ದಾವಣಗೆರೆ: ವಸತಿ ನಿಲಯ ಕಾರ್ಮಿಕರಿಗೆ ಬಾಕಿ ಇರುವ ವೇತನ ಪಾವತಿಸಬೇಕೆಂದು ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸದಸ್ಯರು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಸಮಾಜ ಕಲ್ಯಾಣ, ಬಿಸಿಎಂ ಇಲಾಖೆಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ ಅಧಿಕಾರಿಗಳನ್ನು ಕೇಳಿದರೆ ಅನುದಾನದ ನೆಪ ಹೇಳುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕರಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಸಾಲಸೋಲ ಮಾಡಿ ಬದುಕುವ ಸ್ಥಿತಿಗೆ ಇಲಾಖೆ ಕಾರ್ಮಿಕರನ್ನು ತಳ್ಳಿದೆ. ಈ ಕೂಡಲೇ ಬಾಕಿ ಇರುವ ವೇತನ ನೀಡಬೇಕು. ಕನಿಷ್ಟ ವೇತನ ಕಾಯ್ದೆಯ 2014-15, 2015-16, 2016-17ನೇ ಸಾಲಿನ ವ್ಯತ್ಯಾಸದ ತುಟ್ಟಿಭತ್ಯೆಯನ್ನು ಸಮಾಜ ಕಲ್ಯಾಣ ಮತ್ತು ವಸತಿ ಶಾಲೆಗಳಿಗೆ, ಬಿಸಿಎಂ ಜಗಳೂರು ತಾಲ್ಲೂಕಿನಲ್ಲಿ ನೀಡಿಲ್ಲ, ಹಾಗಾಗಿ ಎಲ್ಲಾ ಕಾರ್ಮಿಕರಿಗೆ ಕೂಡಲೇ ಪಾವತಿಸಬೇಕು. ಗ್ಲೋಬಲ್ ಏಜೆನ್ಸಿ ದಾವಣಗೆರೆ ಮತ್ತು ಪ್ರೈವೇಟ್ ಬ್ಯೂರೋ ಶಿವಮೊಗ್ಗ ಗುತ್ತಿಗೆದಾರರುಗಳು ಇಪಿಎಫ್ ತುಂಬುವಲ್ಲಿ ಅಕ್ರಮವೆಸಗಿದ್ದು, ಅವರ ವಿರುದ್ದ ಹಣ ದುರುಪಯೋಗದಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ವಾರದ ಮತ್ತು ತಿಂಗಳ ರಜೆ ಸೌಕರ್ಯನೀಡಬೇಕು.

ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು. 5ನೇ ತಾರೀಖಿನೊಳಗಾಗಿ ತಪ್ಪದೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಂಜುನಾಥ್ ಕೈದಾಳೆ, ಮಂಜುನಾಥ ರೆಡ್ಡಿ, ಸ್ವಾಮಿ ನಿಂಗಪ್ಪ, ಜಯಪ್ಪ, ಮಂಜುಳಾ, ಈಶ್ವರ, ರಂಗಮ್ಮ, ಅಜ್ಜಪ್ಪ, ರಮೇಶ್, ಮಹೇಶ್, ಶಾಂತಕುಮಾರ್, ಈಶ್ವರಪ್ಪ ಮತ್ತಿತರರಿದ್ದರು.

 

Please follow and like us:
0
http://bp9news.com/wp-content/uploads/2018/09/dvg-2-karmikara-protest-11918-script.and-photo-1.jpghttp://bp9news.com/wp-content/uploads/2018/09/dvg-2-karmikara-protest-11918-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ: ವಸತಿ ನಿಲಯ ಕಾರ್ಮಿಕರಿಗೆ ಬಾಕಿ ಇರುವ ವೇತನ ಪಾವತಿಸಬೇಕೆಂದು ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸದಸ್ಯರು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal