ದಾವಣಗೆರೆ: ಅನ್ನಭಾಗ್ಯ ಯೋಜನೆಯ ಸಗಟು ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಅನ್‍ಲೋಡಿಂಗ್ (ಹಮಾಲಿ) ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆ.25 ರಂದು ಅಕ್ಕಿ ಸಾಗಾಣಿಕೆ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ನಗರದ ಜಯದೇವವೃತ್ತದಲ್ಲಿಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಕಾರ್ಯಕರ್ತರು ಧರಣಿ ಸತ್ಯಾಗ್ರಹದ ಪೋಸ್ಟರ್ ಬಿಡುಗಡೆಗೊಳಿಸಿದರು.

ಕಾರ್ಮಿಕರ  ಸಮಸ್ಯೆಗಳ ಪರಿಹಾರಕ್ಕೆ ನೂರಾರು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಪ್ರತಿಭಟನೆಗಳನ್ನು ಸಹ ನಡೆಸಿದ್ದೇವೆ, ಮಂತ್ರಿಗಳ ಜೊತೆ ಭೇಟಿ ಎಲ್ಲವೂ ವಿಫಲವಾಗಿದೆ. ಹಾಗಾಗಿ ಸೆ.25ರಿಂದ ರಾಜ್ಯದ ಸಗಟು ಗೋದಾಮುಗಳಲ್ಲಿ ಎಫ್‍ಸಿಐನಿಂದ ಬರುವ ಅಕ್ಕಿ ಮತ್ತು ಇನ್ನಿತರ ಸರಕುಗಳ ಅನ್‍ಲೋಡಿಂಗ್ ನಡೆಯುವುದಿಲ್ಲ ಮತ್ತು ಸಗಟು ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರಕುಗಳು ಹೋಗುವುದಿಲ್ಲ.

ಈ ಅನಿವಾರ್ಯ ಪರಿಸ್ಥಿತಿಗೆ ಕಾರಣವಾಗಿರುವ ಸರ್ಕಾರವು ಈಗಲಾದರೂ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ಬದಲಿಸಬೇಕೆಂದು ಆಗ್ರಹಿಸಿದರು. ಪಡಿತರ ವಿತರಕ ವ್ಯವಸ್ಥೆಯಲ್ಲಿ ಕಳೆದ 43 ವರ್ಷಗಳಿಂದ ಸುವ್ಯಸ್ಥಿತವಾದ ಯಂತ್ರಾಂಗವನ್ನು ರೂಪಿಸಿ ನಡೆಸಿಕೊಂಡು ಬರಲಾಗುತ್ತಿದೆ. ತಾಲೂಕು ಮಟ್ಟದಲ್ಲಿರುವ ಸಗಟು ಗೋದಾಮುಗಳು, ಜಿಲ್ಲೆಯಲ್ಲಿರುವ ಉಗ್ರಾಣ ನಿಗಮಗಳ ಗೋದಾಮಗಳಲ್ಲಿ ಕೆಲಸ ಮಾಡುವ ಸುಮಾರು 7000ಕ್ಕೂ ಹೆಚ್ಚು ಲೋಡಿಂಗ್, ಅನ್‍ಲೋಡಿಂಗ್ ಕಾರ್ಮಿಕರು ಇದಕ್ಕಾಗಿ ದುಡಿಯುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ನ್ಯಾಯಬೆಲೆ ಅಂಗಡಿಗಳು ಕಾಣಿಸುತ್ತವೆಯೇ ಹೊರತು ಕಾರ್ಮಿಕರು ಹೆಚ್ಚಾಗಿ ಕಾಣುವುದಿಲ್ಲ. 38 ವರ್ಷಗಳ ಸಮಸ್ಯೆಯನ್ನು ಗುರುತಿಸಲು ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ನಡೆಸಬೇಕಾಗಿದೆ.

