ದಾವಣಗೆರೆ : ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಯದೇವವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರು.

ಆದರೆ ನುಡಿದಂತೆ ನಡೆಯದೆ ವಿಳಂಬ ನೀತಿ ತಾಳುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ರೈತರ ಸಭೆ ಕರೆದಾಗ 15 ದಿನಗಳಲ್ಲಿ ಸಾಲಾ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. 15 ದಿನಗಳು ಕಳೆದರೂ ಇನ್ನೂ ಮನ್ನಾ ಮಾಡಿಲ್ಲ. ಈಗ ಬಜೆಟ್‍ನಲ್ಲಿ ಘೋಷಣೆ ಮಾಡುತ್ತೇನೆಂದು ಹೇಳುತ್ತಿದ್ದಾರೆ. ಮುಂದೂಡುತ್ತಾ ಹೋಗುತ್ತಿರುವುದರಿಂದ ಮುಖ್ಯಮಂತ್ರಿಗಳ ಮೇಲಿದ್ದ ಭರವಸೆ ಕಡಿಮೆಯಾಗುತ್ತಿದೆ. ಸಾಲಮನ್ನಾಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಇಲ್ಲ. ಸಾಲಾಮನ್ನಾ ರೈತರಿಗೆ ಸರಕಾರ ನೀಡುವ ಕೊಡುಗೆಯೂ ಅಲ್ಲ.

ನೈಸರ್ಗಿಕ ವಿಕೋಪ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ದೊರೆಯುದೆ ಇರುವುದು, ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ರೈತರು ತೊಂದರೆಯಲ್ಲಿ ಸಿಲುಕಿದ್ದರಿಂದ ಅವರ ಸಾಲಮನ್ನಾ ಮಾಡಿ, ರೈತರ ಋಣ ತೀರಿಸಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು. ರೈತರ ಮುಖಂಡ ಬಡಗಲಪುರ ನಾಗೇಂದ್ರಪ್ಪ, ಓಂಕಾರಪ್ಪ, ಇಟಿಗಿ ಬಸವರಾಜಪ್ಪ, ಬಲ್ಲೂರು ರವಿಕುಮಾರ್, ರೇವಣಸಿದ್ದಪ್ಪ, ಅಶೋಕ, ನಾಗರಾಜ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

 

Please follow and like us:
0
http://bp9news.com/wp-content/uploads/2018/06/dvg-1-protest-18618-script.and-photo-1.jpghttp://bp9news.com/wp-content/uploads/2018/06/dvg-1-protest-18618-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ : ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಯದೇವವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ನುಡಿದಂತೆ ನಡೆಯದೆ ವಿಳಂಬ ನೀತಿ ತಾಳುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ರೈತರ ಸಭೆ ಕರೆದಾಗ 15 ದಿನಗಳಲ್ಲಿ ಸಾಲಾ ಮನ್ನಾ ಮಾಡುವುದಾಗಿ...Kannada News Portal