ದಾವಣಗೆರೆ: ಭಾರತದಲ್ಲಿ ಅನೇಕ ಅಪರಾಧಗಳು ಹೆಣ್ಣಿನ ಮೇಲೆ ನಡೆಯುತ್ತಿವೆ, ಅದರಲ್ಲಿ ಅತ್ಯಂತ ಭೀಕರ ಅಪರಾಧವೆಂದರೆ, ಹೆಣ್ಣು ಭ್ರೂಣಹತ್ಯೆಯಾಗುವುದು ಎಂದು ಕೊಂಡಜ್ಜಿಯ ಸರ್ಕಾರಿ ಪಿಯು ನಿವೃತ್ತ ಪ್ರಾಂಶುಪಾಲರಾದ ಗಿರಿಜಾ ಎನ್. ಕಾಡಯ್ಯನಮಠ ಹೇಳಿದರು.

ನಗರದ ಮಾ.ಸಾ.ಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಾ.ಸಾ.ಬ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತದಲ್ಲಿ ಅಂತರ ಹೆಚ್ಚಾಗುತ್ತಿದೆ, ಜನರು ಹೆಣ್ಣಿನ ಜನನದ ಬಗ್ಗೆ ತಾರತಮ್ಯ ಮಾಡದೇ ಸಮನಾಗಿ ಕಾಣುವುದರ ಮೂಲಕ ಭ್ರೂಣ ಹತ್ಯೆಯನ್ನು ತಡೆಯಬಹುದಾಗಿದೆ. ಭ್ರೂಣ ಹತ್ಯೆ ತಡೆಗೆ ಕಠಿಣ ಕಾಯ್ದೆ ಜಾರಿಯಲ್ಲಿದ್ದರು ಸಹ 2017ರಲ್ಲಿ, ಭಾರತದಲ್ಲಿ 10 ಕೋಟಿ ಭ್ರೂಣ ಹತ್ಯೆಯಾಗಿರುವುದು ಬೇಸರದ ಸಂಗತಿ ಎಂದರು.

ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಅರಿವು ಮೂಡಿಸುವ ಕಾರ್ಯಕ್ರಮಗಳ ಅಗತ್ಯತೆ ಇದೆ. ಮಹಿಳಾ ದಿನಾಚರಣೆ ಒಂದು ದಿನದ ಆಚರಣೆ ಆಗಬಾರದು. ಪ್ರತಿಯೊಂದು ಮಹಿಳೆಗೆ ಪ್ರತಿನಿತ್ಯ ಗೌರವ ಸಿಗುವಂತೆ ಆಗಬೇಕು. ಗ್ರಾಮಾಂತರ ಪ್ರದೇಶದಲ್ಲಿ ಇರುವ ಸಾಮಾನ್ಯ ಮಹಿಳೆಯರಿಗೆ ಸಮಾಜದಲ್ಲಿ ಮಹಿಳೆಯ ಪಾತ್ರ ಎನೆಂಬುದನ್ನು ತಿಳಿಸುವ ಅಗತ್ಯತೆ ಇದೆ. ಅವರಲ್ಲಿರುವ ಮಾನಸಿಕ ಖಿನ್ನತೆಗಳನ್ನು ಹೋಗಲಾಡಿಸಿ, ಶೊಷಣೆಯನ್ನು ತಡೆದು ಸಮಾನತೆ ಆಧಾರದ ಮೇಲೆ ಹೊಸ ಬೆಳಕಿನಡೆಗೆ ಕರೆದೊಯ್ಯೂವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದು ಹೇಳಿದರು.

ರೋಸಾ ಲಕ್ಸಂಬರ್ಗ್ ಸಮಾಜವಾದಿ ನಾಯಕಿ ಕ್ಲಾರಾ ಜೆಟ್‍ಕಿನ್ 1910ರಲ್ಲಿ ನಡೆದ ಅಂತರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅದರಲ್ಲಿ ಮಹಿಳೆಯರಿಗೆ ಸಾರ್ವತ್ರಿಕ ಮತದಾನದ ಹಕ್ಕು, ಹೆರಿಗೆ ಭತ್ಯ ಮತ್ತು ಇತರೆ ಸೌಕರ್ಯಗಳ ವಿಷಯಗಳು ಪ್ರಸ್ತಾಪಿಸಲಾಯಿತು. 1911ರಲ್ಲಿ ಮಾರ್ಚ್ 8ರಂದು ಮಹಿಳಾ ದಿನಾಚರಣೆ ಆಚರಿಸಬೇಕು ಎಂದು ಕ್ಲಾರಾ ಜೆಟ್‍ಕಿನ್ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಅಂದಿನಿಂದ ಮಹಿಳಾ ದಿನವೆಂಬುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು.

