ದಾವಣಗೆರೆ :  ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್‍ಅನ್ನು “ವಂಡರ್ ಮೇಟಿರಿಯಲ್” ಎಂದು ಬಿಂಬಿಸಲಾಗಿದೆ. ಪ್ಲಾಸ್ಟಿಕ್ ಇಲ್ಲದೇ ಬದುಕೇ ಇಲ್ಲ ಎಂಬ ಅವಿನಾಭಾವ ಸಂಬಂಧ ಪ್ಲಾಸ್ಟಿಕ್‍ನೊಂದಿಗೆ ಬೆಳೆದು ಬಿಟ್ಟಿದೆ. ಮನೆಯ ಒಳಗೂ, ಹೊರಗೂ ಎಲ್ಲೇಲ್ಲೂ ಪ್ಲಾಸ್ಟಿಕ್‍ದೇ ಕಾರುಬಾರು. ಅಷ್ಟೇ ಏಕೆ ನಾವು ಯಾವುದೇ ಅಂಗಡಿಗೆ ಹೋದರು ಅಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ ಎಂದರು ಅವರೊಂದಿಗೆ ಜಗಳವಾಡಿ ಆದರೂ ಸರಿ ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು ಅದರಲ್ಲೇ ಸಾಮಾನು ಖರೀದಿಸುತ್ತೇವೆ. ಬದಲಿಗೆ ಬಟ್ಟೆಯ ಬ್ಯಾಗ್ ಉಪಯೋಗಿಸಬೇಕು ಎನ್ನುವ ಚಿಂತೆಯಾಗಲಿ ಅಥವಾ ಯಾಕೆ ಪ್ಲಾಸ್ಟಿಕ್ ಬ್ಯಾನ್ ಆಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುವಷ್ಟು ಸಮಯ ನಮ್ಮಲ್ಲಿ ಇಲ್ಲದಂತಾಗಿದೆ.

ಕಾರಣ ಇಷ್ಟೇ ನಾವು ಉಪಯೋಗಿಸುವ ಆಕರ್ಷಕ ಬಣ್ಣ-ಬಣ್ಣದ ಪ್ಲಾಸ್ಟಿಕ್ ಚೀಲ, ಬಾಟಲ್, ಸ್ಪೂನ್, ಸ್ಟ್ರಾ, ಕಾಫಿ ಕಪ್, ಬಾಕ್ಸ್ ಇತ್ಯಾದಿಗಳು ತಯಾರಿಸಲು ಇಥಲಿನ್ ಡೈಕ್ಲೋರೈಡ್, ಲೆಡ್, ಕ್ಯಾಡ್ಮಿಯಂ, ವಿನೈಲ್ ಕ್ಲೋರೈಡ್‍ನಂತಹ ಅನೇಕ ವಿಷಕಾರಿ ರಸಾಯನಿಕಗಳಿಂದ ತಯಾರಿಸಲಾಗಿದ್ದು, ಇಂತಹ ಪ್ಲಾಸ್ಟಿಕ್ ಸಾಮಗ್ರಿ ಬಳಸಿ ಮೈಕ್ರೋವೇವ್, ರೆಫ್ರಿಜರೇಟರ್, ಮಾಡಿದ ತಿನಿಸು ಹಾಗೂ ಪ್ಲಾಸ್ಟಿಕ್ ಹೊದಿಸುವಿಕೆಯಿಂದ ಹೊದಿಸಿ ಮಾಡಿದ ತಿಂಡಿಗಳು, ನೀರಿನ ಬಾಟಲ್, ಜ್ಯೂಸ್ ಬಾಟಲ್, ಲಂಚ್‍ಬಾಕ್ಸ್ ಬಳಸುವುದರಿಂದ ಪ್ಲಾಸ್ಟಿಕ್‍ನಲ್ಲಿರುವ ಹಾನಿಕಾರಕ ಕೆಮಿಕಲ್‍ನ್ನು ನಾವು ಪರೋಕ್ಷವಾಗಿ ಸೇವಿಸಿದಂತಾಗುತ್ತದೆ.

