ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರು, ಸದಾ ಮಾತಿನ ಭರದಲ್ಲಿ ಏನಾದರೊಂದು ಹೇಳಿ ಹಾಸ್ಯಕ್ಕೆ ಕಾರಣವಾಗ್ತಾರೆ. ಇಂದು ಕೊಪ್ಪಳದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು, ರಾಜೀವ್​ ಗಾಂಧಿ ಹತ್ಯೆ ಎನ್ನುವ ಬದಲು ರಾಹುಲ್​ ಗಾಂಧಿ ಹತ್ಯೆ ಎಂದು ಹೇಳಿದ್ದಾರೆ. ಮಾತಿನ ಭರದಲ್ಲಿ ತಪ್ಪು ಹೇಳಿ ನಂತರ ನಾನು ರಾಜೀವ್​ ಗಾಂಧಿ ಎಂದೇ ಹೇಳುತ್ತಿದ್ದೆ. ನೀವೇ ನನ್ನನ್ನು ತಪ್ಪು ಹೇಳುವಂತೆ ಮಾಡಿದಿರಿ ಎಂದು ಸಿಎಂ ಅವರು, ಮಾಧ್ಯಮದವರಿಗೆ ಹೇಳಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಇನ್ನು ಸಮಾವೇಶದಲ್ಲಿ ಜೆಡಿಎಸ್​ನ ಎಚ್​.ಡಿ.ದೇವೇಗೌಡ ಮತ್ತು ಎಚ್​.ಡಿ.ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ ಎಂದು ಸವಾಲು ಹಾಕಿದ್ದಾರೆ. ದಲಿತರನ್ನು ಉಪಮುಖ್ಯಮಂತ್ರಿ ಮಾಡ್ತೀನಿ ಅಂತಾ ಎಚ್​ಡಿಕೆ ಹೇಳ್ತಾರೆ. ಆದರೆ ಮಗನನ್ನು ಸಿಎಂ ಮಾಡುವುದು ಎಚ್​.ಡಿ.ದೇವೇಗೌಡರ ಆಶಯ. ನಾವು ದಲಿತರ ಪರ ಎನ್ನುವ ಜೆಡಿಎಸ್​ ನಾಯಕರು ದಲಿತರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯನವರು ಸವಾಲು ಹಾಕಿದ್ದಾರೆ.

ದಲಿತರ ಬದಲು ಮಗನನ್ನು ಸಿಎಂ ಮಾಡುವ ಕನಸು ಎಚ್​.ಡಿ.ದೇವೇಗೌಡರದ್ದು ಎಂದು ಹೇಳುವಾಗ, ಸಿಎಂ ಸಿದ್ದರಾಮಯ್ಯ ಅವರು, ಗುರುವನ್ನೇ ಏಕವಚನದಲ್ಲಿ ಸಂಬೋಧಿಸಿದ್ದಾರೆ.

Please follow and like us:
0
http://bp9news.com/wp-content/uploads/2017/12/maxresdefault-9-e1513245300233-1024x507.jpghttp://bp9news.com/wp-content/uploads/2017/12/maxresdefault-9-e1513245300233-150x150.jpgBP9ಕೊಪ್ಪಳಪ್ರಮುಖಬೆಂಗಳೂರುDMK leaders want PM to meet DMK leaders: CM Siddaramaiah,Koppalಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರು, ಸದಾ ಮಾತಿನ ಭರದಲ್ಲಿ ಏನಾದರೊಂದು ಹೇಳಿ ಹಾಸ್ಯಕ್ಕೆ ಕಾರಣವಾಗ್ತಾರೆ. ಇಂದು ಕೊಪ್ಪಳದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು, ರಾಜೀವ್​ ಗಾಂಧಿ ಹತ್ಯೆ ಎನ್ನುವ ಬದಲು ರಾಹುಲ್​ ಗಾಂಧಿ ಹತ್ಯೆ ಎಂದು ಹೇಳಿದ್ದಾರೆ. ಮಾತಿನ ಭರದಲ್ಲಿ ತಪ್ಪು ಹೇಳಿ ನಂತರ ನಾನು ರಾಜೀವ್​ ಗಾಂಧಿ ಎಂದೇ ಹೇಳುತ್ತಿದ್ದೆ. ನೀವೇ ನನ್ನನ್ನು ತಪ್ಪು ಹೇಳುವಂತೆ ಮಾಡಿದಿರಿ ಎಂದು ಸಿಎಂ ಅವರು, ಮಾಧ್ಯಮದವರಿಗೆ ಹೇಳಿದರು. ಇನ್ನು ಸಮಾವೇಶದಲ್ಲಿ...Kannada News Portal