ದಾವಣಗೆರೆ : ಸರದಾರ, ಮಲ್ಲಿಕಾ, ಜಾಹಂಗಿರ, ಮಂಜೀರಾ, ಸಿಂಧೂರಾ, ನೀಲಂ, ಪಂಚಮಿ, ನೀಲೇಶ್ವರಿ ಕಾಲಾಪಾಡ, ಚಾಸಾ, ನೀಲುದ್ದೀನ್, ಬಾಳಮಾವು, ನಿರಂಜನ, ಅಂಬಿಕಾ, ಸಿಂಧು, ಖಾದರ, ಚಂದ್ರಮ, ಜಾಹ್ನವಿ, ತ್ರಿಶೂಲ್, ರಶ್ಮಿ….ಏನಿದು ಚೆಂದದ ಹೆಸರುಗಳ ಪಟ್ಟಿ ಎಂದುಕೊಂಡಿರಾ? ಇದು ವಿವಿಧ ಸ್ವಾಧಿಷ್ಟಭರಿತ ಮಾವಿನ ಹಣ್ಣಿನ ತಳಿಗಳು.   ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರ ಸಹಯೋಗದೊಂದಿಗೆ ಇಂದಿನಿಂದ ಜೂ. 7 ರವರೆಗೆ ದಾವಣಗೆರೆ ಜಿಲ್ಲೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿರುವ ಮಾವು ಮೇಳದಲ್ಲಿ ಪ್ರದರ್ಶನಕ್ಕಿಡಲಾದ ಹಣ್ಣುಗಳು.

ದೇಶಾದ್ಯಂತದ ಸುಮಾರು 100 ಕ್ಕೂ ಅಧಿಕ ತಳಿಗಳ ಮಾವುಗಳನ್ನ ಸಂಗ್ರಹಿಸಿ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಹಾಗೂ ಜಿಲ್ಲೆಯಲ್ಲಿ ಹಾಗೂ ಅಕ್ಕಪಕ್ಕದ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಸ್ಥಳೀಯ ಮಾವುಗಳನ್ನು ನೇರವಾಗಿ ರೈತರಿಂದ ಗ್ರಾಹಕರಿಗೆ ಮಾರಾಟಕ್ಕಿಡಲಾಗಿದ್ದು, ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಮಾವುಮೇಳ ಮತ್ತು ಸಸ್ಯಸಂತೆಗೆ ಇಂದು ಚಾಲನೆ ನೀಡಿದರು.  ಕಾಲಾಪಾಡ, ಚೌಸಾ, ಬಾಳಮಾವು, ಮಲಗೋವಾ, ಚಿನೊಟೊ, ನೀಲೆಶಾನ್, ಚಲಾತ ಚೆನ್ನಿ, ತಾಲಿಮ್ಯಾಂಗೊ, ಕೇಸರ, ಕಲುಮಿ, ಸಣ್ಣೇಲೆ, ಗೋವಾ ಮನಕುರ, ಆಪೂಸ್, ತೋತಾಪುರಿ, ಮದನಪಲ್ಲಿ, ಬಂಗಸಫ್ಲರಿ, ಚಾರ್ದಾಳು, ದೂದ್‍ಪೇಡಾ, ಕಿಂಗ್‍ಸ್ಟಾರ್, ಬಾಂಬೆ, ಮಾಲ್ಡ, ರಸಪೂರಿ, ಕೊಬ್ಬರಿ, ಲಾಲ್‍ಪುರಿ, ಬಾಂಬೆಗ್ರೀನ್ ಸೇರಿದಂತೆ 100 ಕ್ಕೂ ಅಧಿಕ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಇದೇ ಸಂದರ್ಭದಲ್ಲಿ ಮಾತನಾಡಿ, ರೈತರಿಗೆ ನೇರ ಮತ್ತು ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಾವು ಮೇಳ ಆಯೋಜಿಸಲಾಗಿದೆ.  ಈ ಮೇಳದೊಂದಿಗೆ ಸಸ್ಯ ಸಂತೆಯನ್ನು ಆಯೋಜಿಸಲಾಗಿದೆ.   ಜಿಲ್ಲೆಯಾದ್ಯಂತ ಮಳೆಗಾಲ ಪ್ರಾರಂಭವಾಗಿದ್ದು, ಬಹುತೇಕ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡಲು ಇದು ಸೂಕ್ತ ಸಮಯವಾಗಿರುವುದರಿಂದ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಹಲವು ಕಸಿ/ಸಸಿಗಳನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ಇಲಾಖಾ ದರದಲ್ಲಿ ಒಂದೇ ಸೂರಿನಡಿ ಒದಗಿಸಲು ಅನುವಾಗುವಂತೆ ಈ ಸಸ್ಯ ಸಂತೆಯನ್ನು ಆಯೋಜಿಸಲಾಗಿದೆ. ಇಲ್ಲಿ ಮಾವು, ಸಪೋಟ, ಕರಿಬೇವು, ನುಗ್ಗೆ, ನಿಂಬೆ, ಗುಲಾಬಿ, ಗೃಹ ಅಲಂಕಾರಿಕ ಸಸಿಗಳನ್ನು ಇಲಾಖಾ ದರದಲ್ಲಿ ಅಂದರೆ ಕನಿಷ್ಟ ರೂ. 10 ರಿಂದ ಗರಿಷ್ಟ ರೂ. 50 ರವರೆಗೆ ಮಾರಾಟ ಮಾಡಲಾಗುವುದು, ರೈತರು-ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದರು.  2017-18 ನೆ ಸಾಲಿನಲ್ಲಿ 12000 ತೆಂಗು ಸಸಿ, 1000 ಮಾವು, 4200 ಸಪೋಟ, ನಿಂಬೆ 3000, ನುಗ್ಗೆ 4000, ಕರಿಬೇವು 2000, ಅಡಿಕೆ 26300 ಸಸ್ಯಾಭಿವೃದ್ಧಿ ಕೈಗೊಳ್ಳಲಾಗಿದ್ದು, 3000 ಅಲಂಕಾರಿಕ ಗಿಡಗಳು, 924000 ವಿವಿಧ ತರಕಾರಿ ಸಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಮಾರುಕಟ್ಟೆ-ಮಾಹಿತಿ ಒದಗಿಸುತ್ತಿರುವ ಮೇಳ ಶ್ಲಾಘನೀಯ

