ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ ಹತ್ತು ದಿನಗಳಿಂದ ಬಿಜೆಪಿಯಿಂದ ಉತ್ತಮ ಪ್ರಚಾರ ಕಾರ್ಯ ನಡೆದಿದ್ದು, ಬಹಿರಂಗ ಪ್ರಚಾರದ ಕೊನೆಯ ದಿನವಾದ ಗುರುವಾರದಂದು ಮಹಾಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಕ್ಷೇತ್ರದ ಅಭ್ಯರ್ಥಿಯೂ ಆದ ಯಶವಂತರಾವ್ ಜಾಧವ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್‍ಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಅಲ್ಲದೆ ಸಂಸದ ಜಿ.ಎಂ.ಸಿದ್ದೇಶ್ವರ, ಹೆಚ್.ಎಸ್.ನಾಗರಾಜ್ ಸೇರಿದಂತೆ ಅಭಿಮಾನಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬೆಳಿಗ್ಗೆ 10ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದ ನಂತರ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ರೋಡ್ ಶೋ ಮಾದರಿಯಲ್ಲಿ ಸುಮಾರು 4 ಕಿ.ಮಿ. ಇದರ ವ್ಯಾಪ್ತಿಯಿದೆ. ಹಗೆದಿಬ್ಬ ಸರ್ಕಲ್, ಅಂಬೇಡ್ಕರ್ ವೃತ್ತ, ವಿಠಲ ಮಂದಿರ ರಸ್ತೆ, ಚೌಕಿಪೇಟೆ, ನರಸರಾಜ ರಸ್ತೆ, ಗಡಿಯಾರ ಕಂಬ, ವಕ್ಕಲಿಗರ ಪೇಟೆ, ಹೊಂಡದ  ರಸ್ತೆ, ಜಾಲಿ ನಗರ, ಶಿವಾಲಿ ರಸ್ತೆ, ಕೊಂಡಜ್ಜಿ ರಸ್ತೆಗಳಲ್ಲಿ ಅಭಿಯಾನ ನಡೆಯಲಿದೆ ಎಂದರು.

ಈ ಬಾರಿ ದಾವಣಗೆರೆ ದಕ್ಷಿಣ ಸೇರಿದಂತೆ ಜಿಲ್ಲೆಯ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭ್ಯರ್ಥಿಗಳು ಹೋದ ಕಡೆಯಲೆಲ್ಲಾ ವಿಕ್ಟರಿಯನ್ನು ತೋರಿಸಿ, ಗೆಲ್ಲಿಸುವ ಸೂಚನೆ ನೀಡಿದ್ದಾರೆ. ಯಾವುದೆ ಅನುಮಾನವಿಲ್ಲದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 25 ವರ್ಷಗಳಿಂದ ಒಂದೇ ಮನೆತನದವರ ಆಡಳಿತ ನಡೆದಿದೆ. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದರೂ, ಕ್ಷೇತ್ರದ ಅಭಿವೃದ್ಧಿ ಹೇಳಿಕೊಳ್ಳುವಂತೆ ಆಗಿಲ್ಲ. ಅವರ ವಿರುದ್ಧ ನಾನು ಮೂರು ಬಾರಿ ಸ್ವಲ್ಪ ಅಂತರದಲ್ಲಿ ಸೋತಿದ್ದೇನೆ. ಇದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದರು.

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-09-at-6.27.50-PM-1.jpeghttp://bp9news.com/wp-content/uploads/2018/05/WhatsApp-Image-2018-05-09-at-6.27.50-PM-1-150x150.jpegBP9 Bureauದಾವಣಗೆರೆರಾಜಕೀಯದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ ಹತ್ತು ದಿನಗಳಿಂದ ಬಿಜೆಪಿಯಿಂದ ಉತ್ತಮ ಪ್ರಚಾರ ಕಾರ್ಯ ನಡೆದಿದ್ದು, ಬಹಿರಂಗ ಪ್ರಚಾರದ ಕೊನೆಯ ದಿನವಾದ ಗುರುವಾರದಂದು ಮಹಾಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಕ್ಷೇತ್ರದ ಅಭ್ಯರ್ಥಿಯೂ ಆದ ಯಶವಂತರಾವ್ ಜಾಧವ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್‍ಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಅಲ್ಲದೆ ಸಂಸದ ಜಿ.ಎಂ.ಸಿದ್ದೇಶ್ವರ, ಹೆಚ್.ಎಸ್.ನಾಗರಾಜ್ ಸೇರಿದಂತೆ ಅಭಿಮಾನಿಗಳು ಈ...Kannada News Portal