ದಾವಣಗೆರೆ : ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ 6 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತ ಪೂರ್ವ ಜಯ ಸಾಧಿಸಿದ್ದಾರೆ. ಉಳಿದಂತೆ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ತನ್ನ ಕ್ಷೇತ್ರ ಕಾಪಾಡಿಕೊಂಡಿದೆ. ಮಧ್ಯ ಕರ್ನಾಟಕದ ದಾವಣಗೆರೆ ರಾಜ್ಯದ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಘಟನಾಘಟಿಗಳು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಈ ಬಾರಿ ಮತದಾರ ಯಾರ ಪರ ವಾಲಿದ್ದಾನೆ ಎಂಬುದು ನಿಗೂಢವಾಗಿತ್ತು. ಇದೀಗ ಎಲ್ಲಾ ಪ್ರಶ್ನೆಗಳಿಗೆ ಮತದಾರ ಗೆಲುವಿನ ಮುದ್ರೆಯೊತ್ತಿದ್ದಾನೆ. ಕಳೆದ ಚುನಾವಣೆಯಲ್ಲಿ ದಾವಣಗೆರೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಯಾವ ಕ್ಷೇತ್ರದಲ್ಲಿಯೂ ಜಯಸಾಧಿಸಿರಲಿಲ್ಲ. ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. ಹರಿಹರದಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಕ್ಷೇತ್ರ ಕಮಲದ ತೆಕ್ಕೆಗೆ ದೊರೆತಿದೆ. ದಾವಣಗೆರೆ ಉತ್ತರ, ಮಾಯಕೊಂಡ, ಜಗಳೂರು, ಹರಪನಹಳ್ಳಿ, ಹೊನ್ನಾಳಿ, ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ದಾವಣಗೆರೆ ದಕ್ಷಿಣದಲ್ಲಿ ಮತ್ತೊಮ್ಮೆ ಶಾಮನೂರು ಶಿವಶಂಕರಪ್ಪ ಜಯ ಪಡೆದರೆ, ಹರಿಹರದಲ್ಲಿ ಮೊದಲ ಬಾರಿಗೆ ಎಸ್.ರಾಮಪ್ಪ ವಿಜಯಿಯಾಗಿದ್ದಾರೆ. ಒಟ್ಟಾರೆ ತೀವ್ರ ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲೀಗ ಕಮಲದ್ದೇ ಕಾರುಬಾರು. ಒಂದು ರೀತಿ ಮೋದಿಯ ಅಲೆ ಹಾಗೂ ಬಿಜೆಪಿಯ ಚಾಣಕ್ಯರೆಂದೇ ಹೆಸರಾಗಿರುವ ಅಮಿತ್ ಷಾ ಮೋಡಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ ಎಂಬುದು ಇದೀಗ ಗೋಚರವಾಗುತ್ತಿದೆ.

ದಾವಣಗೆರೆ ಉತ್ತರ : ಉತ್ತರ ಹುಡುಕಿಕೊಂಡ ಮತದಾರ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಎಸ್.ಎ.ರವೀಂದ್ರನಾಥ್ ಗೆಲುವು ಸಾಧಿಸಿದ್ದಾರೆ. ತೋಟಗಾರಿಕಾ ಸಚಿವರು ಹಾಗೂ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಾರಿ ಪರಾಭವಗೊಂಡಿದ್ದಾರೆ. ರವೀಂದ್ರನಾಥ್ 76.540 ಮತಗಳನ್ನು ಪಡೆದು ಜಯಸಾಧಿಸಿದರೆ, ಎಸ್.ಎಸ್.ಮಲ್ಲಿಕಾರ್ಜುನ್ 72.469 ಮತ ಪಡೆದು ಸೋಲು ಕಂಡಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಗೂ ಮತದಾರ ಉತ್ತರ ಹುಡುಕಿಕೊಂಡಿದ್ದಾನೆ. ಎಸ್.ಎ.ರವೀಂದ್ರನಾಥ್ 4071 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಈಗೆಲುವು ದಾವಣಗೆರೆಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದರೆ, ಕಾಂಗ್ರೆಸ್ ಗೆ ಶಾಕ್ ನೀಡಿದೆ.