ರೈತರು ಬೆಳೆದ ಮಾವುಗಳನ್ನು ರೈತರೇ ನೇರವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವ ಸ್ಥಳೀಯ ಮಾರುಕಟ್ಟೆಯನ್ನು ಹಾಗೂ ರೈತರು-ಗ್ರಾಹಕರಿಗೆ ಮಾಹಿತಿ ಕೇಂದ್ರದಂತಿರುವ ಮಾವು ಮೇಳ ಮತ್ತು ಸಸ್ಯ ಸಂತೆ ಆಯೋಜನೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಅಭಿಪ್ರಾಯಪಟ್ಟರು.  ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರ ಸಹಯೋಗದೊಂದಿಗೆ ಇಂದಿನಿಂದ ಜೂ. 7 ರವರೆಗೆ ದಾವಣಗೆರೆ ಜಿಲ್ಲೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿರುವ ಮಾವು ಮೇಳ ಹಾಗೂ ಸಸ್ಯ ಸಂತೆಗೆ ಇಂದು ಚಾಲನೆ ನೀಡಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.ಒಂದೇ ಸೂರಿನಡಿ ರೈತರು, ಸಾರ್ವಜನಿಕರಿಗೆ ವಿವಿಧ ತಳಿಗಳ ಸಸಿಗಳು, ಹಣ್ಣುಗಳು ಹಾಗೂ ಇವುಗಳನ್ನು ಬೆಳೆಯಲು ಬೇಕಾದ ಮಾಹಿತಿ ಈ ಮೇಳದಲ್ಲಿ ದೊರೆಯಲಿದೆ. ಮಾವು ಮೇಳದಂತೆ ಪ್ರತಿ ಹಣ ?ಣನ ಮೇಳ ಆಯೋಜನೆಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಹಾಗೂ ಮುಂದಿನ ದಿನಗಳಲ್ಲಿ ಇಂತಹ ಫಲ-ಪುಷ್ಪ ಪ್ರದರ್ಶನ, ಹಣ ?ಣನ ಮೇಳಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಜಿನ ಮನೆಯಲ್ಲಿ ನಡೆಸಲಾಗುವುದು ಎಂದ ಅವರು ಸಾರ್ವಜನಿಕರು-ರೈತರು ಇಂತಹ ಮೇಳಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.ಮಾವು ನಮ್ಮ ರಾಜ್ಯದ ಪ್ರಮುಖ ಹಣ ?ಣನ ಬೆಳೆಯಾಗಿದ್ದು, ಪ್ರಪಂಚದ ಒಟ್ಟು ಮಾವು ಉತ್ಪಾದನೆಯ ಶೇ. 50 ಕ್ಕೂ ಹೆಚ್ಚು ಉತ್ಪಾದನೆಯನ್ನು ಭಾರತ ದೇಶ ಒಂದರಲ್ಲೇ ಉತ್ಪಾದಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾವು ಬೆಳೆಯಲು ಸೂಕ್ತವಾದ ಹವಾಗುಣವನ್ನು ಹೊಂದಿದ್ದು ಅಂದಾಜು 4400 ಹೆಕ್ಟೇರು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವಾರ್ಷಿಕವಾಗಿ ಅಂದಾಜು 34000 ಟನ್‍ಗಳಷ್ಟು ಉತ್ಪಾದನೆ ಇದೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂದರು.

