ದಾವಣಗೆರೆ : ಎಲೆಬೇತೂರು ಗ್ರಾಮದಲ್ಲಿಂದು ಕೃಷಿ ಅಭಿಯಾನ 2018 ಕಾರ್ಯಕ್ರಮ ಜರುಗಿತು. ಕೃಷಿ ಇಲಾಖೆ ರೈತರ ಅಭ್ಯುದಯಕ್ಕಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದು ಮಳೆ ನೀರು ನಿರ್ವಹಣೆಗೆ ಕೃಷಿ ಹೊಂಡಗಳ ನಿರ್ಮಾಣ. ಸ್ಲಿಂಕ್ಲರ್ ಸೆಟ್, ಡೀಸೆಲ್ ಇಂಜಿನ್,  ತಾಡಪಾಲುಗಳು, ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ, ಬೆಳೆಗಳಿಗೆ ಟ್ರೈಕೋಡರ್ಮಾ, ಜಿಪ್ಸಂ, ಜಿಂಕ್, ಟೋರಾನ್, ಸಾವಯವ ಎರೆಹುಳು ಗೊಬ್ಬರಗಳ ಬಳಕೆ ಹೆಚ್ಚಳಕ್ಕೆ ಪ್ರೇರೆಪಿಸಲಾಗುವುದು. ಹಸಿರೆಲೆ ಗೊಬ್ಬರ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕೃಷಿ ಯಾಂತ್ರೀಕರಣ ಯೋಜನೆ, ಯಂತ್ರಧರೆ ಯೋಜನೆ, ತೋಟಗಾರಿಕ ಯೋಜನೆಗಳು ಸರ್ಕಾರದಿಂದ ಸಿಗುವ ಸೌಲತ್ತಾಗಿದ್ದು, ರೈತರು  ಉಪಯೋಗಿಸಿಕೊಳ್ಳಬೇಕೆಂದು ಕೃಷಿ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಟಿ.ಹೆಚ್.ಸುಂದರ, ತೋಟಗಾರಿಕೆ ಅಧಿಕಾರಿ ಅಮಿತ್, ಸಹಾಯಕ ಕೃಷಿ ಅಧಿಕಾರಿ ದುರ್ಗಪ್ಪ, ಶಿವಕುಮಾರ, ಅನುಗಾರರಾದ ಸಿದ್ದಲಿಂಗಪ್ಪ, ರುದ್ರಪ್ಪ ಹಾಗೂ ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/05/dvg-4-kru-shi-abhiyana-225-18-script.and-photo-1.jpghttp://bp9news.com/wp-content/uploads/2018/05/dvg-4-kru-shi-abhiyana-225-18-script.and-photo-1-150x150.jpgBP9 Bureauಕೃಷಿದಾವಣಗೆರೆದಾವಣಗೆರೆ : ಎಲೆಬೇತೂರು ಗ್ರಾಮದಲ್ಲಿಂದು ಕೃಷಿ ಅಭಿಯಾನ 2018 ಕಾರ್ಯಕ್ರಮ ಜರುಗಿತು. ಕೃಷಿ ಇಲಾಖೆ ರೈತರ ಅಭ್ಯುದಯಕ್ಕಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದು ಮಳೆ ನೀರು ನಿರ್ವಹಣೆಗೆ ಕೃಷಿ ಹೊಂಡಗಳ ನಿರ್ಮಾಣ. ಸ್ಲಿಂಕ್ಲರ್ ಸೆಟ್, ಡೀಸೆಲ್ ಇಂಜಿನ್,  ತಾಡಪಾಲುಗಳು, ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ, ಬೆಳೆಗಳಿಗೆ ಟ್ರೈಕೋಡರ್ಮಾ, ಜಿಪ್ಸಂ, ಜಿಂಕ್, ಟೋರಾನ್, ಸಾವಯವ ಎರೆಹುಳು ಗೊಬ್ಬರಗಳ ಬಳಕೆ ಹೆಚ್ಚಳಕ್ಕೆ ಪ್ರೇರೆಪಿಸಲಾಗುವುದು. ಹಸಿರೆಲೆ ಗೊಬ್ಬರ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು. ರಿಯಾಯಿತಿ...Kannada News Portal