ದಾವಣಗೆರೆ : ಇಂದು ವ್ಯಕ್ತಿ ವಿಕಸನಗೊಂಡಂತೆ ಮಹಾ ನಗರಗಳಲ್ಲಿ ಒಂದೊಳ್ಳೆ ಕೆಲಸಗಿಟ್ಟಿಸಿಕೊಳ್ಳಬೇಕು ಎಂದು ಕನಸು ಹೊತ್ತು, ಕಷ್ಟ ಪಡುವರೆ ಹೆಚ್ಚು. ಎಷ್ಟೋ ಯುವ ಪೀಳಿಗೆ ಡಬ್ಬಲ್ ಡಿಗ್ರಿ ಮಾಡಿದ್ರು ಪಟ್ಟಣಗಳಲ್ಲಿ ಅಲೆದಾಡಿ ವರ್ಷಾನುಗಟ್ಟಲೆ ಕೆಲಸ ಹುಡುಕುತ್ತಲೆ ಇದ್ದಾರೆ. ಆದ್ರೆ ಇಲ್ಲೊಬ್ಬ ಯುವಕ ಮಾತ್ರ ತಾನು ಡಬ್ಬಲ್ ಡಿಗ್ರಿ ಓದಿ ಒಂದೊಳ್ಳೆ ಕಂಪನಿಯಲ್ಲಿ ಕೆಲಸ ಸಿಕ್ರು ಅದೆಲ್ಲವನ್ನ ತೊರೆದು ಹೈನುಗಾರಿಕೆ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ. ಅಂತ ಸಾಧಕ ಇರೋದ್ರು ಎಲ್ಲಿ ಅನ್ನೋದನ್ನ ನಾವು ನಿಮಗೆ ತಿಳಿಸ್ತಿವಿ ನೋಡಿ………. ಮುದ್ದು ಮುದ್ದಾಗಿರುವ ಮೊಲಗಳು, ಮೊಲಗಳನ್ನ ಹಾರೈಕೆ ಮಾಡುತ್ತಿರುವ ಮಾಲೀಕ, ಸ್ನಾತಕೋತ್ತರ ಪದವಿ ಮುಗಿಸಿದ್ರು, ಎಲ್ಲವನ್ನ ಬಿಟ್ಟು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಛಲಗಾರ. ಇಂತದೊಂದು ದೃಶ್ಯ ಕಂಡು ಬಂದದ್ದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ.

ಮಿಟ್ಲಕಟ್ಟೆ ಗ್ರಾಮದ ಮಿಥುನ್ ತುಂಬಾನೇ ಬುದ್ದಿವಂತ, ಛಲಗಾರ ಕೂಡ ಹೌದು. ಈ ಹಿಂದೆ ಎಂಬಿಎ ಮುಗಿಸಿ ಒಂದೊಳ್ಳೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಕೈ ತುಂಬಾ ಹಣವನ್ನ ಕೂಡ ಸಂಪಾದನೆ ಮಾಡಿದ್ದ. ಆದ್ರೆ ಇತ್ತೀಚೆಗೆ ಅಲ್ಲಿನ ವ್ಯಾವಹಾರಿಕೆ ಜೀವನದ ಬಗ್ಗೆ ಜಿಗುಪ್ಸೆ ಉಂಟಾಗಿ ಕಡೆಗೆ ಹೈನುಗಾರಿಕೆ ಕಡೆಗೆ  ಒಲವು ತೋರಿಸಿದ್ರು. ಅದರಂತೆ ತಮ್ಮ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿ, ಸುಮಾರು 350 ಯುನಿಟ್ ಮೊಲಗಳನ್ನ ಸಾಕಿದ್ದಾರೆ. ಸುಮಾರು 6 ವರ್ಷದಿಂದ ಮೊಲ ಸಾಕುತ್ತಿರುವ ಮಿಥುನ್, ಕುಟುಂಬ ಖರ್ಚು ನೋಡಿಕೊಂಡು ಲಾಭದ ಹಣದಿಂದಲೇ ದೊಡ್ಡದಾದ ಗಾರ್ಡನ್ ಹೋಟೆಲ್ ಕೂಡ ನಡೆಸುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭಗಳಿಸಬೇಕಾದ್ರೆ ಮೊಲ ಸಾಕಾಣಿಕೆಯಿಂದ ಮಾತ್ರ ಸಾಧ್ಯ ಎಂದು ಮಿಥುನ್ ಹೇಳಿದ್ದಾರೆ..

