ದಾವಣಗೆರೆ : ರೈತ ಹುತಾತ್ಮರ ಸ್ಮರಣಾ ಸಮಿತಿ ವತಿಯಿಂದ ಸಮೀಪದ ಆನಗೋಡಿನಲ್ಲಿರುವ ರೈತ ಹುತಾತ್ಮರ ಸಮಾಧಿ ಬಳಿ ಸೆ. 13 ರಂದು ಬೆಳಗ್ಗೆ 11-30 ಕ್ಕೆ 26ನೇ ವರ್ಷದ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಆನಗೋಡಿನಲ್ಲಿ 1992 ರ ಸೆ. 13 ರಂದು ಕೇಂದ್ರ ಸರ್ಕಾರದ ರಸಗೊಬ್ಬರ ಬೆಲೆ ಏರಿಕೆ ವಿರುದ್ದ ನಡೆದ ಐತಿಹಾಸಿಕ ರೈತರ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿ ಮಡಿದ ರೈತರಾದ ಓಬೇನಹಳ್ಳಿ ಕಲ್ಲಿಂಗಪ್ಪ ಮತ್ತು ಸಿದ್ದನೂರು ನಾಗರಾಜಚಾರ್ ಅವರ 26ನೇ ವರ್ಷದ ಸ್ಮರಣಾರ್ಥ ರೈತ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ರಾಜ್ಯ ಮತ್ತು ಜಿಲ್ಲೆಯಲ್ಲಿ ದಿನನಿತ್ಯ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತಕಾಪಾಡುವಲ್ಲಿ ವಿಫಲವಾಗಿವೆ. ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ್ ರೈತ ಆಯೋಗದ ವರದಿ ಜಾರಿ ಮಾಡಲು ವಿಳಂಬ ಮಾಡುತ್ತಿವೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀತಿ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು. ಅಂದು ನಡೆಯುವ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.  ಸುದ್ದಿಗೋಷ್ಟಿಯಲ್ಲಿ ಶಾಮನೂರು ಲಿಂಗರಾಜ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಚಿಕ್ಕನಹಳ್ಳಿ ಮಲ್ಲೇಶಪ್ಪ,ರಾಜಶೇಖರ್, ಕೆ.ಎಸ್.ಮೋಹನ್,ತೋಳಹುಣಸೆ ಮಹೇಶ್ವರಪ್ಪ, ಆವರಗೆರೆ ರುದ್ರಮುನಿ, ಜಿ.ಹೆಚ್.ಲಿಂಗರಾಜು ಇದ್ದರು.

 

Please follow and like us:
0
http://bp9news.com/wp-content/uploads/2018/09/dvg-5-hutatmara-dhinacharane-11918-script.and-photof-1.jpghttp://bp9news.com/wp-content/uploads/2018/09/dvg-5-hutatmara-dhinacharane-11918-script.and-photof-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ : ರೈತ ಹುತಾತ್ಮರ ಸ್ಮರಣಾ ಸಮಿತಿ ವತಿಯಿಂದ ಸಮೀಪದ ಆನಗೋಡಿನಲ್ಲಿರುವ ರೈತ ಹುತಾತ್ಮರ ಸಮಾಧಿ ಬಳಿ ಸೆ. 13 ರಂದು ಬೆಳಗ್ಗೆ 11-30 ಕ್ಕೆ 26ನೇ ವರ್ಷದ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಹೇಳಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal