ದಾವಣಗೆರೆ :  ಸಾಲಮನ್ನಾ ಮಾಡದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನುಡಿದಂತೆ ನಡೆದುಕೊಂಡಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಂ.ಸತೀಶ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ ಕುಮಾರಸ್ವಾಮಿ, ಸಾಲ ಮನ್ನಾ ಮಾಡಿಲ್ಲ ಹಾಗೂ  ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2 ರೂ. ಕಡಿತ ಮಾಡಿ, ರೈತ ವಿರೋಧಿ, ಜನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದೆ. ಇದರ ನಿರ್ವಹಣೆ ಕಷ್ಟ ಎಂಬ ಕಾರಣ ನೀಡಿ ರೈತರಿಂದ ಖರೀದಿಸುವ ಹಾಲಿನ ದರ ಜೂನ್ ಒಂದರಿಂದ ಅನ್ವಯ ಆಗುವಂತೆ ಕಡಿತ ಮಾಡಿದ್ದಾರೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ರೈತರ ಹಿತದೃಷ್ಠಿಯಿಂದ ರೈತರ ಹಾಲಿನ ದರಕ್ಕೆ ಪ್ರೋತ್ಸಾಹಧನ  ನೀಡಲಾಗುತ್ತಿತ್ತು. ಆದರೆ ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆಂದು ಸುಳ್ಳು ಹೇಳಿಕೆ, ಭರವಸೆ ನೀಡಿ, ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.

ರೈತರಿಂದ ಖರೀದಿಸಿ ಹಾಲಿನ ದರ ಕಡಿಮೆ ಮಾಡಲಾಗಿದೆ ವಿನಃ, ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಕಡಿಮೆ ಮಾಡಿಲ್ಲ. ರೈತರಿಗೂ ಜನರಿಗೂ ಮಾಡುತ್ತಿರುವ ಮೋಸ ಇದಾಗಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತ ಮಾಡಬಾರದು. ಅಲ್ಲದೆ ಹೆಚ್ಚುವರಿ ಹಾಲಿನ ಸಮರ್ಪಕ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಹವಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನ್ವಯ ವಿಮಾ ಪಾವತಿಸಬೇಕು ಎಂದು ರೈತರಿಗೆ ತಿಳಿಸಿದ್ದಾರೆ.

ಆದರೆ ವಿಮೆ ಕಂತು ಪಾವತಿಸಿದ ನಂತರ ಬೆಳೆ ನಷ್ಟವಾದ ರೈತರು ಪರಿಹಾರ ಕೇಳಿದರೆ ವಿಮಾ ಕಂಪನಿಯವರಿಗೆ ಕೇಳಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮತ್ತು ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‍ಭಿಮಾ ಯೋಜನೆ ವ್ಯತ್ಯಾಸಗಳು ಸಹ ರೈತರಿಗೆ ತಿಳಿಯುತ್ತಿಲ್ಲ. ಈ ಬಗ್ಗೆ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಚ್.ಎನ್.ಗುರುನಾಥ, ಜಿ.ಪಿ.ಮುಪ್ಪಣ್ಣ, ಕುಂದವಾಡ ಗಣೇಶಪ್ಪ, ಪ್ರದೀಪ ಮಟ್ಟಿಕಲ್, ಸಿದ್ದಪ್ಪ ಅಡಾಣಿ, ಕಿರೀಟ್ ಸಿ.ಕಲಾಲ್ ಇದ್ದರು.

 

Please follow and like us:
0
http://bp9news.com/wp-content/uploads/2018/06/dvg-3-gayada-mele-bare-12618-script.and-photo-1.jpghttp://bp9news.com/wp-content/uploads/2018/06/dvg-3-gayada-mele-bare-12618-script.and-photo-1-150x150.jpgBP9 Bureauದಾವಣಗೆರೆಪ್ರಮುಖರಾಜಕೀಯದಾವಣಗೆರೆ :  ಸಾಲಮನ್ನಾ ಮಾಡದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನುಡಿದಂತೆ ನಡೆದುಕೊಂಡಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಂ.ಸತೀಶ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ ಕುಮಾರಸ್ವಾಮಿ, ಸಾಲ ಮನ್ನಾ ಮಾಡಿಲ್ಲ ಹಾಗೂ  ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2 ರೂ. ಕಡಿತ ಮಾಡಿ, ರೈತ ವಿರೋಧಿ, ಜನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದೆ. ಇದರ...Kannada News Portal