ದಾವಣಗೆರೆ : ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಎಸ್‍ಎನ್ ಎಲ್ ಟವರ್, ವೈಫೈಗಳ ಸೇವೆ ಜನರಿಗೆ ಉತ್ತಮವಾಗಿ ತಲುಪುವಂತೆ ಸೂಕ್ತ ವ್ಯವಸ್ಥೆಗೆ ಮುಂದಾಗಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಯಲ್ಲಿಂದು ನಡೆದ ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಇಂಡಿಯಾದ ಮೇಲೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಆನ್ ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಬಿಎಸ್‍ಎನ್‍ಎಲ್ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಉತ್ತಮ ಸೇವೆ ಸಿಗುವಂತೆ ಅಧಿಕಾರಿಗಳು ತಕ್ಷಣ ಕಾರ್ಯನಿರ್ವಹಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋದರು ಸಹ ವೈಫೈ ಹಾಗೂ ಬಿಎಸ್‍ಎನ್‍ಎಲ್ ನೆಟ್ ವರ್ಕ್ ಸಿಗುತ್ತಿಲ್ಲ, ಏನು ಕೆಲಸ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಳೆ ಬರಲಿ ಇಲ್ಲದೆ ಇರಲಿ ಬರವಿದ್ದರು ಅಧಿಕಾರಿಗಳಿಗೆ  ಸರ್ಕಾರದಿಂದ ತಪ್ಪದೇ ಸಂಬಳ ಮಾತ್ರ ಬರುತ್ತದೆ. ಆದರೆ ಜನರಿಗೆ ಕೆಲಸಗಳು ಆಗದಿದ್ದರೆ ನಾವೇನು ಉತ್ತರ ನೀಡಬೇಕು ಎಂದು ಹರಿಹಾಯ್ದರು. ಅದಕ್ಕೆ ಉತ್ತರಿಸಿದ ಬಿಎಸ್‍ಎನ್‍ಎಲ್ ಸದಸ್ಯರೊಬ್ಬರು ಬಿಎಸ್‍ಎನ್‍ಎಲ್ 2 ಜಿ ಇರುವುದರಿಂದ ಸಮಸ್ಯೆಯಾಗುತ್ತಿದೆ. 3ಜಿಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಡಲಾಗಿದೆ ಎಂದು ಸಮರ್ಥನೆ ನೀಡಿದರು.

ನಂತರ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಏನೇ ಸಮಸ್ಯೆಗಳಿದ್ದರು ಸಹ ನಮಗೆ ಲಿಖಿತದ ಮೂಲಕ ತಿಳಿಸಿ ನಾವು ಕ್ರಮಕೈಗೊಳ್ಳುತ್ತೇವೆ. ಇಲಾಖೆಗೆ ಕಳುಹಿಸುವ ಒಂದು ಮನವಿ ಕಾಪಿಯನ್ನು ನಮಗೂ ಸಹ ಕಳುಹಿಸಿ ಆಗ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮಂತ್ರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು. ಮತ್ತೊಬ್ಬ ಸದಸ್ಯ ಮಾತನಾಡಿ, ಬಿಎಸ್‍ಎನ್‍ಎಲ್ ಟವರ್ ನಲ್ಲಿ ಶೇ. 75 ರಷ್ಟು ಜಿಯೋ ಕಂಪನಿ ಟಯಪ್ ಆಗಿದೆ. ಹಾಗಾಗಿ ಬಿಎಸ್‍ಎನ್‍ಎಲ್ ನೆಟ್ ವರ್ಕ್ ಕಡಿಮೆಯಾಗಿದೆ. ಬಾಡಿಗೆ ಇರುವವರು ಚೆನ್ನಗಿದ್ದಾರೆ. ಆದರೆ ಮನೆಯ ಮಾಲೀಕರೇ ಸೊರಗುತ್ತಿರುವ ಪರಿಸ್ಥಿತಿ ಇದೆ ಎಂದು ಹೇಳಿದರು. ಸಭೆಯಲ್ಲಿ ಜನರಲ್ ಮ್ಯಾನೇಜರ್ ಉಪೇಂದ್ರ ತಿವಾರಿ ಸೇರಿದಂತೆ ಅಧಿಕಾರಿಗಳು ಇದ್ದರು.

 

Please follow and like us:
0
http://bp9news.com/wp-content/uploads/2018/07/BSNL-1-696x400.jpghttp://bp9news.com/wp-content/uploads/2018/07/BSNL-1-696x400-150x150.jpgBP9 Bureauಚಿತ್ರದುರ್ಗದಾವಣಗೆರೆದಾವಣಗೆರೆ : ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಎಸ್‍ಎನ್ ಎಲ್ ಟವರ್, ವೈಫೈಗಳ ಸೇವೆ ಜನರಿಗೆ ಉತ್ತಮವಾಗಿ ತಲುಪುವಂತೆ ಸೂಕ್ತ ವ್ಯವಸ್ಥೆಗೆ ಮುಂದಾಗಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಯಲ್ಲಿಂದು ನಡೆದ ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಇಂಡಿಯಾದ ಮೇಲೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಆನ್ ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಬಿಎಸ್‍ಎನ್‍ಎಲ್...Kannada News Portal