ದಾವಣಗೆರೆ : ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಬಾಪೂಜಿ ಆಸ್ಪತ್ರೆಯ ರಕ್ತಭಂಡಾರದ ಅಧಿಕಾರಿ ಡಾ.ಕೆ.ಜಗದೀಶ್ವರಿ ಹೇಳಿದರು. ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲಿಂ. ಶ್ರೀತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ದಾಂಜಲಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ರಕ್ತದಾನ ಶಿಬಿರದಲ್ಲಿ ಪಿಪಿಟಿ ಮೂಲಕ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು.

ರಕ್ತದಾನ ಮಾಡುವುದು ಸಣ್ಣ ಕ್ರಿಯೆಯಾಗಿದ್ದು ಅದು ದೊಡ್ಡ ಮಹತ್ವ ಹೊಂದಿದೆ.ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಲಾಗುತ್ತದೆ. ರಕ್ತದಾನದಲ್ಲಿ ಸ್ವಯಂ ಪ್ರೇರಿತರ ಸಂಖ್ಯೆ ಕಡಿಮೆಯಾಗಿದ್ದು, ರಕ್ತ ಹಣ ಕೊಟ್ಟರು ಸಹ ದೊರೆಯುವುದಿಲ್ಲ, ಮತ್ತು ಪರ್ಯಾಯವಾಗಿಯೂ ಏನು ಇಲ್ಲ, ರಕ್ತದಾನ ಮಾಡುವ ಮಹಿಳೆಯರು 45 ಕೆಜಿ ತೂಕ ಹೊಂದಿರಬೇಕು. ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುತ್ತದೆ. ಅದನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು. ಸುಮಾರು 350 ರಿಂದ 400 ಎಂಎಲ್ ರಕ್ತ ಪಡೆಯಲಾಗುತ್ತಿದ್ದು, ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ, ಮತ್ತೆ ಎರಡು ದಿನಗಳಲ್ಲಿ ರಕ್ತ ಉತ್ಪತ್ತಿಯಾಗುತ್ತದೆ ಎಂದರು. ವ್ಯಕ್ತಿಯ ದೇಹದಲ್ಲಿ ಕೆಂಪುರಕ್ತಕಣಗಳು 60 ದಿನಗಳ ಬಳಿಕ ಹೊರಹಾಕಲಾಗುತ್ತಿದೆ. ಆದ್ದರಿಂದ ರಕ್ತದಾನ ಮಾಡಿ. ರಕ್ತದಾನ ಮಾಡುವ ವೇಳೆ ಸಿರಿಂಜ್ ಬಳಸುವುದರಿಂದ ರೋಗ ಬರುತ್ತದೆ ಎನ್ನುವ ಅಪಾಯದಲ್ಲಿರುತ್ತಾರೆ. ಒಂದು ಬಾರಿ ರಕ್ತಕ್ಕೆ ಒಂದು ಸಿರಿಂಜ್ ಮಾತ್ರ ಬಳಕೆ ಮಾಡಲಾಗುತ್ತದೆ. ಇದರ ಬಗ್ಗೆ ಭಯಪಡಬೇಡಿ ಎಂದು ತಿಳಿಸಿದರು.

ರಕ್ತವನ್ನು ಪಡೆದ ಮೂಲಕ ಬ್ಲೆಡ್ ಬ್ಯಾಂಕ್ ನಲ್ಲಿ ಎಲ್ಲಾ ರೀತಿಯ ಗ್ರೂಪ್ ಗಳ ರಕ್ತವಿಂಗಡನೆ ಮಾಡಿ ಶೇಖರಿಸಲಾಗುತ್ತಿದೆ. ರಕ್ತದಾನ ಮಾಡಲು  18 ರಿಂದ 60 ವರ್ಷಕ್ಕೆ ಸೀಮಿತವಾಗಿತ್ತು. ಆದರೆ ಈಗ 65 ಕ್ಕೆ ಏರಿಸಲಾಗಿದೆ. 45ಕೆಜಿ ಗಿಂತ ಕಡಿಮೆ ತೂಕವುಳ್ಳವರಿಂದ ರಕ್ತವನ್ನು ಪಡೆಯಲಾಗುವುದಿಲ್ಲ, ಹಿಮೋಗ್ಲೋಬಿನ್ ಪ್ರಮಾಣ ಪುರುಷರಲ್ಲಿ 12, ಮಹಿಳೆಯರಲ್ಲಿ 11 ಇರಬೇಕು. ಪುರುಷರು 3 ತಿಂಗಳು, ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಸದಸ್ಯ ಎಸ್.ಹಾಲಪ್ಪ, ಪ್ರಾಚಾರ್ಯರಾದ ಡಾ.ಕೆ.ಟಿ.ನಾಗರಾಜ್ ನಾಯ್ಕ್, ಸಂತೋಷ್ ಕುಮಾರ್, ಮಧು ಎಸ್.ಎನ್ ಸೇರಿದಂತೆ ಮತ್ತಿತರರಿದ್ದರು.

 

Please follow and like us:
0
http://bp9news.com/wp-content/uploads/2018/09/dvg-4-raktadana-18918-script.and-photo-1.jpghttp://bp9news.com/wp-content/uploads/2018/09/dvg-4-raktadana-18918-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ : ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಬಾಪೂಜಿ ಆಸ್ಪತ್ರೆಯ ರಕ್ತಭಂಡಾರದ ಅಧಿಕಾರಿ ಡಾ.ಕೆ.ಜಗದೀಶ್ವರಿ ಹೇಳಿದರು. ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲಿಂ. ಶ್ರೀತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ದಾಂಜಲಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ರಕ್ತದಾನ ಶಿಬಿರದಲ್ಲಿ ಪಿಪಿಟಿ ಮೂಲಕ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು. var domain = (window.location != window.parent.location)? document.referrer :...Kannada News Portal