ದಾವಣಗೆರೆ : ಬಾರ್ ಮುಂಭಾಗದಲ್ಲಿ ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಪಿಬಿ ರೋಡ್ ನಲ್ಲಿರುವ ಭವಾನಿ ಬಾರ್ ಮುಂಭಾಗದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮದ್ಯ ಸೇವನೆ ಮಾಡಿ ಬಿದ್ದಿದ್ದಾನೆ. ಆತನ ಬಳಿ ಇದ್ದ  ಬ್ಯಾಗ್ ನಲ್ಲಿ ನೂರಾರು ಸಂಖ್ಯೆಯಲ್ಲಿರುವ ಆಧಾರ್ ಕಾರ್ಡ್ ಗಳು ದೊರೆತಿವೆ.

ಕುಡಿದ ಮತ್ತಿನಲ್ಲಿದ್ದ ಆ ಕುಡುಕನ ಬ್ಯಾಗ್ ನಲ್ಲಿ ರಾಶಿಗಟ್ಟಲೆ ಆಧಾರ್ ಕಾರ್ಡ್ ಇರುವುದು ತಿಳಿದು ಅನುಮಾನಗೊಂಡು ಸಾರ್ವಜನಿಕರು ಆ ವ್ಯಕ್ತಿಯನ್ನು ಮಾತನಾಡಿಸಿದ್ದಾರೆ.  ಆದರೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ‌ಎಚ್ಚರಗೊಂಡಿಲ್ಲ. ನಂತರ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಆಧಾರ್ ಕಾರ್ಡ್ ನಲ್ಲಿ ಇರುವ ಮೊಬೈಲ್ ನಂಬರ್ ಗೆ ಕರೆ ಮಾಡಿ ಕೆಲವರಿಗೆ ಆಧಾರ್ ಕಾರ್ಡ್ ತಲುಪಿಸಿದ್ದಾರೆ.

ಆದರೆ ಆಧಾರ್ ಕಾರ್ಡ್ ಗಳು ಅಸಲಿಯೋ ನಕಲಿಯೋ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಲಿದೆ. ಒಟ್ಟಾರೆ ಆಧಾರ್ ಕಾರ್ಡ್ ಗಳ ಜಾಲ ಇರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಕುಡುಕನ ಬಳಿಗೆ ಎಲ್ಲಿಂದ ಬಂದವು, ಹೇಗೆ ಬಂದವು ಎಂಬುದೇ ಅನುಮಾನಕ್ಕೀಡು ಮಾಡಿವೆ.  ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಾರ್ ಮುಂಭಾಗ ಸಿಕ್ಕ ಆಧಾರ್ ಕಾರ್ಡ್ ಗಳ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Please follow and like us:
0
http://bp9news.com/wp-content/uploads/2018/07/ಆಧಾರ್​-ಕಾರ್ಡ್​-BP9-NEWS1.jpeghttp://bp9news.com/wp-content/uploads/2018/07/ಆಧಾರ್​-ಕಾರ್ಡ್​-BP9-NEWS1-150x150.jpegBP9 Bureauದಾವಣಗೆರೆಪ್ರಮುಖದಾವಣಗೆರೆ : ಬಾರ್ ಮುಂಭಾಗದಲ್ಲಿ ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಪಿಬಿ ರೋಡ್ ನಲ್ಲಿರುವ ಭವಾನಿ ಬಾರ್ ಮುಂಭಾಗದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮದ್ಯ ಸೇವನೆ ಮಾಡಿ ಬಿದ್ದಿದ್ದಾನೆ. ಆತನ ಬಳಿ ಇದ್ದ  ಬ್ಯಾಗ್ ನಲ್ಲಿ ನೂರಾರು ಸಂಖ್ಯೆಯಲ್ಲಿರುವ ಆಧಾರ್ ಕಾರ್ಡ್ ಗಳು ದೊರೆತಿವೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal