ಒಂದು ಕಾಲಕ್ಕೆ ರಾ…ದ್ದೇ ಸ್ಯಾಂಡಲ್​ವುಡ್​ನಲ್ಲಿ ದರ್ಬಾರ್​. ರಾ…ಅಂತಾ ಹೆಸರಿಟ್ಕೊಂಡವರೆಲ್ಲಾ ಚಂದನವನದಲ್ಲಿ ಟಾಪ್​ ನಾಯಕಿಯರಾಗಿ ಬೆಳೆಯುತ್ತಾರೆ ಎಂಬ ಮಾತು ಒಂದಷ್ಟು ದಿನ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿತ್ತು.  ಅದೂ ಕಾಕತಾಳಿಯವೋ ಎಂಬಂತೇ ರ   ಅಕ್ಷರದವರೇ  ಟಾಪ್​ ನಂ1 ನಾಯಕಿಯರಾಗಿದ್ದರು.

ಅಂದಹಾಗೇ ನಾವು ಯಾವುದರ ಬಗ್ಗೆ ಮಾತನಾಡ್ತಿದ್ದೇವೆ ಎಂಬ ಸ್ವಲ್ಪ ಸುಳಿವು  ನಿಮಗೆ ಸಿಕ್ಕಿರಬೇಕು..ರಾ ಅಂದ್ರೆ ರಾಧಿಕಾ, ರಕ್ಷಿತಾ, ರಮ್ಯಾ. ಇತ್ತೀಚೆಗೆ ರಚಿತಾರಾಂ  ಲಕ್ಕಿ R ಗೆ ಸೇರಿಕೊಂಡಿದ್ದಾರೆ.  ಆ ಟ್ರೆಂಡ್​ ನಾಯಕಿರಲ್ಲಿ ಮತ್ತೆ ರಿಟರ್ನ್​ ಆಗರುವುದು ಸದ್ಯಕ್ಕೆ  ಸ್ವೀಟಿ ರಾಧಿಕಾ..

ಅಂದು ‘‘ನಿನಗಾಗಿ’’ ಸಿನಿಮಾ ಮೂಲಕ ಬಬ್ಲಿ ಕ್ಯಾರೆಕ್ಟರ್​ನಲ್ಲಿ ಮಿಂಚಿದ್ದ ನಟಿ ರಾಧಿಕಾ ಚಂದನವನದ ಟಾಪೆಸ್ಟ್​ ಹೀರೋಯಿನ್​  ಆಗಿದ್ದರು. ಕೆಲ ಸಿನಿಮಾಗಳಿಂದಾಗಿ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರು. ನಟನೆ , ನಿರ್ಮಾಣದಲ್ಲಿ ಸದಾ ಬ್ಯುಸಿಯಾಗಿದ್ದ ರಾಧಿಕಾ ಕೈಯಲ್ಲಿ ಸದ್ಯ ಸಿನಿಮಾಗಳಿವೆ. ಚಿರಂಜೀವಿ ಸರ್ಜಾ ಜೊತೆ ‘ರುದ್ರ ತಾಂಡವ’  ಮೂಲಕ ಸ್ಕ್ರೀನ್​ ಶೇರ್ ಮಾಡಿಕೊಂಡಿದ್ದ ರಾಧಿಕಾ ಮತ್ತೆ ಸಿನಿಮಾಗಳಿಂದ ನಾಪತ್ತೆಯಾಗಿದ್ದರು. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಸಣ್ಣ ಕ್ಲೂ ಕೂಡ  ಯಾರಿಗೂ ಸಿಕ್ಕಿರಲಿಲ್ಲ.

ಸ್ಯಾಂಡಲ್​​ವುಡ್​​ನ ಸ್ವೀಟಿ ರಾಧಿಕಾ ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ಅನ್ನೋದಕ್ಕೆ ಅವ್ರ ಫೇಸ್‌ಬುಕ್‌ ಫೇಜು, ಅಕೌಂಟ್‌ ಉತ್ತರ ಹೇಳ್ತಿದೆ. ನಿನ್ನೆಯಷ್ಟೇ ರಾಧಿಕಾ, ಭೈರಾದೇವಿ, ರಾಜೇಂದ್ರ ಪೊನ್ನಪ್ಪನ ಜೊತೆಗೆ ದಮಯಂತಿ ಅನ್ನೋ ಹೊಸ ಸಿನಿಮಾ ಮಾಡ್ತಿರೋ ವಿಚಾರ ಸುದ್ದಿಯಾಯ್ತು. ಆದ್ರೆ ಇವತ್ತು ರಾಧಿಕಾ ಯಾಕೆ ಕೆಲದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ತಿರಲಿಲ್ಲ. ಎಲ್ಲಿ ಹೋಗಿದ್ರೂ ಅನ್ನೋದಕ್ಕೆ ಇವತ್ತು ಅಪ್‌ಲೋಡ್‌ ಆಗಿರೋ ಒಂದು ಫೋಟೋ ಉತ್ತರ ಹೇಳ್ತಿದೆ. ಹೌದು ರಾಧಿಕಾ ಮಗಳ ಜೊತೆಗೆ ಫಾರಿನ್‌ ರೌಂಡ್ಸ್‌ ಹೋಗಿ ಬಂದಿದ್ದಾರೆ. ವಿದೇಶದಲ್ಲಿ ಮಗಳ ಜೊತೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡ್ತಿರೋ ಒಂದು ಫೋಟೋವನ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಒಂದಷ್ಟು ಬ್ಯುಸಿ ವರ್ಕ್‌ ಜೊತೆಗೆ ಒಂದು ಜಾಲಿ ಟ್ರಿಪ್‌ ಮುಗಿಸಿ ಬಂದಿರೋ ರಾಧಿಕಾ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳೋದಕ್ಕೆ ಸಜ್ಜಾಗ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/08/64260254-1.jpghttp://bp9news.com/wp-content/uploads/2018/08/64260254-1-150x150.jpgBP9 Bureauಸಿನಿಮಾಒಂದು ಕಾಲಕ್ಕೆ ರಾ...ದ್ದೇ ಸ್ಯಾಂಡಲ್​ವುಡ್​ನಲ್ಲಿ ದರ್ಬಾರ್​. ರಾ...ಅಂತಾ ಹೆಸರಿಟ್ಕೊಂಡವರೆಲ್ಲಾ ಚಂದನವನದಲ್ಲಿ ಟಾಪ್​ ನಾಯಕಿಯರಾಗಿ ಬೆಳೆಯುತ್ತಾರೆ ಎಂಬ ಮಾತು ಒಂದಷ್ಟು ದಿನ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿತ್ತು.  ಅದೂ ಕಾಕತಾಳಿಯವೋ ಎಂಬಂತೇ ರ   ಅಕ್ಷರದವರೇ  ಟಾಪ್​ ನಂ1 ನಾಯಕಿಯರಾಗಿದ್ದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal