ದಾವಣಗೆರೆ : ನಗರದ ಡಿಸಿಎಂ ಟೌನ್ ಶಿಪ್ ಬಳಿಯ ರೈಲ್ವೆ ಕೆಳಸೇತುವೆಯ ಡಬ್ಲಿಂಗ್ ಕಾಮಗಾರಿ ಸಮರ್ಪಕವಾಗಿ ನಡೆಸಬೇಕಾಗಿದೆ. ಮಳೆಗಾಲ ಆರಂಭವಾಗಿದ್ದು, ಜನರಿಗೆ ತೊಂದರೆಯಾಗದಂತೆ ಶೀಘ್ರದಲ್ಲಿ ಕಾಮಗಾರಿ ನಿರ್ವಹಿಸಬೇಕೆಂದು  ಸಂಸದ ಜಿ.ಎಂ.ಸಿದ್ದೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಬೆಳಗ್ಗೆ ಅವರು ನಗರದ ಡಿಸಿಎಂ ಟೌನ್ ಶಿಪ್ ಬಳಿಯ ರೈಲ್ವೆ ಕೆಳಸೇತುವೆಯ ರೈಲ್ವೆ ಡಬ್ಲಿಂಗ್ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕಾಮಗಾರಿ ಹಿಂದೆ ಯುಪಿಎ ಸರ್ಕಾರವಿದ್ದಾಗ ಪ್ರಾರಂಭ ಮಾಡಲಾಗಿತ್ತು. ಆದರೆ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಮಾರ್ಗ ಡಬ್ಲಿಂಗ್ ಮಾಡಲು ವಿಸ್ತರಣೆಗೆ ಕೇಂದ್ರಕ್ಕೆ ಪತ್ರ ಬರೆದಿದ್ದೆ. ಎರಡು ಮಾರ್ಗ ಡಬ್ಲಿಂಗ್ ಗೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಮಾರ್ಗದಲ್ಲಿ ಬಂದಿರುವ ಡ್ರೈನೇಜ್ ಅವೈಜ್ಞಾನಿಕವಾಗಿದೆ. ಇಲ್ಲಿ ರಾಡ್ ಗಳು ಎದ್ದಿದ್ದು, ತೊಂದರೆಯಾಗುತ್ತಿದೆ.

ಮಳೆಗಾಲವಾದ್ದರಿಂದ ನೀರು ನಿಂತು ಜನಸಂಚಾರಕ್ಕೆ ಅನಾನುಕೂಲವಾಗಿದೆ. ಅದಕ್ಕಾಗಿ ಸ್ಥಳಕ್ಕೆ ಇಂಜಿನಿಯರ್ ಕರೆಸಿದ್ದೇನೆ. ಇದರ ಜೊತೆ ಮಾಯಕೊಂಡದಿಂದ ಬರುವ ರೈಲ್ವೆ ಗೇಟ್, ಹರಿಹರದಲ್ಲಿ ಪ್ಲೈಓವರ್ ನಿರ್ಮಾಣಕ್ಕೆ ಮುಂದಾಗಲಿದ್ದೇವೆ. ಹರಿಹರದ ಅಮರಾವತಿ ಕಾಲೋನಿಯವರೆಗೆ ಸಂಚರಿಸಲು ಅನುಕೂಲವಾಗುವಂತೆ ಕ್ರಮವಹಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವಂತೆ ನಡೆದುಕೊಳ್ಳಬೇಕು. ಜನರಿಗಾಗಿ ಉತ್ತಮ ಕಾರ್ಯಗಳನ್ನು ರೂಪಿಸಿದರೆ ಸಂತೋಷ. ಆದರೆ ಅವರುಗಳು ಈಗ ಖಾತೆಗಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಮುಂದೆ ಮೈತ್ರಿ ಉಳಿಯುವ ಖಾತರಿ ಇಲ್ಲ ಎಂದರು. ಇನ್ನು ಐದಾರು ತಿಂಗಳಲ್ಲಿ ಪಾಲಿಕೆ ಚುನಾವಣೆ ಇದೆ. ಈ ಬಾರಿ ಬಿಜೆಪಿ ಗೆಲ್ಲಲಿದೆ. ಮತ್ತೊಮ್ಮೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯವರೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು.