ಆದರೆ ಮಾವು ಬೆಳೆಗಾರರು ಉತ್ಪಾದನೆಗೆ ತೋರುತ್ತಿರುವ ಆಸಕ್ತಿಯನ್ನು ಮಾರಾಟಕ್ಕೆ ತೋರುತ್ತಿಲ್ಲ ಹೀಗಾಗಿ ಮಾರಾಟದಿಂದ ಬರುವ ಬಹುಪಾಲು ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ಆದ್ದರಿಂದ ಮಾವು ಬೆಳೆಗಾರರಲ್ಲಿ ಈ ಕುರಿತು ಅರಿವು ಮೂಡಿಸಲು ಹಾಗೂ ಗ್ರಾಹಕರಿಗೆ ಗುಣಮಟ್ಟದ ಮಾವು ಒದಗಿಸುವ ದೃಷ್ಟಿಯಿಂದ ನಗರದಲ್ಲಿ ಈ ಮವು ಮೇಳ ಏರ್ಪಡಿಸಲಾಗಿದೆ. ಮೇಳದಲ್ಲಿ ಒಟ್ಟು 10 ರಿಂದ 15 ಮಾವು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುವುದು ಹಾಗೂ 100 ಕ್ಕೂ ಹೆಚ್ಚು ಬಗೆಯ ವಿವಿದ ಜಾತಿಯ ಮಾವಿನ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪರಿಸರ ದಿನಾಚರಣೆ ಕುರಿತು ಮಾತನಾಡಿದ ಅವರು ನಮ್ಮ ಗಮನಕ್ಕೆ ಬರುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುತ್ತಾ ಹೋಗೋಣ. ಹೀಗೆ ಮಾಡುವುದರಿಂದ ತಕ್ಕ ಮಟ್ಟಿಗಾದರೂ ಪ್ಲಾಸ್ಟಿಕ್ ಬಳಕೆ ತಡೆದಂತಾಗುತ್ತದೆ ಎಂದರು.

 

 

Please follow and like us:
0
http://bp9news.com/wp-content/uploads/2018/06/DVG-1-rasabharita-mavu-5618-script.and-photo-1.jpghttp://bp9news.com/wp-content/uploads/2018/06/DVG-1-rasabharita-mavu-5618-script.and-photo-1-150x150.jpgBP9 Bureauಕೃಷಿದಾವಣಗೆರೆಪ್ರಮುಖದಾವಣಗೆರೆ : ಸರದಾರ, ಮಲ್ಲಿಕಾ, ಜಾಹಂಗಿರ, ಮಂಜೀರಾ, ಸಿಂಧೂರಾ, ನೀಲಂ, ಪಂಚಮಿ, ನೀಲೇಶ್ವರಿ ಕಾಲಾಪಾಡ, ಚಾಸಾ, ನೀಲುದ್ದೀನ್, ಬಾಳಮಾವು, ನಿರಂಜನ, ಅಂಬಿಕಾ, ಸಿಂಧು, ಖಾದರ, ಚಂದ್ರಮ, ಜಾಹ್ನವಿ, ತ್ರಿಶೂಲ್, ರಶ್ಮಿ....ಏನಿದು ಚೆಂದದ ಹೆಸರುಗಳ ಪಟ್ಟಿ ಎಂದುಕೊಂಡಿರಾ? ಇದು ವಿವಿಧ ಸ್ವಾಧಿಷ್ಟಭರಿತ ಮಾವಿನ ಹಣ್ಣಿನ ತಳಿಗಳು.   ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರ ಸಹಯೋಗದೊಂದಿಗೆ...Kannada News Portal