ಹೊನ್ನಾಳಿ : ಅಕ್ರಮವಾಗಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಕೆ. ರೇವಣಸಿದ್ಧನಗೌಡ ಎಚ್ಚರಿಸಿದರು.ತಾಲೂಕಿನ ಮಾಸಡಿ ಗ್ರಾಮದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿ ರೈತರಿಗೆ ಮಾರಾಟ ಮಾಡುತ್ತಿದ್ದ ಮುಸುಕಿನ ಜೋಳ ಮಳಿಗೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆಲವು ಬಿತ್ತನೆ ಬೀಜ ಸಂಸ್ಥೆಗಳು ಹಾಗೂ ಮಾರಾಟಗಾರರು ಕೆಲವು ರೈತರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಪ್ಯಾಕೆಟ್ ಹಾಗೂ ಲೂಸ್ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈಗಾಗಲೇ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳ ತಂಡ ತಪಾಸಣೆ ನಡೆಸುತ್ತಿದ್ದು, ತಾಲೂಕಿನ ಮಾಸಡಿ, ಅರಕೆರೆ, ಬಲಮುರಿ, ಹೊಳೆಅರಳಹಳ್ಳಿ, ಕತ್ತಿಗೆ, ಮಾದೇನಹಳ್ಳಿ, ಬೆಳಗುತ್ತಿ, ಮಲ್ಲಿಗೇನಹಳ್ಳಿ, ಸೂರಗೊಂಡನಕೊಪ್ಪ, ಫಲವನಹಳ್ಳಿ, ಎರೇಹಳ್ಳಿ, ಗಂಜೀನಹಳ್ಳಿ, ತರಗನಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ಅನಧಿಕೃತವಾಗಿ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ, ರೈತರು ಯಾವುದೇ ಕಾರಣಕ್ಕೂ ಈ ತರಹದ ಅನಧಿಕೃತ ಬಿತ್ತನೆ ಬೀಜ(ಪ್ಯಾಕೇಟ್ ಅಥವಾ ಲೂಸ್)ವನ್ನು ಖರೀದಿಸಬಾರದು. ಅಂತಹ ಮಾರಾಟಗಾರರು ಕಂಡುಬಂದಲ್ಲಿ ಕೂಡಲೇ ಸಮೀಪದ ಕೃಷಿ ಅಧಿಕಾರಿಗಳಿಗೆ ದೂರು ನೀಡುವಂತೆ ಮನವಿ ಮಾಡಿದರು.

ತಾಲೂಕಿನಲ್ಲಿ ಕೃಷಿ ಇಲಾಖೆ ಜಾಗೃತದಳ ತೀವ್ರವಾಗಿ ತಪಾಸಣೆ ನಡೆಸುತ್ತಿದ್ದು, ಯಾವುದೇ ಸಂಸ್ಥೆಯಾಗಲಿ ಇಲ್ಲವೇ ಮಾರಾಟಗಾರರಾಗಲಿ, ರೈತರಾಗಲಿ ಅಕ್ರಮವಾಗಿ ರಸಗೊಬ್ಬರ ಅಥವಾ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿ ಮಾರಾಟ ಮಾಡಿದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರೈತರು ಇಂಥ ವಸ್ತುಗಳನ್ನು ಖರೀದಿಸಿದಲ್ಲಿ ಮುಂದೆ ಬರುವ ಸಮಸ್ಯೆಗಳಿಗೆ ಇಲಾಖೆಯು ಜವಬ್ದಾರಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರೈತರು ಬಿತ್ತನೆ ಬೀಜ ಖರೀದಿಸುವಾಗ ಎಚ್ಚರವಹಿಸಬೇಕು. ಅಧಿಕೃತ ಮಾರಾಟಗಾರರಿಂದ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಮಾತ್ರ ಖರೀದಿಸುವ ಬಗ್ಗೆ ಕೃಷಿ ಅಭಿಯಾನಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಪರವಾನಿಗೆ ಪಡೆದ ಮಾರಾಟಗಾರರು ರೈತರ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ಕೃಷಿ ಪರಿಕರಗಳನ್ನು ಒಬ್ಬನೇ ರೈತರಿಗೆ ನೀಡುವುದು ಹಾಗೂ ಮೆಕ್ಕೆಜೋಳ ವ್ಯಾಪಾಸ್ಥರುಗಳಿಗೆ ನೀಡುವುದು ಕಂಡುಬಂದರೆ ಅಂತಹ ಮಾರಾಟಗಾರರ ಪರವಾನಿಗೆಯನ್ನು ಕೂಡಲೇ ಕಾನೂನು ರೀತಿ ಕ್ರಮ ಕೈಗೊಂಡು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.  ಸಹಾಯಕ ಕೃಷಿ ಅಧಿಕಾರಿಗಳಾದ ಎ.ಎಂ. ಶಂಶೀರ್ ಅಹಮ್ಮದ್, ಎಸ್.ಎನ್. ಓಲೇಕಾರ್, ಪೂರ್ವಾಚಾರಿ ಇತರರು ಇದ್ದರು.

Please follow and like us:
0
http://bp9news.com/wp-content/uploads/2018/06/dvg-3-akrama-bhittane-beeja-3618-script.and-photo-1.jpghttp://bp9news.com/wp-content/uploads/2018/06/dvg-3-akrama-bhittane-beeja-3618-script.and-photo-1-150x150.jpgBP9 Bureauಕೃಷಿದಾವಣಗೆರೆಹೊನ್ನಾಳಿ : ಅಕ್ರಮವಾಗಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಕೆ. ರೇವಣಸಿದ್ಧನಗೌಡ ಎಚ್ಚರಿಸಿದರು.ತಾಲೂಕಿನ ಮಾಸಡಿ ಗ್ರಾಮದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿ ರೈತರಿಗೆ ಮಾರಾಟ ಮಾಡುತ್ತಿದ್ದ ಮುಸುಕಿನ ಜೋಳ ಮಳಿಗೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆಲವು ಬಿತ್ತನೆ ಬೀಜ ಸಂಸ್ಥೆಗಳು ಹಾಗೂ ಮಾರಾಟಗಾರರು ಕೆಲವು ರೈತರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಪ್ಯಾಕೆಟ್...Kannada News Portal