ದಾವಣಗೆರೆ ದಕ್ಷಿಣ :ಅಜಾತಶತ್ರು ವಿರುದ್ದ ಅನ್ಯರಿಗೆ ಗೆಲುವು ಎಲ್ಲುಂಟು 

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಜಯಗಳಿಸಿದ್ದಾರೆ. ತೀವ್ರ ಪೈಪೋಟಿಯ ನಡುವೆಯೂ ಶಿವಶಂಕರಪ್ಪ 71.369 ಮತಗಳನ್ನು ಪಡೆದು ಜಯ ದಾಖಲಿಸಿದ್ದಾರೆ. ಅಜಾತಶತೃವೆಂದೇ ಬಿಂಬಿತವಾಗಿರುವ ಶಿವಶಂಕರಪ್ಪ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಯಶವಂತ್ ರಾವ್ ಜಾದವ್ ವಿರುದ್ದ 15.884 ಅಂತರದ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಯಶವಂತರಾವ್ ಜಾದವ್ ಅವರು 55.485 ಮತ ಪಡೆದಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಇತ್ತು. ಇದೀಗ ಮತ್ತೊಮ್ಮೆ ಶಾಮನೂರು ಶಿವಶಂಕರಪ್ಪ ಹ್ಯಾಟ್ರಿಕ್ ಗೆಲುವು ಪಡೆದಿದ್ದಾರೆ.

ಹರಿಹರದಲ್ಲಿ ಎಸ್.ರಾಮಪ್ಪ : ಕಾಂಗ್ರೆಸ್ ಗೆ ಒಲಿದ ಗೆಲುವು

ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎಸ್.ರಾಮಪ್ಪ ಈಬಾರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನ ಶಾಸಕ ಹೆಚ್.ಎಸ್.ಶಿವಶಂಕರ್ ಹಾಗೂ ಬಿಜೆಪಿಯ ಅಭ್ಯರ್ಥಿ ಬಿ.ಪಿ.ಹರೀಶ್ ವಿರುದ್ದ ಅವರು ಜಯಸಾಧಿಸಿದ್ದಾರೆ. ಎಸ್.ರಾಮಪ್ಪ 10.792 ಮತ ಪಡೆದು ವಿಜಯಿಯಾದರೆ, ಬಿಜೆಪಿಯ ಬಿ.ಪಿ.ಹರೀಶ್ 9749 ಹಾಗೂ ಜೆಡಿಎಸ್ ನ ಹೆಚ್.ಎಸ್.ಶಿವಶಂಕರ್ ಅವರು 6869 ಮತ ಪಡೆದಿದ್ದಾರೆ. ಒಟ್ಟಾರೆ 1043 ಮತಗಳ ಅಂತರದಿಂದ ಕಾಂಗ್ರೆಸ್ ನ ಎಸ್.ರಾಮಪ್ಪ ಗೆಲುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಎಸ್.ರಾಮಪ್ಪ ವಿಧಾನಸಭೆಗೆ ಜನರಿಂದ ಆಯ್ಕೆಗೊಂಡಿದ್ದಾರೆ.

ಹೊನ್ನಾಳಿ :  ಮತ್ತೆ ಗೆದ್ದು ಬೀಗಿದ ರೇಣುಕಾಚಾರ್ಯ

ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ 80.624 ಮತ ಪಡೆಯುವ ಮೂಲಕ ಶಾಸಕ ಡಿ.ಜಿ.ಶಾಂತನಗೌಡ ಅವರನ್ನು ಪರಾಭವಗೊಳಿಸಿದ್ದಾರೆ. 4233 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ, ಕಾಂಗ್ರೆಸ್ ನ ಅಭ್ಯರ್ಥಿ ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಅವರು 76.391 ಮತ ಪಡೆದು ಸೋಲು ಕಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಎಂ.ಪಿ.ರೇಣುಕಾಚಾರ್ಯ ಈ ಬಾರಿ ಬಿಜೆಪಿಯಿಂದ ಸ್ಪರ್ಧೆಯೊಡ್ಡಿ ಗೆದ್ದು ಬೀಗಿದ್ದಾರೆ. ರೇಣುಕಾಚಾರ್ಯ ಗೆಲುವಿನಿಂದ ಕ್ಷೇತ್ರದಲ್ಲಿ ಮತ್ತೊಮ್ಮೆ ಸಂಚಲನ ಮೂಡಿದೆ.

