ಬೆಂಗಳೂರು :  ಶಾಸ್ತೀಯ ಸಂಗೀತದಲ್ಲಿ ವಿದ್ವಾಂಸರಾಗಿರುವ ಬೆಂಗಳೂರಿನ ಡಾ. ಎಸ್​.ಸಿ. ಶರ್ಮಾ ಅವರನ್ನು  ಚೆನ್ನೈನ ಪ್ರಖ್ಯಾತ ಅಣ್ಣಾಮಲೈ  ವಿಶ್ವವಿದ್ಯಾನಿಲಯಕ್ಕೆ ಗೌರವ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿದೆ. ಒಂದು  ಕಾಲದ ಹಳೆಯ ಪ್ರಸಿದ್ಧ ಹಾಡು  ರಾಮನ ಅವತಾರ ರಘು ಕುಲ ಸೋಮನ ಅವತಾರ ಖ್ಯಾತಿಯ  ಶೀರಕಾಳಿ ಗೋವಿಂದ ರಾಜನ್​ ಪ್ರಾಧ್ಯಾಪಕರಾಗಿದ್ದ ಈ ವಿಶ್ವವಿದ್ಯಾನಿಯದಲ್ಲಿ ಪ್ರಸ್ತುತ  60 ಕ್ಕೂ ಹೆಚ್ಚು ಮಂದಿ ಸಂಗೀತ ವಿದ್ವಾಂಸರಿದ್ದಾರೆ.

ಇದು 100  ವರ್ಷದ ಇತಿಹಾಸವುಳ್ಳ  ಹಳೆಯ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯದಲ್ಲಿ  ಖ್ಯಾತ ಸಂಗೀತಗಾರರಾದ ಮಧುರೈ ಸೋಮಸುಂದರಂ, ವಿದ್ವಾನ್​ ಟೈಗರ್​ ವರದರಾಜನ್​, ಸದೇಶ್​ ಅಯ್ಯರ್​ ಅವರಂತಹ ಮಹಾನ್​ ಘಟಾನುಘಟಿ ವಿದ್ವಾಂಸರುಗಳು ಅಧ್ಯಾಪಕರಾಗಿದ್ದರು.  ಇಂತಹ  ವಿಶ್ವವಿದ್ಯಾಲಯಕ್ಕೆ ಕರ್ನಾಟಕದ  ಎಸ್​.ಸಿ. ಶರ್ಮಾರನ್ನು ಆಯ್ಕೆ ಮಾಡಿರುವುದು  ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.

Please follow and like us:
0
http://bp9news.com/wp-content/uploads/2018/04/hqdefault-1-1.jpghttp://bp9news.com/wp-content/uploads/2018/04/hqdefault-1-1-150x150.jpgBP9 Bureauಶಾಸ್ತ್ರೀಯ ಸಂಗೀತಬೆಂಗಳೂರು :  ಶಾಸ್ತೀಯ ಸಂಗೀತದಲ್ಲಿ ವಿದ್ವಾಂಸರಾಗಿರುವ ಬೆಂಗಳೂರಿನ ಡಾ. ಎಸ್​.ಸಿ. ಶರ್ಮಾ ಅವರನ್ನು  ಚೆನ್ನೈನ ಪ್ರಖ್ಯಾತ ಅಣ್ಣಾಮಲೈ  ವಿಶ್ವವಿದ್ಯಾನಿಲಯಕ್ಕೆ ಗೌರವ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿದೆ. ಒಂದು  ಕಾಲದ ಹಳೆಯ ಪ್ರಸಿದ್ಧ ಹಾಡು  ರಾಮನ ಅವತಾರ ರಘು ಕುಲ ಸೋಮನ ಅವತಾರ ಖ್ಯಾತಿಯ  ಶೀರಕಾಳಿ ಗೋವಿಂದ ರಾಜನ್​ ಪ್ರಾಧ್ಯಾಪಕರಾಗಿದ್ದ ಈ ವಿಶ್ವವಿದ್ಯಾನಿಯದಲ್ಲಿ ಪ್ರಸ್ತುತ  60 ಕ್ಕೂ ಹೆಚ್ಚು ಮಂದಿ ಸಂಗೀತ ವಿದ್ವಾಂಸರಿದ್ದಾರೆ. ಇದು 100  ವರ್ಷದ ಇತಿಹಾಸವುಳ್ಳ  ಹಳೆಯ ವಿಶ್ವವಿದ್ಯಾಲಯವಾಗಿದೆ. ಈ...Kannada News Portal