ವಯಸ್ಸಿಗೆ ಬಂದ ಹುಡುಗ ಹುಡುಗಿಯರು ಎಂದ ತಕ್ಷಣ ಒಂದಲ್ಲಾ ಒಂದು ಕಾರಣಕ್ಕೆ ಆಕರ್ಷಿತರಾಗುತ್ತಾರೆ. ಈ ವಿಚಾರದಲ್ಲಿ ಹುಡುಗರು ಮತ್ತು ಹುಡುಗಿಯರು ಕೊಡುವ ಕಾರಣಗಳೇ ಬೇರೆಯಾಗಿರುತ್ತವೆ. ಹಾಗಾದ್ರೆ ಅದೇನಪ್ಪಾ ಅಂತಾ ಕಾರಣ ಅಂತೀರಾ..? ಮುಂದೆ ಓದಿ.

ಅಂದಹಾಗೆ, ಹುಡುಗಿಯರ ಮುಖ ಸೌಂದರ್ಯ ನೋಡಿ ಹುಡುಗರು ಆಕರ್ಷಿತರಾಗ್ತಾರೆ. ಸಾಮಾನ್ಯವಾಗಿ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಹುಡುಗಿಯರು ಹುಡುಗ್ರನ್ನು ಯಾವ ಕಾರಣಕ್ಕೆ ಇಷ್ಟಪಡ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹುಡುಗರ ಯಾವ ಗುಣ ಹುಡುಗಿಯರನ್ನು ಮೊದಲು ಆಕರ್ಷಿಸುತ್ತದೆ ಎಂಬುದು ಅಧ್ಯಯನವೊಂದರಿಂದ ಹೊರ ಬಿದ್ದಿದೆ. ಹಾಗಾದ್ರೆ ಹುಡುಗಿಯರು ಮುಖ ಸೌಂದರ್ಯವನ್ನ ನೋಡಿ ಆಕರ್ಷಿತರಾಗಲ್ವ ಅನ್ನೋ ಪ್ರಶ್ನೆ ಮೂಡುತ್ತೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಕ್ವೀನ್ಸ್ಲ್ಯಾಂಡ್ ನ ಗ್ರಿಫಿತ್ ವಿಶ್ವವಿದ್ಯಾನಿಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದ ಪ್ರಕಾರ ಹುಡುಗಿಯರು ಹುಡುಗರ ಭೌತಿಕ ಶಕ್ತಿ ಹಾಗೂ ಶರೀರಕ್ಕೆ ಮೊದಲು ಆಕರ್ಷಿತರಾಗ್ತಾರೆ ಎಂಬ ಸಂಗತಿ ಗೊತ್ತಾಗಿದೆ. 150 ಮಹಿಳೆಯರ ಮೇಲೆ ಅಧ್ಯಯನ ನಡೆಸಿ ವಿಶ್ವವಿದ್ಯಾನಿಲಯ ಈ ವರದಿ ನೀಡಿದೆ. ಮಹಿಳೆಯರು ಪುರುಷರ ಭೌತಿಕ ಶಕ್ತಿ ಜೊತೆಗೆ ಅವರ ಎತ್ತರದ ನಿಲುವು ಹಾಗೂ ನೇರ ದೇಹವನ್ನು ಹೆಚ್ಚು ಇಷ್ಟಪಡ್ತಾರಂತೆ. ಅಧ್ಯಯನವನ್ನು ಎರಡು ರೀತಿಯಲ್ಲಿ ನಡೆಸಲಾಯ್ತು. ಮಹಿಳೆಯರಿಗೆ ಪುರುಷರ ಫೋಟೋ ನೋಡಿ ಯಾರು ಆಕರ್ಷಿತರು ಎಂಬುದನ್ನು ಹೇಳಬೇಕಾಗಿತ್ತು.
ಬಹುತೇಕ ಮಹಿಳೆಯರು ಪುರುಷರ ದೇಹ ನೋಡಿ ಮಾರ್ಕ್ಸ್ ನೀಡಿದ್ದಾರೆ. ಕೆಲ ಮಹಿಳೆಯರು ಪುರುಷರ ಮುದ್ದು ಮುಖಕ್ಕೆ ಮಾರ್ಕ್ಸ್ ನೀಡಿದ್ದಾರೆ.

ಒಟ್ಟಾರೆ, ಈ ಅದ್ಯಯನದ ಪ್ರಕಾರ ಹುಡುಗಿರು ಹುಡುಗರಲ್ಲಿ ದೇಹ ಸೌಂದರ್ಯವನ್ನ ಹೆಚ್ಚು ಇಷ್ಟ ಪಡುತ್ತಾರೆಂಬುದು ಕೆಲವರ ಅಭಿಪ್ರಾಯವಾಗಿದೆ.

Please follow and like us:
0
http://bp9news.com/wp-content/uploads/2017/12/images-8.jpghttp://bp9news.com/wp-content/uploads/2017/12/images-8-150x150.jpgFilm Bureauಇತರೆವಯಸ್ಸಿಗೆ ಬಂದ ಹುಡುಗ ಹುಡುಗಿಯರು ಎಂದ ತಕ್ಷಣ ಒಂದಲ್ಲಾ ಒಂದು ಕಾರಣಕ್ಕೆ ಆಕರ್ಷಿತರಾಗುತ್ತಾರೆ. ಈ ವಿಚಾರದಲ್ಲಿ ಹುಡುಗರು ಮತ್ತು ಹುಡುಗಿಯರು ಕೊಡುವ ಕಾರಣಗಳೇ ಬೇರೆಯಾಗಿರುತ್ತವೆ. ಹಾಗಾದ್ರೆ ಅದೇನಪ್ಪಾ ಅಂತಾ ಕಾರಣ ಅಂತೀರಾ..? ಮುಂದೆ ಓದಿ. ಅಂದಹಾಗೆ, ಹುಡುಗಿಯರ ಮುಖ ಸೌಂದರ್ಯ ನೋಡಿ ಹುಡುಗರು ಆಕರ್ಷಿತರಾಗ್ತಾರೆ. ಸಾಮಾನ್ಯವಾಗಿ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಹುಡುಗಿಯರು ಹುಡುಗ್ರನ್ನು ಯಾವ ಕಾರಣಕ್ಕೆ ಇಷ್ಟಪಡ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹುಡುಗರ ಯಾವ ಗುಣ ಹುಡುಗಿಯರನ್ನು ಮೊದಲು...Kannada News Portal