ಮಾಯಕೊಂಡ ಎನ್.ಲಿಂಗಪ್ಪ : ವಿಜಯದ ಹಾದಿ ತೋರಿಸಿದ ಜನತೆ

ತೀವ್ರ ಕುತೂಹಲ ಮೂಡಿಸಿದ್ದ ಹಾಗೂ ಬಹಳಷ್ಟು ಅಭ್ಯರ್ಥಿಗಳು ಸ್ಪರ್ಧಿಸಿದ್ದ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಲಿಂಗಪ್ಪಗೆ ಜನರ ಆಶೀರ್ವಾದ ಲಭಿಸಿದೆ. ಲಿಂಗಪ್ಪ 50.556 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಇನ್ನು ಕಾಂಗ್ರೆಸ್ ನ ಕೆ.ಎಸ್.ಬಸವರಾಜು 44.098 ಮತ ಪಡೆದಿದ್ದಾರೆ. ಲಿಂಗಪ್ಪ ಸುಮಾರು 6458 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯಿಂದ ಆಕಾಂಕ್ಷಿತರಾಗಿದ್ದು, ಟಿಕೇಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ಆನಂದಪ್ಪ ಪಕ್ಷೇತರ ಸ್ಪರ್ಧಿಸಿ 27.321 ಮತ ಪಡೆದಿದ್ದಾರೆ. ಉಳಿದಂತೆ ಜೆಡಿಯುನ ಬಸವರಾಜನಾಯ್ಕ್ 16.640 ಮತಗಳನ್ನು ಪಡೆದರೆ, ಜೆಡಿಎಸ್ ನ ಶೀಲಾನಾಯ್ಕ್ 11.085 ಮತ ಗಳಿಸಿದ್ದಾರೆ.

ಜಗಳೂರು : ಎಸ್.ವಿ.ರಾಮಚಂದ್ರ  ರಾಜೇಶ್ ಗೆ ಮನೆವಾಸ ಪ್ರಾಪ್ತಿ ಮಾಡಿದ ರಾಮಚಂದ್ರ ಜಗಳೂರು ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದ ಹೆಚ್.ಪಿ. ರಾಜೇಶ್ ಸೋಲು ಕಂಡಿದ್ದಾರೆ.

ಇಲ್ಲಿ ಬಿಜೆಪಿಯ ಎಸ್.ವಿ. ರಾಮಚಂದ್ರ  78.948 ಮತಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. ಕಾಂಗ್ರೆಸ್ ನ ಹೆಚ್.ಪಿ. ರಾಜೇಶ್ 49.727 ಮತಗಳನ್ನು ಪಡೆದು ಪರಾಭಗೊಂಡಿದ್ದಾರೆ. ಎಸ್.ವಿ. ರಾಮಚಂದ್ರ 29.221 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಸ್.ವಿ. ರಾಮಚಂದ್ರ ಪರಾಭವಗೊಂಡಿದ್ದರು. ಇದೀಗ ಭಾರಿ ಮತಗಳ ಅಂತರದಿಂದ ಗೆಲ್ಲುವ ಮೂಲಕ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

ಜಗಳೂರು ಎಸ್.ವಿ.ರಾಮಚಂದ್ರ  ರಾಜೇಶ್ ಗೆ ಮನೆವಾಸ ಪ್ರಾಪ್ತಿ ಮಾಡಿದ ರಾಮಚಂದ್ರ  ಜಗಳೂರು ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದ ಹೆಚ್.ಪಿ. ರಾಜೇಶ್ ಸೋಲು ಕಂಡಿದ್ದಾರೆ.

ಇಲ್ಲಿ ಬಿಜೆಪಿಯ ಎಸ್.ವಿ. ರಾಮಚಂದ್ರ  78.948 ಮತಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. ಕಾಂಗ್ರೆಸ್ ನ ಹೆಚ್.ಪಿ. ರಾಜೇಶ್ 49.727 ಮತಗಳನ್ನು ಪಡೆದು ಪರಾಭಗೊಂಡಿದ್ದಾರೆ. ಎಸ್.ವಿ. ರಾಮಚಂದ್ರ 29.221 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಸ್.ವಿ. ರಾಮಚಂದ್ರ ಪರಾಭವಗೊಂಡಿದ್ದರು. ಇದೀಗ ಭಾರಿ ಮತಗಳ ಅಂತರದಿಂದ ಗೆಲ್ಲುವ ಮೂಲಕ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

 

Please follow and like us:
0
http://bp9news.com/wp-content/uploads/2018/05/collage-1-22.jpghttp://bp9news.com/wp-content/uploads/2018/05/collage-1-22-150x150.jpgBP9 Bureauದಾವಣಗೆರೆಪ್ರಮುಖರಾಜಕೀಯದಾವಣಗೆರೆ : ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ 6 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತ ಪೂರ್ವ ಜಯ ಸಾಧಿಸಿದ್ದಾರೆ. ಉಳಿದಂತೆ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ತನ್ನ ಕ್ಷೇತ್ರ ಕಾಪಾಡಿಕೊಂಡಿದೆ. ಮಧ್ಯ ಕರ್ನಾಟಕದ ದಾವಣಗೆರೆ ರಾಜ್ಯದ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಘಟನಾಘಟಿಗಳು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಈ ಬಾರಿ ಮತದಾರ ಯಾರ ಪರ ವಾಲಿದ್ದಾನೆ ಎಂಬುದು ನಿಗೂಢವಾಗಿತ್ತು. ಇದೀಗ ಎಲ್ಲಾ ಪ್ರಶ್ನೆಗಳಿಗೆ ಮತದಾರ ಗೆಲುವಿನ...Kannada News Portal