ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿರು ಭಟ್ರ ನಿರ್ದೇಶನದ ಸಿನಿಮಾ ಪಂಚತಂತ್ರ.  ಹೊಸ ಹೊಸ ಸಂಗತಿಗಳ ಮೂಲಕ ಸಿನಿಮಾ ಬಗ್ಗೆ ಪ್ರಚಾರಕ್ಕಿಳಿದಿದ್ದಾರೆ ಭಟ್ರು.  ಅಂದಹಾಗೇ ಸಿನಿಮಾದಲ್ಲಿ ಆ್ಯಕ್ಟ್​ ಮಾಡಿತುವ ತಮಿಳಿನ ಸೂಪರ್​ ನಾಯಕಿ  ಭಟ್ರ ಬ್ಗಗೆ ಹೇಳಿದ್ದೇನು ಗೊತ್ತಾ…?

ಮೂಲತಃ ಕನ್ನಡದ ಹುಡುಗಿಯಾಗಿದ್ದರೂ ತಮಿಳು ಚಿತ್ರರಂಗದಲ್ಲಿ ನೆಲೆ ನಿಂತಿರೋ ಅಕ್ಷರಾ ಗೌಡಾಗೆ ಕನ್ನಡ ಚಿತ್ರದಲ್ಲಿ ನಟಿಸೋ ಆಸೆ ಬಹು ಹಿಂದಿನದ್ದು. ತನ್ನ ನೆಲದಲ್ಲಿಯೇ ಮಿಂಚಬೇಕೆಂಬ ಬಯಕೆಯಿಂದ ಪ್ರಯತ್ನ ಜಾರಿಯಲ್ಲಿಟ್ಟಿದ್ದ ಈಕೆಯ ಕನಸನ್ನು ನನಸಾಗಿಸಿದವರು ಯೋಗರಾಜ ಭಟ್.

ಪಂಚತಂತ್ರ ಚಿತ್ರದಲ್ಲಿ ಅಕ್ಷರಾ ಗೌಡ ಮುಖ್ಯವಾದ, ಪ್ರಾಮುಖ್ಯತೆ ಇರುವ ಪಾತ್ರವೊಂದರಲ್ಲಿ ನಟಿಸಿದ್ದಾರಂತೆ. ಈ ಸಂಬಂಧವಾಗಿ ಒಂದಷ್ಟು ದಿನಗಳ ಕಾಲ ಚಿತ್ರ ತಂಡದ ಭಾಗವಾಗಿದ್ದ ಅಕ್ಷರಾ ಯೋಗರಾಜ ಭಟ್ಟರು ಚೇತೋಹಾರಿಯಾಗಿ ನಗಿಸುತ್ತಾ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಕೆಲಸ ಮಾಡುವ ಶೈಲಿಯನ್ನು ಮೆಚ್ಚಿಕೊಂಡಿದ್ದಾಳೆ. ಯೋಗರಾಜ ಭಟ್ ತಮ್ಮನ್ನು ಪ್ರೀತಿಯಿಂದ ಗೌಡ್ರೇ ಎಂದು ಕರೆಯುತ್ತಿದ್ದುದರ ಬಗೆಗೂ ಖುಷಿಯಾಗಿದ್ದಾರೆ.

ಈ ಚಿತ್ರದ ಮೂಲಕವೇ ತನಗೆ ಕನ್ನಡದಲ್ಲಿ ಬ್ರೇಕ್ ಸಿಗುತ್ತದೆ ಅಂದುಕೊಂಡಿರೋ ಅಕ್ಷರಾ, ಅದು ನಿಜವಾದರೆ ಇಲ್ಲಿಯೇ ನೆಲೆ ನಿಲ್ಲುವ ಆಸೆ ಹೊಂದಿದ್ದಾರೆ.

Please follow and like us:
0
http://bp9news.com/wp-content/uploads/2018/09/ಟಡೆರ.jpghttp://bp9news.com/wp-content/uploads/2018/09/ಟಡೆರ-150x150.jpgBP9 Bureauಸಿನಿಮಾಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿರು ಭಟ್ರ ನಿರ್ದೇಶನದ ಸಿನಿಮಾ ಪಂಚತಂತ್ರ.  ಹೊಸ ಹೊಸ ಸಂಗತಿಗಳ ಮೂಲಕ ಸಿನಿಮಾ ಬಗ್ಗೆ ಪ್ರಚಾರಕ್ಕಿಳಿದಿದ್ದಾರೆ ಭಟ್ರು.  ಅಂದಹಾಗೇ ಸಿನಿಮಾದಲ್ಲಿ ಆ್ಯಕ್ಟ್​ ಮಾಡಿತುವ ತಮಿಳಿನ ಸೂಪರ್​ ನಾಯಕಿ  ಭಟ್ರ ಬ್ಗಗೆ ಹೇಳಿದ್ದೇನು ಗೊತ್ತಾ...? ಮೂಲತಃ ಕನ್ನಡದ ಹುಡುಗಿಯಾಗಿದ್ದರೂ ತಮಿಳು ಚಿತ್ರರಂಗದಲ್ಲಿ ನೆಲೆ ನಿಂತಿರೋ ಅಕ್ಷರಾ ಗೌಡಾಗೆ ಕನ್ನಡ ಚಿತ್ರದಲ್ಲಿ ನಟಿಸೋ ಆಸೆ ಬಹು ಹಿಂದಿನದ್ದು. ತನ್ನ ನೆಲದಲ್ಲಿಯೇ ಮಿಂಚಬೇಕೆಂಬ ಬಯಕೆಯಿಂದ ಪ್ರಯತ್ನ ಜಾರಿಯಲ್ಲಿಟ್ಟಿದ್ದ ಈಕೆಯ...Kannada News Portal