ಕಡಿಮೆ ಬೆಲೆಯ ಹಾಗೂ ಉಪಯೋಗಿಸಲು ಸುಲಭವಾದ ಪ್ಲಾಸ್ಟಿಕ್ ಸಾಮಾನುಗಳು ತಕ್ಷಣ ಅವುಗಳ ಪ್ರಭಾವ ಬೀರುವುದಿಲ್ಲವಾದರೂ ರಸಾಯನಿಕ ಠೇವಣ  ಹಂತ ಹಂತವಾಗಿ ಬೆಳೆದು ಮುಂದೊಂದು ದಿನ ಜೀವಕ್ಕೆ ಹಾನಿ ಉಂಟು ಮಾಡುವ ಅನೇಕ ಕಾಯಿಲೆಗಳನ್ನು ಉಡುಗೊರೆಯಾಗಿ ಕೊಡುವ ಅರ್ಹತೆ ನಮ್ಮ ವಂಡರ್ ಮಟೀರಿಯಲ್ ಆದ ಪ್ಲಾಸ್ಟಿಕ್‍ಗೆ ಇದೆ. ನಾವು ಮಾಡುವ ಸಣ್ಣ ಸಣ್ಣ ತಪ್ಪಿನಿಂದ ಅದೆಷ್ಟೋ ಮೂಕ ಪ್ರಾಣ ಗಳು ಜಲಚರಗಳು, ನದಿ, ಕೆರೆ, ಸಾಗರಗಳು ಇಂದು ಪ್ಲಾಸ್ಟಿಕ್‍ನ ದುಷ್ಪರಿಣಾಮ ಎದುರಿಸಬೇಕಾಗಿದೆ.

ನಾವು ಉಪಯೋಗಿಸುವ ಪ್ಲಾಸ್ಟಿಕ್‍ಅನ್ನು ಕೆಳಗಿನ ವಿಧಗಳಲ್ಲಿ ವಿಂಗಡಿಸಲಾಗಿದೆ. ಈ ಪಟ್ಟಿಯಿಂದ ಯಾವ ತರಹದ ಪ್ಲಾಸ್ಟಿಕ್‍ನಲ್ಲಿ ಯಾವ ತರಹ ಹಾನಿಕಾರಕ ಕೆಮಿಕಲ್ ಉಪಯೋಗಿಸಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.(ಪಾಲಿತಿನ್ ಟೆರಿಪ್ತಾಲೇಟ್)   ತಕ್ಕ ಮಟ್ಟಿಗೆ ಸುರಕ್ಷಿತ ಹಾಗೂ ಮರುಬಳಕೆ ಪ್ರಾಪರ್ಟಿ ಹೊಂದಿದೆ. ಇವುಗಳನ್ನು ನೀರು, ಜ್ಯೂಸ್, ತಂಪು ಪಾನೀಯ, ಪೀನಟ್, ಬಟರ್ ಬಾಟಲ್‍ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.(ಹೈ ಡೆನ್ಸಿಟಿ ಪಾಲಿತಿಲಿನ್)

ತಕ್ಕ ಮಟ್ಟಿಗೆ ಸುರಕ್ಷಿತ ಹಾಗೂ ಮರುಬಳಕೆ ಮಾಡಬಹುದಾಗಿದೆ. ಇದನ್ನು ಶ್ಯಾಂಪೂ, ಸೋಪು, ಶೇಖರಿಸುವ ಬಾಟಲ್ ಹಾಗೂ ಪ್ಲಾಸ್ಟಿಕ್ ಗೊಂಬೆಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.(ಪಾಲಿವಿನೈಲ್ ಕ್ಲೋರೈಡ್) (ಅಪಾಯಕಾರಿ ಪ್ಲಾಸ್ಟಿಕ್) ಇದು ಕಡಿಮೆ ಬೆಲೆಯ ಪ್ಲಾಸ್ಟಿಕ್ ಆಗಿದ್ದು, ತಿಂಡಿ-ತಿನಿಸುಗಳನ್ನು ಪಾರದರ್ಶಕ ಪ್ಲಾಸ್ಟಿಕ್‍ನಲ್ಲಿ ಹೊದಿಸಲು, ಪೈಪ್ ಹಾಗೂ ಪ್ಲಾಸ್ಟಿಕ್ ಗೊಂಬೆಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. (ಲೋ ಡೆನ್ಸಿಟಿ ಪಾಲಿತಿಲಿನ್)

ತಕ್ಕ ಮಟ್ಟಿಗೆ ಸುರಕ್ಷಿತ ಹಾಗೂ ಮರುಬಳಕೆ ಮಾಡಬಹುದಾಗಿದೆ. ಸಿ.ಡಿ. ತಯಾರಿಸಲು ಮತ್ತು ಬಾಟಲ್ ತಯಾರಿಸಲು ಉಪಯೋಗಿಸುತ್ತಾರೆ.ಸುರಕ್ಷಿತ ಮೆಡಿಸಿನ್ ಬಾಟಲ್, ಎಲ್ಲಾ ತರಹದ ಫುಡ್ ಕಂಟೇನರ್ ಶಾಲೆಯ ಊಟದ ಪ್ಯಾಂಕಿಂಗ್‍ಗಳಲ್ಲಿ ಬಳಸಲಾಗುತ್ತದೆ.(ಪಾಲಿಸ್ಟೀರಿನ್) ಅಪಾಯಕಾರಿ ಹಾಗೂ ಅಸುರಕ್ಷಿತ ಓಜೋನ್ ಪದರಕ್ಕೆ ಹಾನಿಕಾರಕವಾದ ಕ್ಲೋರೋಪ್ಲೋರೋ ಕಾರ್ಬನ್ ಎಂಬ ರಸಾಯನಿಕದಿಂದ ಇದನ್ನು ತಯಾರಿಸಲಾಗುತ್ತದೆ.