ಕಾರ್ಮಿಕರಿಗೆ 38 ವರ್ಷಗಳ ಕಾಲ ಇಎಸ್‍ಐ, ಪಿಎಫ್ ಒಳಗೊಂಡಂತೆ ಯಾವೊಂದು ಕಾರ್ಮಿಕ ಕಾನೂನನ್ನೂ ಜಾರಿ ಮಾಡಿಲ್ಲ. ಕೂಲಿದರದ ನಿಗದಿಯಲ್ಲೂ ಒಂದು ಕ್ರಮ ಇರಲಿಲ್ಲ. ಆದರೆ ಸಂಘಟನೆಯ ಹೋರಾಟದಿಂದ ಕೆಲವೊಂದು ಯೋಜನೆಗಳು ಜಾರಿಗೊಂಡಿವೆ. ಈ ಕೂಡಲೇ ಇಎಸ್‍ಐ, ಪಿಎಫ್ ಸೇರಿದಂತೆ ಗುತ್ತಿಗೆ & ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಲು ಸೀನಿಯರ್ ಜಂಟಿ ನಿರ್ದೇಶಕರ ಮಟ್ಟದ ಒಬ್ಬ ಅಧಿಕಾರಿಯನ್ನು ರಾಜ್ಯಮಟ್ಟದಲ್ಲಿ ನೇಮಿಸಬೇಕು ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಕ್ಕೆ ನಿರ್ದಿಷ್ಟ ಅಧಿಕಾರಿ ನಿಯೋಜಿಸಬೇಕು.

ಸಗಟು ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗೆ ಹೋಗುವ ಅಕ್ಕಿಗೆ ಕ್ವಿಂಟಾಲ್ ಒಂದಕ್ಕೆ 30 ರೂ.ಗಳ ಕೂಲಿದರ ನಿಗದಿ, ಎಫ್‍ಸಿಐನಿಂದ ಬರುವ ಅಕ್ಕಿಯ ಅನ್‍ಲೋಡಿಂಗ್‍ಗೆ ಕ್ವಿಂಟಾಲ್‍ಗೆ 10 ರೂ. ಏಕರೂಪದ ಕೂಲಿದರ ನಿಗದಿ, ಅಲಾಟ್‍ಮೆಂಟ್‍ಗೆ ತಕ್ಕಂತೆ ಕಾರ್ಮಿಕರ ಹಾಜರಾತಿ ನಿರ್ವಹಿಸಿ, ನೇರವಾಗಿ ಇಲಾಖೆಯಿಂದಲೇ ಕೂಲಿದರ ಹಾಗೂ ಇಎಸ್‍ಐ,ಪಿಎಫ್‍ಅನ್ನು ಕಾರ್ಮಿಕರಿಗೆ ಪಾವತಿಸಬೇಕು, ರಾಜ್ಯ ಉಗ್ರಾಣ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಕಾರ್ಮಿಕರಿಗೂ ಇವೆಲ್ಲಾ ಸೌಲಭ್ಯಗಳು ದೊರೆಯಬೇಕು ಎಂದು ಒತ್ತಾಯಿಸಿದರು. ಈ ವೇಳೆ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ್,ಆದಿಲ್‍ಖಾನ್,ಶೇಖರಪ್ಪ, ಪರಶುರಾಂ,ಹೆಚ್.ರಮೇಶ್,ಎಂ.ಬಿ ಸಂತೋಷ್ ಕುಮಾರ್, ವಕೀಲ ಅನೀಷ್ ಪಾಷ ಮತ್ತಿತರರಿದ್ದರು.

 

Please follow and like us:
0
http://bp9news.com/wp-content/uploads/2018/09/annabhagya1532461877.jpghttp://bp9news.com/wp-content/uploads/2018/09/annabhagya1532461877-150x150.jpgBP9 Bureauದಾವಣಗೆರೆಪ್ರಮುಖರಾಜಕೀಯದಾವಣಗೆರೆ: ಅನ್ನಭಾಗ್ಯ ಯೋಜನೆಯ ಸಗಟು ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಅನ್‍ಲೋಡಿಂಗ್ (ಹಮಾಲಿ) ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆ.25 ರಂದು ಅಕ್ಕಿ ಸಾಗಾಣಿಕೆ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ನಗರದ ಜಯದೇವವೃತ್ತದಲ್ಲಿಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಕಾರ್ಯಕರ್ತರು ಧರಣಿ ಸತ್ಯಾಗ್ರಹದ ಪೋಸ್ಟರ್ ಬಿಡುಗಡೆಗೊಳಿಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal