ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಗೆ ಕೆಲ ಹವ್ಯಾಸಗಳು ಅಂದ್ರೆತುಂಬಾ ಇಷ್ಟ.ಅಲ್ಲದೇ ಕಾಡು ಪ್ರೀತಿ, ಪ್ರಾಣಿ-ಪಕ್ಷಿಗಳಿಷ್ಟ. ಅದಷ್ಟೇ ಅಲ್ಲದೇ ದಚ್ಚುಗೆ ಕಾರು ಅಂದ್ರನೂ ಎಲ್ಲಿಲ್ಲದ ಪ್ರೀತಿ ಅಂತೆ. ಇತ್ತೀಚಿಗೆ ಲಂಬೋರ್ಗಿಯ ಕಾರ್ ರಸ್ತೆಗಿಳಿದು ಧೂಳೆಬ್ಬಿಸಿತ್ತು. ಈಗ ಮೊತ್ತೊಂದು ಕಾರ್ ಚಾಲನೆ ಮಾಡುವ ಮೂಲಕ ದರ್ಶನ್ ತಮ್ಮಹೊಸ ಕಾರನ್ನು ರಸ್ತೆಗಿಳಿದಿದ್ದಾರೆ. ಇದೀಗ ದರ್ಶನ್ ಅವರು ಸ್ಪೋರ್ಟ್ಸ್ ಕಾರನ್ನು ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಭಿಮಾನಿಗಳು ದರ್ಶನ್ ಡ್ರೈವ್ ಮಾಡುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ.

ಗುರುವಾರ ಮೈಸೂರಿಗೆ ದರ್ಶನ್ ಹೋಗಿದ್ದು, ಅಲ್ಲಿ ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿರ್ಜನ ಪ್ರದೇಶವೊಂದರಲ್ಲಿ ದರ್ಶನ್ ಕಾರ್ ಚಲಾಯಿಸಿದ್ದು, ಕಾರ್ ರೇಸರ್ ಗಳಂತೆ ಮಣ್ಣಿನ ರಸ್ತೆಯಲ್ಲಿಯೇ ಅತೀವೇಗದಲ್ಲಿ ಚಲಾಯಿಸಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಬಾರಿ ತಿರುವು ಮಾಡಿಕೊಂಡು ವೇಗವಾಗಿ ಕಾರನ್ನು ಓಡಿಸಿದ್ದಾರೆ. ಅವರು ಚಲಾಯಿಸಿದ ರಭಸಕ್ಕೆ ಮಣ್ಣಿನ ರಸ್ತೆಯಾದ ಕಾರಣ ಧೂಳೆದ್ದಿದೆ.

ದರ್ಶನ್ ಯಾವುದೇ ಶೂಟಿಂಗ್ ಗಾಗಿ ಸ್ಪೋರ್ಟ್ಸ್ ಕಾರನ್ನು ಚಾಲನೆ ಮಾಡಿಲ್ಲ. ಆದರೆ ಇತ್ತೀಚೆಗೆ ದರ್ಶನ್ ಅಂತರಾಷ್ಟ್ರಿಯ ಮಟ್ಟದ ಕಾರ್ ರೇಸಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿತ್ತು. ಆದ್ದರಿಂದ ಅಲ್ಲಿ ಭಾಗವಹಿಸಲು ಕಾರು ಚಲಾಯಿಸಿ ತರಬೇತಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ಹಿಂದೆ ದರ್ಶನ್ ಅವರು ಲಂಬೋರ್ಗಿಯ ಕಾರನ್ನು ಬೆಂಗಳೂರಿನಲ್ಲಿ ಚಲಾಯಿಸುವ ಮೂಲಕ ಎಲ್ಲರನ್ನು ಆಕರ್ಷಣೆ ಮಾಡಿದ್ದರು. ಈಗ ಸ್ಪೋರ್ಟ್ಸ್ ಕಾರನ್ನು ಚಲಾಯಿಸುವುದರ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ದರ್ಶನ್ ಬಳಿ ಈಗಾಗಲೇ ಲಂಬೋರ್ಗಿನಿ, ಮಿನಿ ಕೂಪರ್, ಫಾರ್ಚೂನರ್, ಬೆಂಜ್, ರೇಂಜ್ ರೋವರ್, ಐ-20, ಆಡಿ ಕ್ಯೂ 7, Porsche, ಜಾಗ್ವಾರ್, ಸೇರಿದಂತೆ ಹಲವು ಕಾರ್ ಗಳಿವೆ.
ದಚ್ಚುಗೆ ಕಾರು ಅಂದ್ರೆನೇ ಅವರಿಗಷ್ಟೇ ಅಲ್ಲಾ, ಸುದೀಪ್​ಗೂ ಕೂಡ ಕಾರು ಕ್ರೇಜು ಅಂದ್ರೆ ಬಲು ಮೋಜು.

Please follow and like us:
0
http://bp9news.com/wp-content/uploads/2018/09/collage-17-1024x768.jpghttp://bp9news.com/wp-content/uploads/2018/09/collage-17-150x150.jpgBP9 Bureauಪ್ರಮುಖಸಿನಿಮಾ  ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಗೆ ಕೆಲ ಹವ್ಯಾಸಗಳು ಅಂದ್ರೆತುಂಬಾ ಇಷ್ಟ.ಅಲ್ಲದೇ ಕಾಡು ಪ್ರೀತಿ, ಪ್ರಾಣಿ-ಪಕ್ಷಿಗಳಿಷ್ಟ. ಅದಷ್ಟೇ ಅಲ್ಲದೇ ದಚ್ಚುಗೆ ಕಾರು ಅಂದ್ರನೂ ಎಲ್ಲಿಲ್ಲದ ಪ್ರೀತಿ ಅಂತೆ. ಇತ್ತೀಚಿಗೆ ಲಂಬೋರ್ಗಿಯ ಕಾರ್ ರಸ್ತೆಗಿಳಿದು ಧೂಳೆಬ್ಬಿಸಿತ್ತು. ಈಗ ಮೊತ್ತೊಂದು ಕಾರ್ ಚಾಲನೆ ಮಾಡುವ ಮೂಲಕ ದರ್ಶನ್ ತಮ್ಮಹೊಸ ಕಾರನ್ನು ರಸ್ತೆಗಿಳಿದಿದ್ದಾರೆ. ಇದೀಗ ದರ್ಶನ್ ಅವರು ಸ್ಪೋರ್ಟ್ಸ್ ಕಾರನ್ನು ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ದರ್ಶನ್ ಡ್ರೈವ್ ಮಾಡುತ್ತಿರುವ...Kannada News Portal