ಪ್ರಸ್ತುತ ಭಾರತ ದೇಶದಲ್ಲ್ಲಿ ಮಹಿಳೆ ಪುರುಷನಷ್ಟು ಸಮಾನತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ ಪ್ರತಿ ಮಹಿಳೆಯು ಪುರುಷನಷ್ಟೆ ಸಮರ್ಥಳು, ಅವಳಿಗೆ ಸಮಾಜದಲ್ಲಿ ಸಮಾನತೆ ಸಿಕ್ಕಿದೆ ಎಂದು ಆದರೆ ಇಂದಿಗೂ ಸಹ ವರದಕ್ಷಿಣೆ ಪಿಡುಗನ್ನು ಹೊಗಲಾಡಿಸಲು ಆಗಿಲ್ಲ. ಹೆಣ್ಣು ಒಂಟಿಯಾಗಿ ನಡೆದಾಡುವ ವಾತಾವರಣ ಸೃಷ್ಠಿಯಾಗಿಲ್ಲ. ಹೆಣ್ಣು ಇನ್ನು ಸಹ ಅಬಲೆಯಾಗಿ ಉಳಿದಿದ್ದಾಳೆ. ನಿಜವಾಗಿಯೂ ಹೆಣ್ಣು, ಗಂಡು ಮಾಡುವ ಪ್ರತಿಯೊಂದು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದಾಳೆ. ಕುಟುಂಬದ ನಿರ್ವಾಹಣೆ ಜೊತೆ ವೃತ್ತಿಯನ್ನು ಮಾಡುತ್ತಿದ್ದಾಳೆ. ಹೆಣ್ಣು ಮನಸ್ಸು ಮಾಡಿದರೆ ಎನನ್ನಾದರು ಸಾಧಿಸಬಲ್ಲಳು ಎಂದು ತೊರಿಸಿದ್ದಾಳೆ ಆದರೆ ಸಮಾನತೆ ಎಂಬುದು ದೂರವಾಗಿಯೆ ಉಳಿದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ| ಕೆ. ಹನುಮಂತಪ್ಪ, ಎಐಎಮ್‍ಎಸ್‍ಎಸ್ ಜಿಲ್ಲಾ ಸಂಘಟನಾಕಾರರಾದ ಭಾರತಿ ಕೆ, ಪ್ರೋ. ತಾರಾಮಣಿ ಮತ್ತಿತರರು ಉಪಸ್ಥಿತರಿದ್ದರು.

 

Please follow and like us:
0
http://bp9news.com/wp-content/uploads/2018/03/dvg-6-bhruna-hatye-nivarane-14318-script.and-photo.jpghttp://bp9news.com/wp-content/uploads/2018/03/dvg-6-bhruna-hatye-nivarane-14318-script.and-photo-150x150.jpgBP9 Bureauದಾವಣಗೆರೆದಾವಣಗೆರೆ: ಭಾರತದಲ್ಲಿ ಅನೇಕ ಅಪರಾಧಗಳು ಹೆಣ್ಣಿನ ಮೇಲೆ ನಡೆಯುತ್ತಿವೆ, ಅದರಲ್ಲಿ ಅತ್ಯಂತ ಭೀಕರ ಅಪರಾಧವೆಂದರೆ, ಹೆಣ್ಣು ಭ್ರೂಣಹತ್ಯೆಯಾಗುವುದು ಎಂದು ಕೊಂಡಜ್ಜಿಯ ಸರ್ಕಾರಿ ಪಿಯು ನಿವೃತ್ತ ಪ್ರಾಂಶುಪಾಲರಾದ ಗಿರಿಜಾ ಎನ್. ಕಾಡಯ್ಯನಮಠ ಹೇಳಿದರು. ನಗರದ ಮಾ.ಸಾ.ಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಾ.ಸಾ.ಬ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮತ್ತು...Kannada News Portal