ಮೈತ್ರಿ ಸರ್ಕಾರ ರಚನೆಯಾದಗಿನಿಂದಲೂ ಅದೇಕೋ ಅಪಸ್ವರ ಕೇಳಿ ಬರುತ್ತಲೇ ಇದೆ. ಅದಕ್ಕೆ  ಇಂದು ನಡೆದ ಘಟನೆ  ಸಾಕ್ಷಿಯಾಗಿತ್ತು. ಶಕ್ತಿಭವನದಲ್ಲಿ ಬಜೆಟ್​ಬಗ್ಗೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ಸಭೆಗೆ ಹಾಜರಾಗಲೆಂದು ತಡವಾಗಿ ಬಂದ  ಕಾಂಗ್ರೆಸ್​ ನಾಯಕ, ಹಿರಿಯ ಸಚಿವ ಆರ್​.ವಿ. ದೇಶಪಾಂಡೆಯವರನ್ನು ಪೊಲೀಸರು ಒಳ ಹೋಗದಂತೆ ತಡೆದು,ಪ್ರವೇಶ ನಿರಾಕರಿಸಿದರು. ಆದರೆ ಸಿಎಂ ಸೋದರ, ಸಚಿವ ಹೆಚ್​ಡಿ.ರೇವಣ್ಣ ಅವರು  ಬರ ಬರುತ್ತಿದ್ದಂತೇ ಅದೇ ಪೊಲೀಸರು ರೇವಣ್ಣಗೆ ಮಾತ್ರ ಕಾರು ಸಮೇತ ಒಳ ಹೋಗಲು ಅವಕಾಶ ಮಾಡಿಕೊಟ್ಟರು.

ಇನ್ನು ಹಿರಿಯ ಸಚಿವ ದೇಶಪಾಂಡೆ ಅವರನ್ನು ಒಳಗೆ ಬಿಡದೇ ಅಗೌರವ ತೋರಿರುವ ಪೊಲೀಸರ ತಾರತಮ್ಯದ ವಿರುದ್ಧ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಕಾಂಗ್ರೆಸ್​ನ ಹಿರಿಯ ನಾಯಕನನ್ನು ಸಭೆಗೆ ಹಾಜರಾಗದಂತೆ ತಡೆದು ನಿಲ್ಲಿಸಿದರೆ, ಮತೊಂದು ಕಡೆ ಸಚಿವ ಜೆಡಿಎಸ್​ ನಾಯಕ ರೇವಣ್ಣ ಅವರ ಕಾರನ್ನೇ ಒಳಗೆ ಬಿಟ್ಟಿರುವುದುಕಾಂಗ್ರೆಸ್​-ಜೆಡಿಎಸ್​ ತಾರತಮ್ಯ ನಡೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.

ಇತ್ತ ಈ ಬಗ್ಗೆ ಪೊಲೀಸರು ನಾವು​ ಮುಖ್ಯಮಂತ್ರಿಯವರ ಆದೇಶವನ್ನು ಪಾಲಿಸಿದ್ದೇವೆ ಹೊರತು ನಮ್ಮಿಂದ  ತಾರತಮ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮೇಲ್ಕಂಡ ಘಟನೆಯಿಂದ ಆಕ್ರೋಶಭರಿತ ಕಾಂಗ್ರೆಸ್​ ಕಾರ್ಯಕರ್ತರೇ , ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಒಂದು ರೀತಿಯಲ್ಲಿ ಎತ್ತು ಏರಿಗೆ ಹೇಳಿದ್ರೆ,ಕೋಣ ನೀರಿಗೆ ಎಳೆಯುವ ಹಾಗೇ ಜೋಡೆತ್ತಿನ ಬಂಡಿ  ಒಂದೇ ದಾರಿಯಲ್ಲಿ ಸಾಗುತ್ತಿಲ್ಲ ಎಂಬ ಅಭಿಪ್ರಾಯವನ್ನು ಕಾಣುತ್ತಿಲ್ಲ.

Please follow and like us:
0
http://bp9news.com/wp-content/uploads/2018/06/collage-35.jpghttp://bp9news.com/wp-content/uploads/2018/06/collage-35-150x150.jpgBP9 Bureauಪ್ರಮುಖರಾಜಕೀಯಮೈತ್ರಿ ಸರ್ಕಾರ ರಚನೆಯಾದಗಿನಿಂದಲೂ ಅದೇಕೋ ಅಪಸ್ವರ ಕೇಳಿ ಬರುತ್ತಲೇ ಇದೆ. ಅದಕ್ಕೆ  ಇಂದು ನಡೆದ ಘಟನೆ  ಸಾಕ್ಷಿಯಾಗಿತ್ತು. ಶಕ್ತಿಭವನದಲ್ಲಿ ಬಜೆಟ್​ಬಗ್ಗೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ಸಭೆಗೆ ಹಾಜರಾಗಲೆಂದು ತಡವಾಗಿ ಬಂದ  ಕಾಂಗ್ರೆಸ್​ ನಾಯಕ, ಹಿರಿಯ ಸಚಿವ ಆರ್​.ವಿ. ದೇಶಪಾಂಡೆಯವರನ್ನು ಪೊಲೀಸರು ಒಳ ಹೋಗದಂತೆ ತಡೆದು,ಪ್ರವೇಶ ನಿರಾಕರಿಸಿದರು. ಆದರೆ ಸಿಎಂ ಸೋದರ, ಸಚಿವ ಹೆಚ್​ಡಿ.ರೇವಣ್ಣ ಅವರು  ಬರ ಬರುತ್ತಿದ್ದಂತೇ ಅದೇ ಪೊಲೀಸರು ರೇವಣ್ಣಗೆ ಮಾತ್ರ ಕಾರು...Kannada News Portal