ದಾವಣಗೆರೆ :ಕಳೆದ ಸೆಪ್ಟೆಂಬರ್ 6 ರಂದು ಸರ್ವೋಚ್ಚ ನ್ಯಾಯಾಲಯ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿರುವುದನ್ನು ಎಲ್ ಜಿ ಬಿಟಿ ಸಮುದಾಯದ ಪರವಾಗಿ ಸಂಗಮ ಮತ್ತು ಅಭಯ ಸ್ಪಂದನ ಸಂಸ್ಥೆ ಸ್ವಾಗತಿಸುತ್ತಿದೆ ಎಂದು ಸಂಸ್ಥೆಯ ಮಹೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯದ ಈ ತೀರ್ಪು ಎಲ್ ಜಿಬಿಟಿ ಸಮುದಾಯದವರಿಗೆ ಮಾತ್ರ ಅನ್ವಯವಾಗದೆ ದೇಶದ ಪ್ರತಿ ನಾಗರೀಕರಿಗೂ ಸಂಬಂಧಿಸಿದೆ. ಆದರೆ ಇದರಿಂದ ತೊಂದರೆಗೊಳಗಾಗುತ್ತಿದ್ದದ್ದು ಮಾತ್ರ ಎಲ್ ಜಿಬಿಟಿ ಸಮುದಾಯದವರು. ಇದಕ್ಕೆ ಕಾರಣ ನಮ್ಮ ಸಮುದಾಯದವರು ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ ಎಂಬ ಅಭಿಪ್ರಾಯ. ಅದಕ್ಕಾಗಿ ನಮ್ಮ ಸಮುದಾಯದವರ ಮೇಲೆ ಪೊಲೀಸ್ ದೌರ್ಜನ್ಯ ಹಾಗೂ ಸಾಮಾಜಿಕ ಕಳಂಕವಿತ್ತು. ಆದರೀಗ 20 ವರ್ಷಗಳ ಹೋರಾಟಕ್ಕೆ ನಮಗೆ ಜಯದೊರೆತಿದೆ. ನ್ಯಾಯಾಂಗದಡಿಯಲ್ಲಿ ನಮಗೆ ಸ್ವಾತಂತ್ರ ದೊರಕಿದರು ಕೂಡ ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ನೈತಿಕತೆಯ ವಿರುದ್ದ ಹೋರಾಟ ಮುಂದುವರೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಅಭಯ ಸ್ಪಂದನದ ನಂದಿನಿ ಮಾತನಾಡಿ, ಸರ್ಕಾರ ನಮ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ, ಅನುದಾನವಿದ್ದರು ಸಹ ತಾರತಮ್ಯ ಮಾಡಲಾಗುತ್ತಿದೆ. ಆಶ್ರಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ, ಸಮಾಜ ನಮ್ಮನ್ನು ಅಪರಾಧಿಗಳಂತೆ ನೋಡುತ್ತಾರೆ. ನಾವು ಸಹ ಮನುಷ್ಯರೇ. ನಮ್ಮಿಂದ ಹೆಚ್ ಐ ವಿ ಹರಡುತ್ತದೆ ಎಂದು ಹೇಳುತ್ತಾರೆ. ಆದರೆ ನಾವೇ ಹೆಚ್ ಐವಿ ಬಗ್ಗೆ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಅನೇಕರಿಗೆ ಚಿಕಿತ್ಸೆ ಸಹ ಕೊಡಿಸಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ದಾದಾಪೀರ್, ಪರ್ವಿನ್, ಜೋಯಾ, ಪಿಂಕಿ, ಹರೀಶ್, ಯಲ್ಲಮ್ಮ ಮತ್ತಿತರರಿದ್ದರು.

Please follow and like us:
0
http://bp9news.com/wp-content/uploads/2018/09/dvg-2-ljbt-samudaya-18918-script.and-photo-1.jpghttp://bp9news.com/wp-content/uploads/2018/09/dvg-2-ljbt-samudaya-18918-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ :ಕಳೆದ ಸೆಪ್ಟೆಂಬರ್ 6 ರಂದು ಸರ್ವೋಚ್ಚ ನ್ಯಾಯಾಲಯ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿರುವುದನ್ನು ಎಲ್ ಜಿ ಬಿಟಿ ಸಮುದಾಯದ ಪರವಾಗಿ ಸಂಗಮ ಮತ್ತು ಅಭಯ ಸ್ಪಂದನ ಸಂಸ್ಥೆ ಸ್ವಾಗತಿಸುತ್ತಿದೆ ಎಂದು ಸಂಸ್ಥೆಯ ಮಹೇಶ್ ಹೇಳಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal