ದಾವಣಗೆರೆ : ಪರವಾನಗಿ ಇಲ್ಲದ ಪ್ರಮಾಣ ಪತ್ರ ಪಡೆಯದ ಪಾರ್ಲರ್ ಗಳನ್ನು ಪ್ರಾರಂಭಿಸುವುದರಿಂದ ತೊಂದರೆಗಳು ಉಂಟಾಗುತ್ತದೆ ಆದ್ದರಿಂದ ಅಖಿಲ ಕರ್ನಾಟಕ ಬ್ಯೂಟಿ ಪಾರ್ಲರ್​​​​  ಅಸೋಸಿಯೇಷನ್ ನಿಂದ ಜಿಲ್ಲಾ ಮಟ್ಟದಲ್ಲಿ ನೊಂದಣಿ ಮಾಡಲಾಗಿದ್ದು ಅಸೋಸಿಯೇಷನ್ ಮೂಲಕ ತರಬೇತಿ ಪಡೆದರೆ ಉತ್ತಮ ಎಂದು ಅಸೋಸಿಯೇಷನ್ ರಾಜ್ಯಾಧ್ಯಕ್ಷೆ ಅನಿತಾ ಶರ್ಲಿ ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಿಯಾದ ಅಭ್ಯಾಸವಿಲ್ಲದ ಕೆಲವರಿಂದ ನುರಿತ ಬ್ಯೂಟಿಶಿಯನ್ ಗಳಿಗೆ ಕೆಟ್ಟ ಹೆಸರು ಬರುತ್ತಿದೆ. ತರಬೇತಿ ಪಡೆಯಲು ಕನಿಷ್ಟ 2 ವರ್ಷಗಳಾದರು ಬೇಕು. ಆದ್ದರಿಂದ ನಮ್ಮಸಂಘಟನೆಯಿಂದ ನುರಿತ ಸೌಂದರ್ಯ ತಜ್ಞರಿಂದ ಪಾರ್ಲರ್ ಪ್ರಾರಂಭಿಸಲು ಆಸಕ್ತಿ ಇರುವವರಿಗೆ ತರಬೇತಿ ನೀಡಿ ವೃತ್ತಿಯ ಕೆಲಸ ನೀಡುವ ಜವಾಬ್ದಾರಿಯನ್ನು ಅಸೋಸಿಯೇಷನ್ ನಿರ್ವಹಿಸಲಿದೆ. ಅಲ್ಲದೆ ವ್ಯವಸ್ಥಿತ ಕ್ರಮದಲ್ಲಿ ಬ್ಯೂಟಿಶಿಯನ್ ಪಡೆಯಲು ಸರ್ಕಾರ ಕ್ರಮ ರಚಿಸಬೇಕೆಂದು ಮನವಿ ಸಲ್ಲಿಸಲಾಗುವುದು. ವೃತ್ತಿಗೆ ಸಂಬಂಧಪಡದ ಯಾವುದೇ ಸಂಘ ಸಂಸ್ಥೆಗಳು ತ್ವರಿತ ಬ್ಯೂಟಿಶಿಯನ್ ತರಬೇತಿ ಮತ್ತು ಸರ್ಟಿಫಿಕೇಟ್ ನೀಡಿದರೆ ಅವರ ವಿರುದ್ದ ದೂರು ದಾಖಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕವಿತಾ ಚಂದ್ರಶೇಖರ್, ಶೋಭಾ ಕೊಟ್ರೇಶ್, ಆಶಾ, ಶ್ವೇತಾ, ಪದ್ಮಾ ಇದ್ದರು.

 

Please follow and like us:
0
http://bp9news.com/wp-content/uploads/2018/09/dvg-3-byuthi-parlar-18918-script.-and-photo-1.jpghttp://bp9news.com/wp-content/uploads/2018/09/dvg-3-byuthi-parlar-18918-script.-and-photo-1-150x150.jpgBP9 Bureauದಾವಣಗೆರೆದಾವಣಗೆರೆ : ಪರವಾನಗಿ ಇಲ್ಲದ ಪ್ರಮಾಣ ಪತ್ರ ಪಡೆಯದ ಪಾರ್ಲರ್ ಗಳನ್ನು ಪ್ರಾರಂಭಿಸುವುದರಿಂದ ತೊಂದರೆಗಳು ಉಂಟಾಗುತ್ತದೆ ಆದ್ದರಿಂದ ಅಖಿಲ ಕರ್ನಾಟಕ ಬ್ಯೂಟಿ ಪಾರ್ಲರ್​​​​  ಅಸೋಸಿಯೇಷನ್ ನಿಂದ ಜಿಲ್ಲಾ ಮಟ್ಟದಲ್ಲಿ ನೊಂದಣಿ ಮಾಡಲಾಗಿದ್ದು ಅಸೋಸಿಯೇಷನ್ ಮೂಲಕ ತರಬೇತಿ ಪಡೆದರೆ ಉತ್ತಮ ಎಂದು ಅಸೋಸಿಯೇಷನ್ ರಾಜ್ಯಾಧ್ಯಕ್ಷೆ ಅನಿತಾ ಶರ್ಲಿ ಸಲಹೆ ನೀಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal