ಡಾ. ರಾಜ್​ಕುಮಾರ್​ ಇಡೀ ಕುಟುಂಬವೇ ಕಲಾವಿದರ ಕುಟುಂಬ.  ರಾಜ್​ ನಂತರ ಅವರ ಮೊಮ್ಮಕ್ಕಳದ್ದೇ ಸಿನಿಮಾ ದರ್ಬಾರ್​. ವಿನಯ್​ ರಾಘವೇಂದ್ರ ರಾಜ್​ ಕುಮಾರ್​ ನಂತರ, ರಾಮ್​ ಕುಮಾರ್​ ಅವರ ಮಗ, ಆನಂತರ ಸದ್ಯ ರಾಜ್​ ಕುಟುಂಬದ ಮತ್ತೊಂದು ಕುಡಿ ಸಿನಿಮಾ ಜರ್ನಿ ಮಾಡಲು ಶುರು ಮಾಡಿದ್ದಾರೆ. ಅವರು ಯಾರು ಅಂತಾ ಯೋಚಿಸ್ತಿದ್ದೀರಾ…?  ಯಾರು ರಾಜ್​ ಮೊಮ್ಮಗನ, ಅಥವಾ ಮೊಮ್ಮಗಳ ….

ಅಣ್ಣಾವ್ರ ಮಕ್ಕಳೆಲ್ಲಾ ಬಣ್ಣದ ಪರದೆ ಮೇಲೆ ಮಿಂಚಲು ತಯಾರಿ ನಡೆಸುತ್ತಿದ್ದಾರೆ. ಸಾಕಷ್ಟು ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ರಾಜ್​ ಕುಡಿಗಳ ಸಾಲಿಗೆ ರಾಜ್​ಕುಮಾರ್​ ರ  ಮತ್ತೊಬ್ಬ ಮೊಮ್ಮಗಳು ಚಂದನವನಕ್ಕೆ ಹಾರಲು ಸೂಚನೆ ಕೊಟ್ಟಿದ್ದಾಳೆ.

ಹೀಗಾಗಲೇ ರಾಮ್​ಕುಮಾರ್​ ಮತ್ತು ಪೂರ್ಣಿಮಾ ದಂಪತಿಗಳು ಮಗ ಧೀರೆನ್​ ರಾಮ್​ಕುಮಾರ್​ರನ್ನು ಸಿನಿಮಾಗೆ ಪರಿಚಯಿಸಿದ ಬೆನ್ನಲ್ಲೇ ಅವರ ಪುತ್ರಿ ಧನ್ಯ ರಾಮ್​ಕುಮಾರ್​ ಅವರನ್ನು ಕೂಡ ಪರಿಚಯಿಸುವ ಸೂಚನೆ ಕೊಡುತ್ತಿದ್ದಾರೆ. ಅಣ್ಣನಿಗೆ ಕಾಂಪಿಟೇಶನ್​ ಕೊಡುವ  ರೀತಿಯಲ್ಲಿ ಧನ್ಯ  ಫೋಟೋ ಶೂಟ್​  ಮಾಡಿಸಿದ್ದಾರೆ. ಈ ಫೋಟೋಗಳನ್ನು ನೋಡುತಿದ್ದರೆ  ಚಂದನವನದಲ್ಲಿ ನೆಲೆ ನಿಲ್ಲುವ ಎಲ್ಲಾ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಚಂದನವನದ ಸ್ಟಾರ್ಸ್​. ಇನ್ನೂ ಸ್ಟಾರ್ಸ್​ ಲುಕ್​ನಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ಧನ್ಯ ಗೆ ಸಾಕಷ್ಟು ಕಾಂಪ್ಲಿಮೆಂಟ್ಸ್​ ಸಿಗುತ್ತಿವೆ . ಹಾಟ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿವೆ. ಇನ್ನೂ ಗ್ಲಾಮರ್​ ಲುಕ್​ ನಲ್ಲಿ ಯಾವ ಹಿರೋಯಿನ್​ಗೂ ಕಡಿಮೆ ಇಲ್ಲದಂತೆ ಕಾಣಿಸಿಕೊಂಡಿದ್ದಾರೆ ಧನ್ಯ.

