ದಾವಣಗೆರೆ : 22 ಕೆರೆಗಳ ಏತನೀರಾವರಿ ಪೈಪ್‍ಲೈನ ಯೋಜನೆಯು ಕಳಪೆ ಕಾಮಗಾರಿಯಿಂದ ಕೂಡಿದ್ದು, ಎಲ್ ಅಂಡ್ ಕಂಪನಿಯಿಂದ ಮತ್ತೊಂದು ಬಾರಿ ಗುಣಮಟ್ಟದ ಪೈಪ್‍ಲೈನ್ ಮಾಡಿಸಬೇಕು, ಇಲ್ಲದಿದ್ದರೆ ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು 22 ಕೆರೆಗಳ ಏತನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಮಂಜುನಾಥಗೌಡ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಎಲ್ ಅಂಡ್ ಟಿ ಕಂಪನಿ ನಂಬಿಕೆಗೆ ಹೆಸರಾದ ಕಂಪನಿ ಎಂಬ ಹಿನ್ನಲೆಯಲ್ಲಿ ಆ ಕಂಪನಿಗೆ 22 ಕೆರೆಗಳ ಯೋಜನೆಯ ಕಾಮಗಾರಿ ನೀಡಲಾಗಿತ್ತು. ಆದರೆ ಕಂಪನಿಯವರು ಲೋಕಲ್ ಗುತ್ತಿಗೆದಾರರಿಗೆ ತುಂಡುಗುತ್ತಿಗೆ ನೀಡಿದ್ದರಿಂದ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದರು.

ಪೈಪ್‍ಲೈನ್ ಮೂಲಕ ಪ್ರತಿ ವರ್ಷ 150ರಿಂದ 180 ದಿನಗಳ ಸತತವಾಗಿ ನೀರೆತ್ತಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಅವಕಾಶ ಇದೆ. ಆದರೆ ಕಳಪೆ ಕಾಮಗಾರಿಯಿಂದಾಗಿ, ಪೈಪ್ ಲೈನ್ ಒಡೆಯುವುದು, ಇಲ್ಲವೆ ಕಾಂಕ್ರಿಟ್ ನಿರ್ಮಿತ ಜಾಕ್‍ವೆಲ್ ತಡೆಗೋಡೆ ಕುಸಿಯುತ್ತಿರುವುದರಿಂದ, 5 ವರ್ಷಗಳ ಕಳೆದರೂ 150 ದಿನಗಳ ಕಾಲ ಸರಿಯಾಗಿ ನೀರು ಹರಿದಿಲ್ಲ ಎಂದು ಆರೋಪಿಸಿದರು.ಮೊದಲನೆ ಮತ್ತು ಎರಡನೇ ಜಾಕ್ವೆಲ್‍ಗಳಿಗೆ ನಿರಂತರವಾಗಿ ವಿದ್ಯುಚ್ಛಕ್ತಿ ಸರಬರಾಜು ಮಾಡಲು ಎಕ್ಸ್‍ಪ್ರೆಸ್ ಲೈನ್ ಅಳವಡಿಸಲಾಗಿದೆ. ಆದರೆ ಎರಡೂ ಜಾಕ್ವೆಲ್‍ಗಳಿಗೆ ಬೇರೆ, ಬೇರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತಿದೆ.

ಹೊಂದಾಣಿಕೆ ಕೊರತೆ ಹಾಗೂ ಎಕ್ಸ್‍ಪ್ರೆಸ್ ಲೈನಿನಿಂದ ಬೇರೆಯವರಿಗೆ ಅನುಕೂಲವಾಗುವಂತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದರಿಂದಲೂ ಮತ್ತಷ್ಟು ತೊಂದರೆಯಾಗುತ್ತಿದೆ. ಇದನ್ನು ಹೋಗಲಾಡಿಸಲು ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ ಪ್ರತ್ಯೇಕ ಏತ ನೀರಾವರಿ ಕಚೇರಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.ಕಳಪೆ ಕಾಮಗಾರಿ ಕುರಿತು ಈಗಾಗಲೇ ಸಿರಿಗೆರೆಯ ಶ್ರೀಗಳ ಜೊತೆ ಚರ್ಚಿಸಲಾಗಿದೆ. ಅವರೂ ಕೂಡಾ ನಮ್ಮ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಇದರಿಂದ ಮತ್ತೊಮ್ಮೆ ಗುಣಮಟ್ಟದ ಪೈಪ್‍ಲೈನ್ ಕಾಮಗಾರಿ ಕೂಡಲೇ ನಡೆಯಬೇಕು. ಇಲ್ಲದಿದ್ದರೆ ಎಲ್ ಅಂಡ್ ಟಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಆಗಿರುವ ಲೋಪದೋಷಗಳನ್ನು ಸರಿಪಡಿಸದಿದ್ದರೆ ನವೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಟ್ರೇಶ್ ನಾಯಕ್, ಚಂದ್ರನಾಯಕ್, ನೆರಲಗಿ ಸ್ವಾಮಿ, ಬಾಬುಗೌಡರು, ಪ್ರಕಾಶ್ ಪಾಟೀಲ್ ಅಣಜಗಿ, ಮಂಜಣ್ಣ, ಮಲ್ಲಿಕಾರ್ಜುನ, ಸಿದ್ದೇಶ್, ಶಿವಕುಮಾರ್, ಕೆಂಚವೀರಪ್ಪ, ನಿಜಲಿಂಗಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Please follow and like us:
0
http://bp9news.com/wp-content/uploads/2018/09/dvg-2-22-keregala-20918-script.and-photo-1-1.jpghttp://bp9news.com/wp-content/uploads/2018/09/dvg-2-22-keregala-20918-script.and-photo-1-1-150x150.jpgBP9 Bureauದಾವಣಗೆರೆದಾವಣಗೆರೆ : 22 ಕೆರೆಗಳ ಏತನೀರಾವರಿ ಪೈಪ್‍ಲೈನ ಯೋಜನೆಯು ಕಳಪೆ ಕಾಮಗಾರಿಯಿಂದ ಕೂಡಿದ್ದು, ಎಲ್ ಅಂಡ್ ಕಂಪನಿಯಿಂದ ಮತ್ತೊಂದು ಬಾರಿ ಗುಣಮಟ್ಟದ ಪೈಪ್‍ಲೈನ್ ಮಾಡಿಸಬೇಕು, ಇಲ್ಲದಿದ್ದರೆ ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು 22 ಕೆರೆಗಳ ಏತನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಮಂಜುನಾಥಗೌಡ ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಎಲ್ ಅಂಡ್ ಟಿ ಕಂಪನಿ ನಂಬಿಕೆಗೆ ಹೆಸರಾದ ಕಂಪನಿ ಎಂಬ ಹಿನ್ನಲೆಯಲ್ಲಿ ಆ ಕಂಪನಿಗೆ 22 ಕೆರೆಗಳ ಯೋಜನೆಯ ಕಾಮಗಾರಿ ನೀಡಲಾಗಿತ್ತು....Kannada News Portal