ಮೇಲಿನ ಯಾವುದಾದರೂ  ಅಥವಾ ಮೇಲೆ ತಿಳಿಸಿರುವ ಪ್ಲಾಸ್ಟಿಕ್‍ನ ಸಮ್ಮಿಶ್ರಣವಾಗಿರುತ್ತದೆ. ಅಂತರಾಷ್ಟ್ರೀಯ ಕಂಪನಿಗಳು ಇದರಿಂದ ಬೇಬಿ ಫೀಡಿಂಗ್ ಬಾಟಲ್‍ಗಳನ್ನು ತಯಾರಿಸಲು ಬಳಸುತ್ತಾರೆ. ಇವು ಪಾರದರ್ಶಕ ಹಾಗೂ ಬಿ.ಪಿ.ಎ. ಉಚಿತ ಎಂದು ಬರೆದಿದ್ದರೆ ಬಳಸಹುದು. ಇಲ್ಲವಾದಲ್ಲಿ ಬಳಸಲು ಸುರಕ್ಷಿತವಲ್ಲ. ಕೊಟ್ಟಿರುವ ಮಾಹಿತಿಯಂತೆ ಅದರ ಚಿಹ್ನೆ ನೋಡಿ ಪ್ಲಾಸ್ಟಿಕ್ ಬಳಸುವುದು ಉತ್ತಮ. ಪ್ಲಾಸ್ಟಿಕ್‍ನನ್ನು ಸಂಪೂರ್ಣವಾಗಿ ಬಳಸದೇ ಇರುವುದು “ಅತ್ಯುತ್ತಮ”.

ಯಾವುದೇ ಪ್ಲಾಸ್ಟಿಕ್‍ನ್ನು ಮರುಬಳಕೆಯ ಮಾಡಿದರೂ ಕೂಡಾ ಅವುಗಳು ವಿಭಜನೆ ಆಗಲು ದಶಕಗಳು ಅಥವಾ 200 ವರ್ಷಗಳೇ ಬೇಕಾಗಬಹುದು. ಅಷ್ಟೇ ಅಲ್ಲದೇ ಇದರಿಂದ ಅನೇಕ ಗಂಭೀರ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಇರುವ ದಾರಿ ಎಂದರೆ ಆಕ್ಸೋ ಬಯೋಡಿಗ್ರೇಡೇಬಲ್ ಪ್ಲಾಸ್ಟಿಕನ ಬಳಕೆ. ಇದನ್ನು ಡಿ2ಡಬ್ಲ್ಯೂ (ಡೀಗ್ರಡೇಬಲ್ ಟು ವಾಟರ್) ಎಂಬ ತಂತ್ರಜ್ಞಾನವನ್ನು ಬಳಸಿ ತಯಾರಿಸುತ್ತಾರೆ.

 

Please follow and like us:
0
http://bp9news.com/wp-content/uploads/2018/06/plastic-planet.jpghttp://bp9news.com/wp-content/uploads/2018/06/plastic-planet-150x150.jpgBP9 Bureauಅಂಕಣದಾವಣಗೆರೆಪ್ರಮುಖದಾವಣಗೆರೆ :  ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್‍ಅನ್ನು 'ವಂಡರ್ ಮೇಟಿರಿಯಲ್' ಎಂದು ಬಿಂಬಿಸಲಾಗಿದೆ. ಪ್ಲಾಸ್ಟಿಕ್ ಇಲ್ಲದೇ ಬದುಕೇ ಇಲ್ಲ ಎಂಬ ಅವಿನಾಭಾವ ಸಂಬಂಧ ಪ್ಲಾಸ್ಟಿಕ್‍ನೊಂದಿಗೆ ಬೆಳೆದು ಬಿಟ್ಟಿದೆ. ಮನೆಯ ಒಳಗೂ, ಹೊರಗೂ ಎಲ್ಲೇಲ್ಲೂ ಪ್ಲಾಸ್ಟಿಕ್‍ದೇ ಕಾರುಬಾರು. ಅಷ್ಟೇ ಏಕೆ ನಾವು ಯಾವುದೇ ಅಂಗಡಿಗೆ ಹೋದರು ಅಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ ಎಂದರು ಅವರೊಂದಿಗೆ ಜಗಳವಾಡಿ ಆದರೂ ಸರಿ ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು ಅದರಲ್ಲೇ ಸಾಮಾನು ಖರೀದಿಸುತ್ತೇವೆ. ಬದಲಿಗೆ ಬಟ್ಟೆಯ ಬ್ಯಾಗ್...Kannada News Portal