ಬೆಂಗಳೂರು : ನಾವು ಎದುರಾಳಿಗೆ  ನಮ್ಮ ಯುದ್ಧ ಕಲೆಗಳನ್ನು ಬಿಟ್ಟುಕೊಡುವುದಿಲ್ಲ, ಆದರೆ ಬಹುಮತದಿಂದ ನಾವು ಅಧಿಕಾರ ಪೂರೈಸಿಯೇ ತೀರುತ್ತೇವೆ ಎಂದು ಮಾಜಿ ಡಿಸಿಎಂ ಆರ್​. ಅಶೋಕ್​  ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್​ ಶಾಸಕರನ್ನು  ಅವರ ಕುಟುಂಬದವರೊಂದಿಗೆ ಸಂಪರ್ಕಿಸಲು ಬಿಡುತ್ತಿಲ್ಲ. ಎಲ್ಲರ ಫೋನ್​ ಸ್ವಿಚ್​ ಆಫ್​ ಆಗಿದೆ, ಯಾರ ಸಂಪರ್ಕಕ್ಕೂ ಸಿಗದೇ ಇರುವಂತೆ  ಕಾಂಗ್ರೆಸ್​ ತಮ್ಮ ಶಾಸಕರ ಮೇಲೆ ತುರ್ತು ಪರಿಸ್ಥಿತಿ ಹೇರಿದೆ ಎಂದು   ಆರ್​ ಅಶೋಕ್​ ಆರೋಪಿಸಿದ್ದಾರೆ. ಇದರಿಂದಲೇ   ತಿಳಿಯುತ್ತದೆ ಕಾಂಗ್ರೆಸ್​ಗೆ ತಮ್ಮ  ಸದಸ್ಯರ ಮೇಲೆ ವಿಶ್ವಾಸವಿಲ್ಲವೆಂದು.

120 ಜನರ ಬಲದಿಂದ  ನಮ್ಮ  ಬಿಜೆಪಿ ಸರ್ಕಾರ ಮುಂದುವರಿಯುತ್ತದೆ.  ನಾವು ಬಹುಮತ ಸಾಧಿಸಿ 5 ವರ್ಷ ಪೂರೈಕೆ ಮಾಡುವುದಂತೂ ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಸರ್ಕಾರ ಅಧಿಕಾರವಿಲ್ಲದೇ ಹದೋಗತಿಗೆ ಇಳಿಯುತ್ತದೆ. ನೀರಿಲ್ಲದೇ ಮೀನಿನಂತೆ ಈಗಾಗಲೇ ಚಡಪಡಿಸುತ್ತಿದೆ.  ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಿದ್ದರು ಈಗ ಅವರು ಜೆಡಿಎಸ್​  ಮುಂದೆ ಕೈ ಕಟ್ಟಿ ನಿಂತಿದ್ದಾರೆ. .

ಹಾವು ಮುಂಗುಸಿಯಂತಿರುವ  ಕಾಂಗ್ರೆಸ್-​ ಜೆಡಿಎಸ್​ ಮೈತ್ರಿ ಒಂದು ತಿಂಗಳು ಉಳಿಯಲ್ಲ. ಈ ಎರಡೂ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳ ಬೇಕು. ಜೆಡಿಎಸ್​  ಪಾಸ್​ ಆಗುವಷ್ಟು ಸ್ಥಾನ ತೆಗೆದುಕೊಂಡಿಲ್ಲ. ಕಾಂಗ್ರೆಸ್​ ಅನ್ನು ಜನತೆಯೇ ತಿರಸ್ಕಾರ ಮಾಡಿದ್ದಾರೆ.

ನಾವು 5 ವರ್ಷ ಮುಂದುವರಿಯುತ್ತೇವೆ ಎಂದು  ಭರವಸೆ ವ್ಯಕ್ತಪಡಿಸಿದ ಅಶೋಕ್​, ನಾವು ಹೇಗೆ ತಂತ್ರಗಳನ್ನು  ಉಪಾಯಗಳನ್ನು ಮಾಡುತ್ತೇವೆ ಎಂಬುದನ್ನ ಬಿಟ್ಟುಕೊಡಲ್ಲ, ಬಿಟ್ಟು ಕೊಟ್ರೆ ಎದುರಾಳಿಗೆ ಯುದ್ಧ ಮಾಡಲು ಸುಲಭವಾಗುತ್ತೆ. ಹಾಗಾಗಿ ನಾವೆಲ್ಲಾ ನಾಯಕರು ಒಟ್ಟಾಗಿ ಬಹುಮತ ಪಡೆಯುತ್ತೇವೆ. ಜಮೀರ್​ ಅಹಮದ್​ ವಿಚಾರಕ್ಕೆ  ಜೆಡಿಎಸ್​ ಕಾಂಗ್ರೆಸ್​ಗಳಾದ ​ ಹಾವು ಮುಂಗುಸಿ ಒಟ್ಟಾಗಿದ್ದಾರೆ. ಪ್ರಪಂಚದಲ್ಲಿ ಸಾಧ್ಯವಾ,, ಆಗೊಂದ್​ ವೇಳೆ ಆದ್ರೆ ಅದು ಉಳಿಯಲ್ಲ ಎಂದು ಅಶೋಕ್​ ಭವಿಷ್ಯ ನುಡಿದಿದ್ದಾರೆ.

Please follow and like us:
0
http://bp9news.com/wp-content/uploads/2018/05/images-1-6.jpghttp://bp9news.com/wp-content/uploads/2018/05/images-1-6-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು : ನಾವು ಎದುರಾಳಿಗೆ  ನಮ್ಮ ಯುದ್ಧ ಕಲೆಗಳನ್ನು ಬಿಟ್ಟುಕೊಡುವುದಿಲ್ಲ, ಆದರೆ ಬಹುಮತದಿಂದ ನಾವು ಅಧಿಕಾರ ಪೂರೈಸಿಯೇ ತೀರುತ್ತೇವೆ ಎಂದು ಮಾಜಿ ಡಿಸಿಎಂ ಆರ್​. ಅಶೋಕ್​  ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್​ ಶಾಸಕರನ್ನು  ಅವರ ಕುಟುಂಬದವರೊಂದಿಗೆ ಸಂಪರ್ಕಿಸಲು ಬಿಡುತ್ತಿಲ್ಲ. ಎಲ್ಲರ ಫೋನ್​ ಸ್ವಿಚ್​ ಆಫ್​ ಆಗಿದೆ, ಯಾರ ಸಂಪರ್ಕಕ್ಕೂ ಸಿಗದೇ ಇರುವಂತೆ  ಕಾಂಗ್ರೆಸ್​ ತಮ್ಮ ಶಾಸಕರ ಮೇಲೆ ತುರ್ತು ಪರಿಸ್ಥಿತಿ ಹೇರಿದೆ ಎಂದು   ಆರ್​ ಅಶೋಕ್​ ಆರೋಪಿಸಿದ್ದಾರೆ. ಇದರಿಂದಲೇ   ತಿಳಿಯುತ್ತದೆ ಕಾಂಗ್ರೆಸ್​ಗೆ...Kannada News Portal