ಮೊಲ ಸಾಕಣೆ ದೊಡ್ಡ ಪ್ರಮಾಣದಲ್ಲಿ ಮಾಡಿದ್ರೆ ಹೆಚ್ಚು ಲಾಭದಾಯಕ ಮತ್ತು ಸ್ವತಂತ್ರ್ಯ ಉದ್ಯಮ. ಮೊಲಗಳನ್ನ ವಿವಿಧ ರೀತಿಯಲ್ಲೂ ಸಾಕಣೆ ಮಾಡಬಹುದು. ಕಡಿಮೆ ಸ್ಥಳಾವಕಾಶ, ಮನೆಯ ಹಿತ್ತಲು, ತಾರಸಿ, ಆವರಣದಲ್ಲೂ ಸಾಕಣೆ ಮಾಡಬುದು. ಆದರೆ, ಅದಕ್ಕೆ ಮನಸ್ಸಿರಬೇಕಷ್ಟೆ. ಮೊಲ ಸಾಕಣೆ ಯುನಿಟ್ ಲೆಕ್ಕದಲ್ಲಿ ಮಾಡಬಹುದು. ಒಂದು ಯುನಿಟ್ ಅಂದರೆ ಹತ್ತು ಮೊಲಗಳು ಬರುತ್ತವೆ. ಅದರಲ್ಲಿ 7 ಹೆಣ್ಣು, 3 ಗಂಡು ಮೊಲಗಳಿರುತ್ತವೆ. ಒಂದು ಹೆಣ್ಣು ಮೊಲದ ಗರ್ಭಧಾರಣೆ ಅವಧಿ 30 ದಿನಗಳು. ಒಂದು ಪ್ರಸವದಲ್ಲಿ 5 ರಿಂದ 12 ಮರಿಗಳನ್ನ ಹಾಕುತ್ತವೆ. ಪ್ರತಿ ಎರಡು ತಿಂಗಳಿಗೊಮ್ಮೆ ಮರಿಗಳನ್ನ ಪಡೆಯಬಹುದು. ಮರಿಗಳು ಜನಿಸಿ ಒಂದು ತಿಂಗಳ ಕಾಲ ತಾಯಿಯ ಜೊತೆಯಲ್ಲೇ ಬಿಡಬೇಕು. ನಂತರ 2 ತಿಂಗಳು ಪ್ರತ್ಯೇಕವಾಗಿ ಬೆಳೆಯಬೇಕು. ಆಗ ಒಂದೊಂದು ಮರಿಯು 2 ರಿಂದ 3 ಕೆಜಿ ತೂಕ ಬರುತ್ತವೆ. ಸದ್ಯ ಒಂದು ಕೆಜಿ ಮೊಲಕ್ಕೆ 250 ರಿಂದ 350 ರೂಪಾಯಿ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ನಿತ್ಯ ಇಲ್ಲಿ ನೂರಾರು ಜನರು ಬಂದು ಮೊಲ ಸಾಕಾಣಿಕೆ ಬಗ್ಗೆ ತಿಳಿದುಕೊಂಡು ತಾವು ಮೊಲ ಸಾಕಾಣಿಕೆ ಬಗ್ಗೆ ಉತ್ಸುಹಕರಾಗಿದ್ದಾರೆ. ಓದಿ ಉದ್ಯೋಗ  ಸಿಗಲಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಎಷ್ಟೋ ಮಂದಿಗೆ ಮಿಥುನ್ ಮಾರ್ಗದರ್ಶಕರಾಗುವುದರ ಜೊತೆಗೆ ಕೆಲಸ ಸಿಗದೆ ದೊಡ್ಡ ದೊಡ್ಡ ನಗರಗಳಲ್ಲಿ ಅಲೆದಾಡುವ ವಿದ್ಯಾವಂತರಿಗೆ ಮಿಥುನ್ ಮಾದರಿಯಾಗಿದ್ದಾರೆ.

 

Please follow and like us:
0
http://bp9news.com/wp-content/uploads/2018/08/dvg-1-padaveedhara-5818-script.and-photo.3.jpghttp://bp9news.com/wp-content/uploads/2018/08/dvg-1-padaveedhara-5818-script.and-photo.3-150x150.jpgBP9 Bureauಕೃಷಿದಾವಣಗೆರೆಪ್ರಮುಖಸಾಧಕರುದಾವಣಗೆರೆ : ಇಂದು ವ್ಯಕ್ತಿ ವಿಕಸನಗೊಂಡಂತೆ ಮಹಾ ನಗರಗಳಲ್ಲಿ ಒಂದೊಳ್ಳೆ ಕೆಲಸಗಿಟ್ಟಿಸಿಕೊಳ್ಳಬೇಕು ಎಂದು ಕನಸು ಹೊತ್ತು, ಕಷ್ಟ ಪಡುವರೆ ಹೆಚ್ಚು. ಎಷ್ಟೋ ಯುವ ಪೀಳಿಗೆ ಡಬ್ಬಲ್ ಡಿಗ್ರಿ ಮಾಡಿದ್ರು ಪಟ್ಟಣಗಳಲ್ಲಿ ಅಲೆದಾಡಿ ವರ್ಷಾನುಗಟ್ಟಲೆ ಕೆಲಸ ಹುಡುಕುತ್ತಲೆ ಇದ್ದಾರೆ. ಆದ್ರೆ ಇಲ್ಲೊಬ್ಬ ಯುವಕ ಮಾತ್ರ ತಾನು ಡಬ್ಬಲ್ ಡಿಗ್ರಿ ಓದಿ ಒಂದೊಳ್ಳೆ ಕಂಪನಿಯಲ್ಲಿ ಕೆಲಸ ಸಿಕ್ರು ಅದೆಲ್ಲವನ್ನ ತೊರೆದು ಹೈನುಗಾರಿಕೆ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ. ಅಂತ ಸಾಧಕ ಇರೋದ್ರು ಎಲ್ಲಿ...Kannada News Portal