ಇನ್ನು ಧನ್ಯ, ದರ್ಶನ್​ ಸಿನಿಮಾದಲ್ಲಿ ನಟಿಸುತ್ತಾರೆಂಬುದು ಸಾಮಾಜಿಕ ಜಾಲತಾಣಗ ಮಾಹಿತಿ. ಆದರೆ ಇದ್ಯಾವುದಕ್ಕೂ ಅಧಿಕೃತ  ಮಾಹಿತಿಗಳು ಸಿಕ್ಕಿಲ್ಲ. ಈ ಫೋಟೋಗಳನ್ನು  ನೋಡುತ್ತಿದ್ದರೆ ಬಿಗ್​ ಸ್ಟಾರ್​ಗಳ ಜೊತೆ ನಟಿಸುವ ಎಲ್ಲಾ ಲಕ್ಷಣಗಳು ಕೂಡ ಧನ್ಯ ರಾಮ್​ಕುಮಾರ್​ಗಿದೆ ಎಂಬುದು ಸಿನಿಮಾ ಕಲಾವಿದರ ಅಭಿಪ್ರಾಯ.

ಇನ್ನೂ  ಡಾ. ರಾಜ್​ ಕುಟುಂಬದ ಕುಡಿ ಸಾಂಪ್ರದಾಯಿಕ ಸ್ಟೈಲ್​ ನಲ್ಲಿ ಕಾಣಿಸಿಕೊಂಡಿದ್ರೆ ಚೆನ್ನಾಗಿರುತ್ತಿತ್ತು ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಇದರಿಂದಾಗಿಯೇ ಅವರಿಗೆ ಕೆಟ್ಟ ಕೆಟ್ಟ ಕಮೆಂಟ್ಸ್​ಗಳು ಬರುತ್ತಿವೆ . ಸಿನಿಮಾಕ್ಕೆ ಹೊಸಬರು ಪರಿಚಯವಾದ್ರೆ ನಾವು ಅವರನ್ನು ಸ್ವಾಗತಿಸಬೇಕು ವಿನಹ ಉತ್ಸಾಹವನ್ನು ಕುಗ್ಗಿಸಬಾರದು.

Please follow and like us:
0
http://bp9news.com/wp-content/uploads/2018/03/Capture-35.jpghttp://bp9news.com/wp-content/uploads/2018/03/Capture-35-150x150.jpgBP9 Bureauಸಿನಿಮಾಡಾ. ರಾಜ್​ಕುಮಾರ್​ ಇಡೀ ಕುಟುಂಬವೇ ಕಲಾವಿದರ ಕುಟುಂಬ.  ರಾಜ್​ ನಂತರ ಅವರ ಮೊಮ್ಮಕ್ಕಳದ್ದೇ ಸಿನಿಮಾ ದರ್ಬಾರ್​. ವಿನಯ್​ ರಾಘವೇಂದ್ರ ರಾಜ್​ ಕುಮಾರ್​ ನಂತರ, ರಾಮ್​ ಕುಮಾರ್​ ಅವರ ಮಗ, ಆನಂತರ ಸದ್ಯ ರಾಜ್​ ಕುಟುಂಬದ ಮತ್ತೊಂದು ಕುಡಿ ಸಿನಿಮಾ ಜರ್ನಿ ಮಾಡಲು ಶುರು ಮಾಡಿದ್ದಾರೆ. ಅವರು ಯಾರು ಅಂತಾ ಯೋಚಿಸ್ತಿದ್ದೀರಾ...?  ಯಾರು ರಾಜ್​ ಮೊಮ್ಮಗನ, ಅಥವಾ ಮೊಮ್ಮಗಳ .... ಅಣ್ಣಾವ್ರ ಮಕ್ಕಳೆಲ್ಲಾ ಬಣ್ಣದ ಪರದೆ ಮೇಲೆ ಮಿಂಚಲು ತಯಾರಿ ನಡೆಸುತ್ತಿದ್ದಾರೆ....Kannada News Portal