೆ ಎನ್ನುವ ಆಶಯವನ್ನೂ ಪಠ್ಯ ಪುಸ್ತಕ ರಚನಾ ಸಮಿತಿ ಕಥೆಯಲ್ಲಿ ಹೇಳಿದೆ.

Please follow and like us:
0
http://bp9news.com/wp-content/uploads/2018/07/ಮಂಗಳೂರು.jpghttp://bp9news.com/wp-content/uploads/2018/07/ಮಂಗಳೂರು-150x150.jpgPolitical Bureauಪ್ರಮುಖಮಂಗಳೂರುDismissed text writer Mangalore Universityಮಂಗಳೂರು: ಒಂದಲ್ಲ ಒಂದು ವಿವಾದಗಳಿಂದ ಸದಾ ಸುದ್ದಿಯಾಗುತ್ತಿರುವ ಮಂಗಳೂರು ವಿಶ್ವವಿದ್ಯಾಲಯ ಇದೀಗ ದ್ವಿತೀಯ ಬಿ.ಕಾಂ.ಪಠ್ಯಪುಸ್ತಕದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಮುಜುಗರ ಹುಟ್ಟಿಸುವಂತಹ ರೀತಿಯ ಬರಹವನ್ನು ಪ್ರಕಟಿಸುವ ಮೂಲಕ ಹೊಸ ಚರ್ಚೆಗೆ ಗ್ರಾಸವಾಗಿದೆ. ಮಟ್ಟಾರು ವಿಠಲ ಹೆಗ್ಡೆ ಎಂಬವರು 1939ರಲ್ಲಿ ಬರೆದ 'ಮಗುವಿನ ತಂದೆ' ಲೇಖನವನ್ನು ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿಗಳ 'ನುಡಿ ನೂಪುರ' ಎಂಬ ಪಠ್ಯಪುಸ್ತಕದಲ್ಲಿ ಕಥೆಯಾಗಿ ಅಳವಡಿಸಿರುವುದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. var domain = (window.location != window.parent.location)?...Kannada News Portal