ಹರಿಹರ :  ವರುಣನ ಕೃಪೆಯಿಂದ ಬತ್ತಿ ಹೋಗುತ್ತಿದ್ದ ತುಂಗಭದ್ರೆಯ ಒಡಲು ಈಗ ಜೀವ ತುಂಬಿ ಕಳೆಗಟ್ಟಿದೆ. ಮಳೆಯ ಕೆಂಪು ನೀರು ಕಣ್ಣಿಗೆ ಕುಕ್ಕುವಂತೆ ಆಕರ್ಷಣಿಯವಾಗಿ ಹರಿಯುತ್ತಿದೆ. ಹರಿಹರದ ತುಂಗಭದ್ರಾ ನದಿ ಸುತ್ತಲ ವಾತಾವರಣವೀಗ ನಯನ ಮನೋಹರವಾಗಿದೆ.

ಪ್ರತಿದಿನ ಮುಸುಕಿದ ವಾತವರಣ, ಮಧ್ಯದಲ್ಲಿ ಸೂರ್ಯನ ಇಣುಕಾಟ,  ಇವುಗಳ ನಡುವೆ ಜಿಟಿ ಜಿಟಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಕೆರೆಕಟ್ಟೆಗಳು, ಹಳ್ಳ ಕೊಳ್ಳಗಳು ಜೀವ ಕಳೆಯಾದ ಹರಿಹರದ ತುಂಗಾಭದ್ರೆಯ ಮಡಿಲನ್ನು ಮೆಲ್ಲ ಮೆಲ್ಲನೆ ತುಂಬುತ್ತಿರುವುದು ಸಂತಸದ ವಿಷಯ.

ಕಳೆದ ಒಂದು ವಾರದಿಂದಲೇ ಮುಂಗಾರು ಮಳೆಯ ಲಕ್ಷಣಗಳು ಕಂಡು ಬಂದಿದ್ದು ರಾಜ್ಯದ ನಾನಾ ಜಿಲ್ಲಾ ತಾಲ್ಲೂಕುಗಳಲ್ಲಿ ಮುಂಗಾರು ಚುರುಕು ಮುಟ್ಟಿಸಿದೆ.ಈ ಹಿನ್ನಲೆಯಲ್ಲಿ ಹರಿಹರ ನಗರದಲ್ಲಿಯೂ ಸಹ ವರುಣನ ಆಗಮನ ನೆಮ್ಮದಿ ಮೂಡಿಸಿದೆ. ಮುಂಗಾರಿನ ಮಳೆಯಿಂದಾಗಿ ನಗರದ ರಸ್ತೆಗಳು ಸಂಪೂರ್ಣವಾಗಿ ಕೆಸರುಮಯವಾಗಿ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೂ ಕೊಂಚ ತೊಂದರೆಯಾಗುತ್ತಿದೆ.

ಒಂದು ಕಡೆ ತುಂಗಾ ಭದ್ರೆಯರ ಒಡಲು ತುಂಬುವುದು ಸಂತಸದ ಸಂಗತಿಯಾದರೆ ಇತ್ತ ಒಕ್ಕಲು ಮಾಡುವ ರೈತರಿಗೆ ತಮ್ಮ ಬೆಳೆ ಕೈಯಿಗೆ ಬರುವಷ್ಟರಲ್ಲೇ ವರುಣನ ಆಗಮನದಿಂದ ಬೆಳೆ ಎಲ್ಲಾ ನಾಶವಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.

ಏನೇ ಆಗಲಿ ಈ ಮುಂಗಾರು ಮಳೆ ರೈತರು, ಸಾರ್ವಜನಿಕರಲ್ಲಿ ಸಂತಸ ತಂದಿದೆ. ಪರಿಸರ ಜಾಗೃತಿಯನ್ನು ಹೊಂದಿದರೆ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗುತ್ತದೆ. ಬೇಸಿಗೆ ಕಾಲದಲ್ಲಿ ಹರಿಹರದ ಜನತೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು, ಈ ಭಾರಿ ಬೇಸಿಗೆಯ ದಿನಗಳಲ್ಲಿ ನದಿ ಬತ್ತಿ ಹೋಗುವ ಸಂದರ್ಭದಲ್ಲಿ ಜನರು ಆತಂಕದಲ್ಲಿದ್ದರು ಆದರೆ ಮುಂಗಾರು ಮಳೆಯಿಂದ  ಹರಿಹರ ತುಂಗಾ ಭದ್ರಾ ನದಿಯೂ ಕೊಂಚ ಮಟ್ಟಿಗೆ ಹರಿಯುತ್ತಿರುವುದು ಸಂತಸ ತಂದಿದೆ.

 

Please follow and like us:
0
http://bp9news.com/wp-content/uploads/2018/06/dvg-1-tumgabhadra-12618-script.and-photo-1024x404.jpghttp://bp9news.com/wp-content/uploads/2018/06/dvg-1-tumgabhadra-12618-script.and-photo-150x150.jpgBP9 Bureauದಾವಣಗೆರೆಪ್ರಮುಖಹರಿಹರ :  ವರುಣನ ಕೃಪೆಯಿಂದ ಬತ್ತಿ ಹೋಗುತ್ತಿದ್ದ ತುಂಗಭದ್ರೆಯ ಒಡಲು ಈಗ ಜೀವ ತುಂಬಿ ಕಳೆಗಟ್ಟಿದೆ. ಮಳೆಯ ಕೆಂಪು ನೀರು ಕಣ್ಣಿಗೆ ಕುಕ್ಕುವಂತೆ ಆಕರ್ಷಣಿಯವಾಗಿ ಹರಿಯುತ್ತಿದೆ. ಹರಿಹರದ ತುಂಗಭದ್ರಾ ನದಿ ಸುತ್ತಲ ವಾತಾವರಣವೀಗ ನಯನ ಮನೋಹರವಾಗಿದೆ. ಪ್ರತಿದಿನ ಮುಸುಕಿದ ವಾತವರಣ, ಮಧ್ಯದಲ್ಲಿ ಸೂರ್ಯನ ಇಣುಕಾಟ,  ಇವುಗಳ ನಡುವೆ ಜಿಟಿ ಜಿಟಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಕೆರೆಕಟ್ಟೆಗಳು, ಹಳ್ಳ ಕೊಳ್ಳಗಳು ಜೀವ ಕಳೆಯಾದ ಹರಿಹರದ ತುಂಗಾಭದ್ರೆಯ ಮಡಿಲನ್ನು ಮೆಲ್ಲ ಮೆಲ್ಲನೆ ತುಂಬುತ್ತಿರುವುದು...Kannada News Portal