ದಾವಣಗೆರೆ :  ತುಂಗಾಭದ್ರ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ 22 ಕೆರೆಗಳಿಗೆ ಅಧಿಕಾರಿಗಳು ನೀರು ಹರಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಕೆರೆ ಹೋರಾಟ ಸಮಿತಿ ಸದಸ್ಯರು ಇಂದು ಜಲಸಂಪನ್ಮೂಲ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾಯಕೊಂಡ ಶಾಸಕ ಲಿಂಗಣ್ಣ ನೇತೃತ್ವದಲ್ಲಿ ಕಚೇರಿಗೆ ಬೀಗ ಜಡಿದ ಪ್ರತಿಭಟನಾ ನಿರತರು ಕೂಡಲೇ ನೀರು ಹರಿಸಬೇಕೆಂದು ಆಗ್ರಹಿಸಿದರು. ಕಳೆದ ನಾಲ್ಕೈದು ತಿಂಗಳಿನಿಂದಲೂ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಹೊಳೆಯಲ್ಲಿ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಮೋಟಾರು ಕೆಟ್ಟು ಹೋಗಿದೆ ಎಂದು ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ.

ಇನ್ನು ಸಾಕಷ್ಟು ಕೆರೆಗಳಿಗೆ ನೀರು ಹರಿಯದಿದ್ದರು ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗಿದೆ ಎಂದು ಎಲ್ ಅಂಡ್ ಟಿ ಕಂಪನಿಗೆ ಅಧಿಕಾರಿಗಳು ಕ್ಲಿಯರೆನ್ಸ್ ಪತ್ರ ನೀಡಿದ್ದಾರೆ. ಹಾಗೂ ಇದಕ್ಕಾಗಿ ಕಂಪನಿಯವರಿಂದ ಲಕ್ಷಾಂತರ ರೂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದರು. ಇದುವರೆಗೂ ನಾಲ್ಕೈದು ಕೆರೆಗಳಿಗೂ ಒಂದು ಹನಿ ನೀರು ಹರಿದಿಲ್ಲ. ಮಳೆಗಾಲ ಪ್ರಾರಂಭವಾಗಿದೆ. ಇಷ್ಟರೊಳಗೆ ಪಂಪ್ ಗಳು ದುರಸ್ತಿಯಾಗಬೇಕಾಗಿತ್ತು. ಈ ಬಗ್ಗೆಯೂ ಸಹ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕೂಡಲೇ 22 ಕೆರೆಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ 22 ಕೆರೆ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥ್ ಗೌಡ, ಚಂದ್ರನಾಯ್ಕ, ಕೊಟ್ರೇಶ್ ನಾಯ್ಕ್, ಸಿದ್ದೇಶ್ ಸೇರಿದಂತೆ ನೂರಾರು ರೈತರು ಧರಣಿಯಲ್ಲಿದ್ದರು.

 

Please follow and like us:
0
http://bp9news.com/wp-content/uploads/2018/06/dvg-3-jalasampanmula-18618-script.and-photo-1.jpghttp://bp9news.com/wp-content/uploads/2018/06/dvg-3-jalasampanmula-18618-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ :  ತುಂಗಾಭದ್ರ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ 22 ಕೆರೆಗಳಿಗೆ ಅಧಿಕಾರಿಗಳು ನೀರು ಹರಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಕೆರೆ ಹೋರಾಟ ಸಮಿತಿ ಸದಸ್ಯರು ಇಂದು ಜಲಸಂಪನ್ಮೂಲ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಾಯಕೊಂಡ ಶಾಸಕ ಲಿಂಗಣ್ಣ ನೇತೃತ್ವದಲ್ಲಿ ಕಚೇರಿಗೆ ಬೀಗ ಜಡಿದ ಪ್ರತಿಭಟನಾ ನಿರತರು ಕೂಡಲೇ ನೀರು ಹರಿಸಬೇಕೆಂದು ಆಗ್ರಹಿಸಿದರು. ಕಳೆದ ನಾಲ್ಕೈದು ತಿಂಗಳಿನಿಂದಲೂ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಹೊಳೆಯಲ್ಲಿ...Kannada News Portal