ಇಂಜಿನಿಯರ್ ವಿರುದ್ದ ಹರಿಹಾಯ್ದ ಸಂಸದರು

ಡಿಸಿಎಂ ಟೌನ್ ಶಿಪ್ ಬಳಿಯ ಸೇತುವೆ ಕೆಳಭಾಗದಲ್ಲಿ ರಸ್ತೆ ಕಾಮಗಾರಿ ಎರಡು ತಿಂಗಳೊಳಗಾಗಿ ಪೂರೈಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಇಂಜಿನಿಯರೊಬ್ಬರು ರಸ್ತೆ ನಿರ್ಮಾಣಕ್ಕಾಗಿ ಏಜೆನ್ಸಿಗೆ ನೀಡುವುದಾಗಿ ಹೇಳಿದಾಗ ಹರಿಹಾಯ್ದ ಸಂಸದರು ಇದಕ್ಕೆಲ್ಲಾ ಏಜೆನ್ಸಿಯವರಿಗೆ ಹೇಳುವ ಅವಶ್ಯಕತೆ ಇಲ್ಲ. ನೀವೇ ನಿಂತು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಜವಾಬ್ದಾರಿ ವಹಿಸಿ ಎಂದು ಗರಂ ಆದರು. ಮಳೆಗಾಲ ಆರಂಭವಾಗಿದೆ. ರಸ್ತೆ ಮೇಲೆಲ್ಲಾ ನೀರು ನಿಲ್ಲುತ್ತಿದೆ. ಹೀಗಿದ್ದಾಗ ಜನರು ಸಂಚರಿಸುವುದು ಹೇಗೆ ಸಾಧ್ಯ. ಇನ್ನೆರಡು ತಿಂಗಳೊಳಗಾಗಿ ರಸ್ತೆ ಕಾಮಗಾರಿ ಪೂರೈಸಿ ಎಂದು ಸೂಚಿಸಿದರು.  ನಂತರ ಮಾತನಾಡಿದ ಇಂಜಿನಿಯರ್ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಬೇಕು. ಈ ಭಾಗದ ಡ್ರೈನೇಜ್ ನೀರು ಚರಂಡಿ ಮೂಲಕ ಹರಿದು ಹೋಗಲು ವ್ಯವಸ್ಥೆ ಮಾಡಬೇಕಿದೆ ಎಂದಾಗ ಸಮಸ್ಯೆ ಬಗೆಹರಿಸಲು ಆಯುಕ್ತರೊಂದಿಗೆ ಸಭೆ ನಡೆಸಿ. ಸಭೆಗೆ ನಾನು ಸಹ ಬರುತ್ತೇನೆ ಪರ್ಯಾಯ ಮಾರ್ಗ ಮಾಡುವ ಅವಶ್ಯಕತೆ ಇದೆ ಎಂದು ಸಂಸದರು ತಿಳಿಸಿದರು.

 

Please follow and like us:
0
http://bp9news.com/wp-content/uploads/2018/06/dvg-2-dcm-kamagari-5618-script.and-photo-1.jpghttp://bp9news.com/wp-content/uploads/2018/06/dvg-2-dcm-kamagari-5618-script.and-photo-1-150x150.jpgBP9 Bureauದಾವಣಗೆರೆದಾವಣಗೆರೆ : ನಗರದ ಡಿಸಿಎಂ ಟೌನ್ ಶಿಪ್ ಬಳಿಯ ರೈಲ್ವೆ ಕೆಳಸೇತುವೆಯ ಡಬ್ಲಿಂಗ್ ಕಾಮಗಾರಿ ಸಮರ್ಪಕವಾಗಿ ನಡೆಸಬೇಕಾಗಿದೆ. ಮಳೆಗಾಲ ಆರಂಭವಾಗಿದ್ದು, ಜನರಿಗೆ ತೊಂದರೆಯಾಗದಂತೆ ಶೀಘ್ರದಲ್ಲಿ ಕಾಮಗಾರಿ ನಿರ್ವಹಿಸಬೇಕೆಂದು  ಸಂಸದ ಜಿ.ಎಂ.ಸಿದ್ದೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಬೆಳಗ್ಗೆ ಅವರು ನಗರದ ಡಿಸಿಎಂ ಟೌನ್ ಶಿಪ್ ಬಳಿಯ ರೈಲ್ವೆ ಕೆಳಸೇತುವೆಯ ರೈಲ್ವೆ ಡಬ್ಲಿಂಗ್ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕಾಮಗಾರಿ ಹಿಂದೆ ಯುಪಿಎ ಸರ್ಕಾರವಿದ್ದಾಗ ಪ್ರಾರಂಭ ಮಾಡಲಾಗಿತ್ತು. ಆದರೆ...Kannada News Portal